ಅರ್ಜುನ ವರ್ಮ ದೇವನ ಕಾಲದಲ್ಲಿ ಇವುಗಳನ್ನು ಕೆತ್ತಲಾಗಿದ್ದು, ಈ ನಾಟಕವನ್ನು ಬರೆದವನು ರಾಜಗುರು ಮದನ. ಪ್ರತಿವರ್ಷ ವಸಂತ ಪಂಚಮಿಯಂದು ಈ ನಾಟಕವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
ಲಂಡನ್‌ನಲ್ಲಿ ವಾಗ್ದೇವಿ: ಒಂದು ಕಾಲದಲ್ಲಿ ಈ ತಾಣದಲ್ಲಿ ವಾಗ್ದೇವಿ (ಸರಸ್ವತಿ)ಯ ವಿಗ್ರಹವೊಂದಿತ್ತು. ಇದು ಬೃಹದಾಕಾರದಲ್ಲಿದ್ದು, ಆಕರ್ಷಕವಾಗಿತ್ತು. ಅದನ್ನು ಬ್ರಿಟಿಷರು ಇಂಗ್ಲೆಂಡಿಗೆ ಕೊಂಡೊಯ್ದಿದ್ದರು. ಅದೀಗ ಲಂಡನ್‌ನ ವಸ್ತು ಸಂಗ್ರಹಾಲಯದಲ್ಲಿದೆ. ಈಗ ವಸಂತ ಪಂಚಮಿಯಂದು ಭಕ್ತರು ಸರಸ್ವತಿಯ ತೈಲವರ್ಣ ಚಿತ್ರವನ್ನು ಪೂಜಿಸುತ್ತಾರೆ.
ಐತಿಹಾಸಿಕ ಹಿನ್ನೆಲೆಯಿರುವುದರಿಂದ ಪ್ರಾಚ್ಯವಸ್ತು ಇಲಾಖೆಯು ಈ ಕ್ಷೇತ್ರವನ್ನು ನೋಡಿಕೊಳ್ಳುತ್ತಿದೆ. ಕೇಂದ್ರ ಸರಕಾರದ ಆದೇಶದ ಪ್ರಕಾರ, ವರ್ಷದಲ್ಲಿ ಒಂದು ದಿನ, ಅಂದರೆ ವಸಂತ ಪಂಚಮಿಯಂದು ಹಿಂದೂಗಳಿಗೆ ಇಲ್ಲಿ ದೇವಿಯನ್ನು ಪೂಜಿಸಲು ಅವಕಾಶವಿದೆ. ಅಂತೆಯೇ ಪ್ರತೀ ಮಂಗಳವಾರದಂದು ಭಕ್ತರಿಗೆ ಪುಷ್ಪ ಮತ್ತು ಅಕ್ಷತೆ ಅರ್ಚನೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.
ಹೋಗುವುದು ಹೇಗೆ? ರಸ್ತೆ ಮಾರ್ಗ: ಇಂದೋರ್‌ನಿಂದ 60 ಕಿ.ಮೀ. ಹಾಗೂ ರತ್ಲಾಮ್‌ನಿಂದ 62 ಕಿ.ಮೀ. ದೂರವಿರುವ ಭೋಜಶಾಲಾಕ್ಕೆ ಬಸ್, ಟ್ಯಾಕ್ಸಿ ಸೌಲಭ್ಯಗಳಿವೆ. ಸಮೀಪದ ರೈಲು ನಿಲ್ದಾಣ: ಇಂದೋರ್ ಹಾಗೂ ರತ್ಲಾಮ್ ಸಮೀಪದ ವಿಮಾನ ನಿಲ್ದಾಣ: ದೇವಿ ಅಹಿಲ್ಯಾ ವಿಮಾನ ನಿಲ್ದಾಣ, ಇಂದೋರ್
|