“वारणासितु भुवंत्र्या सरभूता ।। रम्य न्रिनाम सुगतिखील सॆव्यमना अत्रगता विविध दुश्क्रीतकारीणोपि ।। पापक्षये विराजसहाः सुमन प्रकाश ।। ” नारद पुराण ಸೌರಾಷ್ಟ್ರೆ ಸೋಮನಾಥಂ ಚಃ ಶ್ರೀಶೈಲೆ ಮಲ್ಲಿಕಾರ್ಜುನಃ ಉಜ್ಜೈನಮ್ ಮಹಾಕಾಲಮ್ ಓಂಕಾರೆ ಮಮಲೇಶ್ವರಮ ಹಿಮಾಲಯೇ ತು ಕೇದಾರಮ್ ಡಾಕಿನ್ಯಾಮ್ ಭೀಮಾಶಂಕರಮ್ ವಾರಣಾಸ್ಯಮ್ ಚಃ ವಿಶ್ವೇಶ್ವರಮ್ ತ್ರ್ಯಂಬಕಮ್ ಗೌತಮಿ ತಟೆ ಪರಲ್ಯಾಮ್ ವೈದ್ಯನಾಥಮ್ ಚಃ ನಾಗೇಶಮ್ ದಾರುಕಾವನೆ ಸೇತು ಬಂಧೆ ರಾಮೇಶಮ್ ಗೃಷ್ಣೇಶಮ್ ಚಃ ಶಿವಾಲಯೆ ||
ಶಿವನ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ಕುರಿತು ಈ ನಮ್ಮ ಧಾರ್ಮಿಕ ಕಥಾನಕದಲ್ಲಿ ಮೂಡಿ ಬರುತ್ತಿದೆ. ಪವಿತ್ರ ಭಾಗಿರಥಿ ನದಿಯ ಪಶ್ಚಿಮ ತಟದಲ್ಲಿ ಇರುವ ವಾರಣಾಸಿ ಇಲ್ಲವೆ ಕಾಶಿ ಜಗತ್ತಿನ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದು. ಮೇಲಾಗಿ ಭಾರತದ ಆದ್ಯಾತ್ಮಿಕ ಮತ್ತು ಸಾಂಸ್ಕೃತಿಕವನ್ನು ಪ್ರತಿಬಿಂಬಿಸುವ ಮಹಾನಗರ.
ಇದೇ ಮಹಾನಗರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ವಿಶ್ವನಾಥ ಲಿಂಗ ರೂಪದಲ್ಲಿ ನೆಲೆಸಿದ್ದಾನೆ. ಭಾರತದ ಆದ್ಯಾತ್ಮಿಕ ಇತಿಹಾಸದಲ್ಲಿ ವಿಶ್ವೇಶ್ವರನಿಗೆ ವಿಶಿಷ್ಟ ಸ್ಥಾನ ಇದೆ. ಅಬಾಲ ವೃದ್ದರಾದಿಯಾಗಿ ಕಾಶಿಗೆ ಬರಬೇಕು ವಿಶ್ವನಾಥನ ದರ್ಶನ ಪಡೆದು ಜೀವನ ಪಾವನವಾಗಬೇಕು ಎಂದು ಹಿಂದುಗಳು ಬೇಡಿಕೊಳ್ಳುತ್ತಾರೆ. ಅದೊಂದು ಹರಕೆಯ ಹಿಂದೆ ಜನನ ಮರಣಗಳಿಂದ ಮುಕ್ತಿ ನೀಡುವ ಮೋಕ್ಷದ ಬಯಕೆ ಇರುತ್ತದೆ.
ಗಂಗೆ ಅಥವಾ ಭಗಿರಥನಿಂದ ಧರೆಗೆ ಬಂದ ಭಾಗಿರಥಿಯಲ್ಲಿ ಮಿಂದು ಪಾವನರಾದರೆ ಸಾವು ನೋವುಗಳಿಂದ ಚಿರಕಾಲ ಮುಕ್ತಿ ಎನ್ನುವುದು ಹಿಂದುಗಳಲ್ಲಿ ನಂಬಿಕೆ ಇದೆ.
ಧಾರ್ಮಿಕ ನಂಬಿಕೆ ಈ ಭೂಮಿ ಹುಟ್ಟಿದ ನಂತರ ಸೂರ್ಯನ ಪ್ರಥಮ ಕಿರಣ ಬಿದ್ದಿದ್ದೆ ಕಾಶಿಯ ಮೇಲೆ ಎನ್ನುವುದು ನಂಬಿಕೆ. ಇದೇ ಕಾರಣದಿಂದ ಕಾಶಿ ಜ್ಞಾನದ, ಆದ್ಯಾತ್ಮದ ತವರೂರು ಆಯಿತು. ಕೈಲಾಸದಿಂದ ಹೊರಗೆ ಬಿದ್ದ ಶಿವ ಹಲವಾರು ವರ್ಷಗಳ ಅಲೆದಾಟದ ನಂತರ ಕಾಶಿಗೆ ಬಂದು ನೆಲೆಸಿದನೆಂದೂ. ಹಾಗೇ ಬಂದ ಪರಶಿವನನ್ನು ಬ್ರಹ್ಮನ ಹತ್ತು ಅಶ್ವಗಳಿರುವ ರಥವನ್ನು ದಶಾಶ್ವಮೇಧ ಘಾಟ್‌ಗೆ ಕಳುಹಿಸಿ ಕಾಶಿಗೆ ಬರಮಾಡಿಕೊಂಡನೆಂದು ಪ್ರತೀತಿ ಇದೆ.
|