WD ಶ್ರೀ ಸಾಯಿಬಾಬಾ ಭಾರತದಲ್ಲೇ ಎಂದೂ ಕಂಡಿರದ ಮಹಾನ್ ಸಂತರಲ್ಲಿ ಒಬ್ಬರೆಂದು ಹೆಸರುಗಳಿಸಿದ್ದು, ಅತ್ಯದ್ಭುತ ಶಕ್ತಿಗಳಿಂದ ಕೂಡಿ ದೇವರ ಅವತಾರ ಎಂದು ಪೂಜಿಸಲ್ಪಡುತ್ತಾರೆ.(ಸಾಯಿ ಎಂದರೆ ಸಾಕ್ಷಾತ್ ಈಶ್ವರ ಎಂದೇ ಅರ್ಥ). ಈ ನಿಗೂಢ ಫಕೀರ ಶಿರ್ದಿಯಲ್ಲಿ ಯುವಕನಾಗಿ ಪ್ರತ್ಯಕ್ಷನಾಗಿ ಜೀವಮಾನವಿಡೀ ಅಲ್ಲೆ ನೆಲೆಸಿದರು. ಅವರನ್ನು ಭೇಟಿ ಮಾಡಿದ ಭಕ್ತಾದಿಗಳ ಜೀವನವನ್ನೇ ಪರಿವರ್ತಿಸಿದರು. 1918ರಲ್ಲಿ ಅವರು ಸಮಾಧಿಯಾದ ನಂತರವೂ ಅವರ ಪ್ರೀತಿಯಿಂದ ಪುಳಕಿತರಾದ, ಸಂಕಷ್ಟದ ಸಂದರ್ಭದಲ್ಲಿ ಅವರನ್ನು ಪ್ರಾರ್ಥಿಸಿ ಅವರ ಆಶೀರ್ವಾದಕ್ಕಾಗಿ