ಮುಖ್ಯ ಪುಟ > ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀದೇವಿ ಸರಸ್ವತಿಯ ಐತಿಹಾಸಿಕ ಮಂದಿರ- ಭೋಜಶಾಲಾ
WD
ಐತಿಹಾಸಿಕ ನಗರಿ ಧಾರ್‌ನಲ್ಲಿ ಪ್ರತಿ ವರ್ಷ ವಸಂತ ಪಂಚಮಿ ಅತ್ಯಂತ ವಿಶೇಷವಾದುದು. ಸಾವಿರಾರು ಭಕ್ತರು ಅಂದು ಭೋಜಶಾಲಾದ ಸರಸ್ವತಿ ಮಾತೆಯ ದರ್ಶನಕ್ಕಾಗಿ ಇಲ್ಲಿಗೆ ಸಾಲುಗಟ್ಟಿ ಬರುತ್ತಾರೆ. ವಸಂತ ಪಂಚಮಿಯಂದು ನಡೆಯುವ ಯಜ್ಞ ಯಾಗಾದಿ ಧಾರ್ಮಿಕ ಕಾರ್ಯಗಳು ಈ ಸ್ಥಳದ ಗತ ವೈಭವವನ್ನು ನೆನಪಿಸುತ್ತದೆ.

ಭೋಜಶಾಲಾ ಎಂಬುದು ಪಾರಮಾರ ರಾಜಮನೆತನದ ಅದ್ಭುತ ಶಿಲ್ಪಕಲಾ ವೈಭವಕ್ಕೆ ಸಾಕ್ಷಿ. ಈ ಬಾರಿ ವಸಂತ ಪಂಚಮಿ ಫೆ.11ರಂದು ಸೋಮವಾರ ನಡೆಯುತ್ತಿದ್ದು, ಭಕ್ತರು ಭಕ್ತಿ ಶ್ರದ್ಧೆಗಳಿಂದ ಪಾಲ್ಗೊಳ್ಳುತ್ತಿದ್ದಾರೆ.

ಇತಿಹಾಸಗಳು ಹೇಳುವ ಪ್ರಕಾರ, ಧಾರ್‌ನ ರಾಜ ಭೋಜನು ಸರಸ್ವತಿಯ ಕಟ್ಟಾ ಆರಾಧಕ. ಆತನ ಆಳ್ವಿಕೆಯ ಕಾಲದಲ್ಲಿ ಸರಸ್ವತಿ ಆರಾಧನೆಗೆ ವಿಶೇಷ ಮಹತ್ವವಿತ್ತು. ಆತನ ರಾಜ್ಯದಲ್ಲಿ ಜನಸಾಮಾನ್ಯರು ಕೂಡ ಸಂಸ್ಕೃತದ ಮೇಲೆ ಹಿಡಿತ ಸಾಧಿಸಿದ್ದರು ಮತ್ತು ಧಾರ್ ಎಂಬುದು ಸಂಸ್ಕೃತ ಅಧ್ಯಯನ, ಕಲೆ ಮತ್ತು ಸಂಸ್ಕೃತಿಯ ನೆಲೆವೀಡಾಗಿತ್ತು.

WD
ಸರಸ್ವತಿಯ ಕೃಪಾಕಟಾಕ್ಷದಿಂದಾಗಿ ರಾಜ ಭೋಜನು ಕೂಡ ಯೋಗ, ಸಾಂಖ್ಯ, ನ್ಯಾಯ, ಜ್ಯೋತಿಷ್ಯ, ವಾಸ್ತು ಶಾಸ್ತ್ರ ಮತ್ತು ರಾಜಕೀಯದ ಪ್ರಕಾಂಡ ಪಂಡಿತನಾಗಿದ್ದನು. ರಾಜ ಭೋಜ ಬರೆದ ಗ್ರಂಥಗಳು ಇಂದಿಗೂ ಪ್ರಯೋಜನಕಾರಿ.

ಕ್ರಿ.ಶ.1000ರಿಂದ 1055ರ ಅವಧಿಯಲ್ಲಿ ರಾಜ ಭೋಜನು ಇಲ್ಲಿ ಆಳ್ವಿಕೆ ನಡೆಸಿದ್ದನೆಂದು ನಂಬಲಾಗಿದೆ. ಆತ ಉನ್ನತ ಅಧ್ಯಯನ ಕೇಂದ್ರವೊಂದನ್ನು ಸ್ಥಾಪಿಸಿದ್ದು, ಬಳಿಕ ಅದು ಭೋಜಶಾಲಾ ಎಂದು ಕರೆಯಲ್ಪಟ್ಟಿತು. ಅಂದಿನ ಕಾಲದ ಸಾಹಿತ್ಯ ಗ್ರಂಥಗಳು ಧಾರ್ ಮತ್ತು ಪ್ರಾಚೀನ ವೈಭವದ ಬಗ್ಗೆ ಸಾರಿ ಹೇಳುತ್ತವೆ.

ಶಿಲ್ಪಕಲಾ ವೈಭವ:

ಭೋಜಶಾಲಾ ನೋಡಲು ಅತ್ಯಂತ ಆಕರ್ಷಕವಾಗಿದೆ. ಪ್ರಾರ್ಥನಾ ಗೃಹ, ಕಂಬಗಳು, ಮೇಲ್ಚಾವಣಿಗಳೆಲ್ಲಾ ಅಂದಿನ ಕಲಾ ನೈಪುಣ್ಯವನ್ನು ಪ್ರದರ್ಶಿಸುತ್ತವೆ. ಅಲ್ಲಿ ಎರಡು ಶಿಲಾಶಾಸನಗಳಿದ್ದು, ಅವುಗಳಲ್ಲಿ ಅಚ್ಚ ಶಾಸ್ತ್ರೀಯ ಸಂಸ್ಕೃತದಲ್ಲಿ ನಾಟಕವೊಂದನ್ನು ಕೆತ್ತಲಾಗಿದೆ.
ವೀಡಿಯೋ ವೀಕ್ಷಿಸಿ
1 | 2  >>  
ಫೋಟೋಗ್ಯಾಲರಿ
ಭೋಜಶಾಲಾದ ಫೋಟೋ ಗ್ಯಾಲರಿ ಇಲ್ಲಿದೆ
ಮತ್ತಷ್ಟು
ಬಾವನ್‌ಗಜದ ಜೈನ ಸಿದ್ಧ ಕ್ಷೇತ್ರ  
ಏಳು ಬೆಟ್ಟದೊಡೆಯ ಶ್ರೀ ವೆಂಕಟೇಶ  
ಶಿರ್ಡಿ ಸಾಯಿಬಾಬಾ ಮಂದಿರ  
ಜೈನ ಪುಣ್ಯಕ್ಷೇತ್ರ ಮೋಹನ್‌ಖೇಡಾ  
ವಲಿಯ ಕೊಯಿಕಲ್ ಅಯ್ಯಪ್ಪ ಸ್ವಾಮಿ ಮಂದಿರ  
ಮಾನಸ ಸರೋವರ ಯಾತ್ರೆ