ಮುಖ್ಯ ಪುಟ > ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಲಿಯ ಕೊಯಿಕಲ್ ಅಯ್ಯಪ್ಪ ಸ್ವಾಮಿ ಮಂದಿರ
WD
ಶಬರಿಮಲೆ ದೇವಳದಲ್ಲಿ ವಿರಾಜಮಾನವಾಗಿರುವ ಭಗವಾನ್ ಅಯ್ಯಪ್ಪ ಪಂದಳ ರಾಜನ ಪುತ್ರನಾಗಿದ್ದನೆಂದು ಪ್ರತೀತಿಯಿದೆ. ಅಚೆನ್‌ಕೊವಿಲ್ ನದಿ ದಂಡೆಯ ಮೇಲೆ ತನ್ನ ಅರಮನೆಗೆ ಸಮೀಪದಲ್ಲಿ ಪಂದಳ ರಾಜ ಶಬರಿಮಲೆ ಮಂದಿರದ ಮಾದರಿಯಲ್ಲಿ ದೇವಸ್ಥಾನ ಕಟ್ಟಿಸಿದ್ದು, ಅದು ಈಗಿನ ವಲಿಯ ಕೊಯಿಕಲ್ ದೇವಸ್ಥಾನವಾಗಿದೆ.ಅಯ್ಯಪ್ಪ ಇಲ್ಲಿ ತನ್ನ ಯೌವನದ ದಿನಗಳನ್ನು ಕಳೆದಿದ್ದರಿಂದ ಇಂದಿಗೂ ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಪಂದಳ ಅಸಂಖ್ಯಾತ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.

ಮಕರವಿಳಕ್ಕು ದಿನದಂದು ಶಬರಿಮಲೆ ಅಯ್ಯಪ್ಪನ ಮೂರ್ತಿಯನ್ನು ಅಲಂಕರಿಸುವ ಅಯ್ಯಪ್ಪ ದೇವರ ಪವಿತ್ರ ಒಡವೆಗಳನ್ನು ಪಂದಳ ಅರಮನೆಯಲ್ಲಿ ಇಡಲಾಗುತ್ತದೆ. ಮಕರವಿಳಕ್ಕುಗೆ 2 ತಿಂಗಳ ಮುಂಚೆ ಈ ಒಡವೆಗಳ ಪೆಟ್ಟಿಗೆಯನ್ನು ಭಕ್ತಾದಿಗಳ ಪೂಜೆ ಸಲುವಾಗಿ ತೆರೆಯಲಾಗುತ್ತದೆ. ಮಕರವಿಳಕ್ಕು ಆರಂಭಕ್ಕೆ ಮೂರು ದಿನಗಳು ಮುಂಚಿತವಾಗಿ ಒಡವೆಗಳನ್ನು ಪಂಡಲಂನಿಂದ ಶಬರಿಮಲೆಗೆ ಮೆರವಣಿಗೆಯಲ್ಲಿ ತೆಗೆದುಕೊಂಡುಹೋಗಲಾಗುತ್ತದೆ. ಆಕಾಶದಿಂದ ಹದ್ದೊಂದು ಪ್ರತ್ಯಕ್ಷವಾಗಿ ಮೆರವಣಿಗೆಗೆ ಬೆಂಗಾವಲಾಗಿರುತ್ತದೆ. ಶಬರಿಮಲೆ ಭಕ್ತರು ಇದನ್ನು ದೇವರ ಪವಾಡವೆಂದು ಭಾವಿಸಿದ್ದಾರೆ.

ಪಂದಳ ರಾಜಮನೆತನದ ಹಿರಿಯ ಸದಸ್ಯ ಒಡವೆಗಳ ಮೆರವಣಿಗೆಗೆ ಬೆಂಗಾವಲಾಗಿರುತ್ತಾರೆ.
WD
ಪಂದಳ ವಲಿಯ ಕೊಯ್ಕಲ್ ಸಾಸ್ಥಾ ಮಂದಿರದಿಂದ ಜ.12ಕ್ಕೆ ಮಧ್ಯಾಹ್ನ 1 ಗಂಟೆಗೆ ಆರಂಭವಾಗುವ ತಿರುವಾಭರಣಂ ಮೆರವಣಿಗೆ ಬೆಂಗಾವಲಿಗೆ ತಿರುವಾತಿರಾನಲ್ ರಾಘವ ವರ್ಮಾ ರಾಜಾ ಅವರು ರಾಜಮನೆತನದ ಪ್ರತಿನಿಧಿಯಾಗಿರುತ್ತಾರೆ.


ಪೌರಾಣಿಕ ಕಥೆ

ಅಯ್ಯಪ್ಪ ದೇವರ ಬಗ್ಗೆ ಅನೇಕ ಕಥೆಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಸ್ವೀಕಾರಾರ್ಹ ಕಥೆಯು ಅಯ್ಯಪ್ಪ ಮಾನವಸ್ವರೂಪಿಯಾಗಿ ಪಂಡಲಂ ರಾಜನ ಪುತ್ರನಾಗಿದ್ದನು ಎನ್ನುವುದು. ಆ ಕಾಲದಲ್ಲಿ ರಾಜಾ ರಾಜಶೇಖರ ಪಂದಳ ರಾಜ್ಯವನ್ನು ಆಳುತ್ತಿದ್ದನು,
ವೀಡಿಯೋ ವೀಕ್ಷಿಸಿ
  1 | 2 | 3  >> 
ಫೋಟೋಗ್ಯಾಲರಿ
ವಲಿಯ ಕೊಯಿಕಲ್ ಮಂದಿರ ಫೋಟೋ ಗ್ಯಾಲರಿ
ಮತ್ತಷ್ಟು
ಮಾನಸ ಸರೋವರ ಯಾತ್ರೆ  
ಮುಟ್ಟಮ್‌ನ ಸೆಂಟ್ ಮೇರಿ ಚರ್ಚ್  
ಮಸೀದಿಗಳ ಕಿರೀಟ ತಾಜುಲ್ ಮಸೀದಿ  
ಪವಾಗಢದ ಶಕ್ತಿಪೀಠ  
ವಿಜಯವಾಡದ ತ್ರಿಶಕ್ತಿ ಪೀಠ  
ಡಾಕೋರ್‌ನ ರಣಛೋಡ್‌ರಾಯಜಿ ಮಂದಿರ