WD ಶಬರಿಮಲೆ ದೇವಳದಲ್ಲಿ ವಿರಾಜಮಾನವಾಗಿರುವ ಭಗವಾನ್ ಅಯ್ಯಪ್ಪ ಪಂದಳ ರಾಜನ ಪುತ್ರನಾಗಿದ್ದನೆಂದು ಪ್ರತೀತಿಯಿದೆ. ಅಚೆನ್ಕೊವಿಲ್ ನದಿ ದಂಡೆಯ ಮೇಲೆ ತನ್ನ ಅರಮನೆಗೆ ಸಮೀಪದಲ್ಲಿ ಪಂದಳ ರಾಜ ಶಬರಿಮಲೆ ಮಂದಿರದ ಮಾದರಿಯಲ್ಲಿ ದೇವಸ್ಥಾನ ಕಟ್ಟಿಸಿದ್ದು, ಅದು ಈಗಿನ ವಲಿಯ ಕೊಯಿಕಲ್ ದೇವಸ್ಥಾನವಾಗಿದೆ.ಅಯ್ಯಪ್ಪ ಇಲ್ಲಿ ತನ್ನ ಯೌವನದ ದಿನಗಳನ್ನು ಕಳೆದಿದ್ದರಿಂದ ಇಂದಿಗೂ ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಪಂದಳ ಅಸಂಖ್ಯಾತ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.ಮಕರವಿಳಕ್ಕು ದಿನದಂದು ಶಬರಿಮಲೆ ಅಯ್ಯಪ್ಪನ ಮೂರ್ತಿಯನ್ನು ಅಲಂಕರಿಸುವ ಅಯ್ಯಪ್ಪ