ಮುಖ್ಯ ಪುಟ > ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾವನ್‌ಗಜದ ಜೈನ ಸಿದ್ಧ ಕ್ಷೇತ್ರ
WD
ಮಹಾ ಮಸ್ತಕಾಭಿಷೇಕ: ಬಾವನ್‌ಗಜದ ಭಗವಾನ್ ಆದಿನಾಥನಿಗೆ 17 ವರ್ಷಗಳ ಬಳಿಕ ಮಹಾ ಮಸ್ತಕಾಭಿಷೇಕ ನೆರವೇರಿಸಲಾಗುತ್ತಿದೆ. 2008 ಜನವರಿ 20ರಿಂದ ಆರಂಭಗೊಂಡು ಫೆ.4ರವರೆಗೆ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಸಂದರ್ಭ ಲಕ್ಷಾಂತರ ಜೈನ ಧರ್ಮೀಯರು ಕ್ಷೇತ್ರಕ್ಕೆ ಭೇಟಿ ನೀಡಿ ಭಗವಾನ್ ಆದಿನಾಥನನ್ನು ಮನತುಂಬಿಸಿಕೊಂಡು ಪುನೀತರಾಗಿದ್ದಾರೆ.

ಕ್ಷೀರ, ಜಲ ಮತ್ತು ಕೇಸರಿ ಅಭಿಷೇಕ ನಡೆದ ಬಳಿಕ ದುಗ್ಧಾಭಿಷೇಕ ಸಂದರ್ಭದಲ್ಲಿ ಇಡೀ ವಾತಾವರಣವೇ ಭಕ್ತಿಯಿಂದ ತುಂಬಿ ಹೋಗಿದ್ದು, ಭಕ್ತಾದಿಗಳು ಭಕ್ತಿಯ ಹಾಡಿನೊಂದಿಗೆ ನರ್ತಿಸುತ್ತಿದ್ದುದು ಸಾಮಾನ್ಯವಾಗಿತ್ತು.

WD
ಇದೇ ವೇಳೆ ಕೇಸರಿ ಅಭಿಷೇಕವು ವಿಗ್ರಹದ ಬಣ್ಣವನ್ನೇ ಬದಲಾಯಿಸಿದಂತಿತ್ತು. ಅಲ್ಲಿ ಭಕ್ತಿ, ನಂಬಿಕೆ, ಶ್ರದ್ಧೆ ಮೇಳೈಸಿತ್ತು. ಬೆಟ್ಟ ಪ್ರದೇಶವಾದುದರಿಂದ ಬೆಟ್ಟ ಗುಡ್ಡಗಳಿಂದಲೇ ಬುಡಕಟ್ಟು ಜನರು ಈ ಭಕ್ತಿಯ ಪರಾಕಾಷ್ಠೆಯ ಕ್ಷಣಗಳನ್ನು ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರಕೃತಿ ಸೌಂದರ್ಯ: ಬಾವನ್‌ಗಜಕ್ಕೆ ತಲುಪುವ ಮಾರ್ಗವಂತೂ ಅತ್ಯಂತ ಸುಂದರ ಮತ್ತು ರಮಣೀಯ. ಸುಂದರ ಬೆಟ್ಟಗಳ ನಡುವಿನ ಅಂಕು ಡೊಂಕಿನ ಮಾರ್ಗವಂತೂ ಕಣ್ಣಿಗೆ ಆನಂದದಾಯಕ. ಮಳೆಗಾಲದಲ್ಲಿ ಈ ಪರ್ವತ ಪ್ರದೇಶವು ಹಚ್ಚ ಹಸುರಿನಿಂದ ಕಂಗೊಳಿಸುತ್ತಾ ನೋಡುಗರ ಕಣ್ಣಿಗೆ ಹಬ್ಬವಾಗುತ್ತದೆ.

ಹೇಗೆ ತಲುಪುವುದು:

ಮಧ್ಯಪ್ರದೇಶದ ಇಂದೋರ್‌ನಿಂದ (155 ಕಿ.ಮೀ.) ಹಾಗೂ ಖಾಂಡ್ವಾದಿಂದ (180 ಕಿ.ಮೀ.) ಬಸ್ ಮತ್ತು ಟ್ಯಾಕ್ಸಿ ಸೌಲಭ್ಯವಿದೆ.

ಸಮೀಪದ ವಿಮಾನ ನಿಲ್ದಾಣ: ದೇವಿ ಅಹಿಲ್ಯಾ ವಿಮಾನ ನಿಲ್ದಾಣ, ಇಂದೋರ್

ಸಮೀಪದ ರೈಲು ನಿಲ್ದಾಣ: ಇಂದೋರ್, ಖಾಂಡ್ವಾ.

ಉಳಿದುಕೊಳ್ಳುವುದೆಲ್ಲಿ: ಕಣಿವೆಯಲ್ಲೇ ಸುಮಾರು 50 ಕೊಠಡಿಗಳುಳ್ಳ 6 ಧರ್ಮಶಾಲೆಗಳಿವೆ. ಬಾವನ್‌ಗಜದಿಂದ 8 ಕಿ.ಮೀ. ದೂರದಲ್ಲಿರುವ ಬಾರ್ವಾನಿಯಲ್ಲಿ ಪ್ರತಿಯೊಬ್ಬರ ಬಜೆಟ್‌ಗೆ ಅನುಕೂಲವಾಗಿರುವ ವಸತಿ ಸೌಲಭ್ಯಗಳು ದೊರೆಯುತ್ತವೆ.
ವೀಡಿಯೋ ವೀಕ್ಷಿಸಿ
<< 1 | 2 
ಮತ್ತಷ್ಟು
ಏಳು ಬೆಟ್ಟದೊಡೆಯ ಶ್ರೀ ವೆಂಕಟೇಶ  
ಶಿರ್ಡಿ ಸಾಯಿಬಾಬಾ ಮಂದಿರ  
ಜೈನ ಪುಣ್ಯಕ್ಷೇತ್ರ ಮೋಹನ್‌ಖೇಡಾ  
ವಲಿಯ ಕೊಯಿಕಲ್ ಅಯ್ಯಪ್ಪ ಸ್ವಾಮಿ ಮಂದಿರ  
ಮಾನಸ ಸರೋವರ ಯಾತ್ರೆ  
ಮುಟ್ಟಮ್‌ನ ಸೆಂಟ್ ಮೇರಿ ಚರ್ಚ್