ಪ್ರಕೃತಿ ಭಗವಂತ ಶಿವನನ್ನು ಪೂಜಿಸುವ ಅಪೂರ್ವ ದೇವಾಲಯಕ್ಕೆ ಈ ಭಾರಿಯ ಧಾರ್ಮಿಕ ಯಾತ್ರೆಯಲ್ಲಿ ನಾವು ನಿಮ್ಮನ್ನು ಕರೆದೊಯ್ಯುತ್ತಿದ್ದೇವೆ.
ಹೌದು. ಇದು ನಿಜ. ಗುಜರಾತಿನ ಸ್ತಂಭೇಶ್ವರ ದೇವಾಲಯದಲ್ಲಿ ನೀವು ಈ ವೈಶಿಷ್ಠ್ಯವನ್ನು ಕಾಣಲು ಸಾಧ್ಯ. ಇಲ್ಲಿ ಸಮುದ್ರದ ದೊಡ್ಡ ಅಲೆ ಉಕ್ಕಿ ಹರಿದಾಗ ದೇವಾಲಯದೊಳಗೆ ನುಸುಳುವ ನೀರು ಶಿವಲಿಂಗವನ್ನು ಸಂಪೂರ್ಣ ಮುಳುಗಿಸುತ್ತದೆ. ಇದು ಸಮುದ್ರದಿಂದ ಶಿವನಿಗೆ ಜಲಾಭಿಷೇಕ ಎಂಬುದಾಗಿಯೇ ನಂಬಲಾಗುತ್ತಿದೆ. ದೇವಾಲಯದಲ್ಲಿ ಪ್ರತಿದಿನ ಎರಡು ಭಾರಿ ಇದು ಘಟಿಸುತ್ತದೆ.
ಗುಜರಾತಿನ ಭರೂಚ್ ಜಿಲ್ಲೆಯ ಕಾವಿ ಜಿಲ್ಲೆಯಲ್ಲಿ ಸ್ತಂಭೇಶ್ವರ ದೇವಾಲಯ ನೆಲೆಗೊಂಡಿದೆ. ಸಮುದ್ರವು ಶಿವನಿಗೆ ಅಭಿಷೇಕ ಮಾಡುವ ಈ ದೃಶ್ಯವನ್ನು ಕಂಡಾಗ ಭಕ್ತರು ಭಾವಪರವಶರಾಗುತ್ತಾರೆ. ಈ ದೇವಾಲಯದಲ್ಲಿ ಸಾಕ್ಷಾತ್ ಶಿವ ನೆಲೆಸಿದ್ದಾನೆ ಎಂಬುದು ಜನರ ಪ್ರತೀತಿ.
ದೇವಾಲಯದೊಳಕ್ಕೆ ನೀರು ನುಗ್ಗುವ ಖಚಿತ ಸಮಯದ ಕುರಿತು ಭಕ್ತರಿಗೆ ಕಾಲಕಾಲಕ್ಕೆ ಮಾಹಿತಿ ನೀಡುವುದಾಗಿ ಇಲ್ಲಿನ ಪೂಜಾರಿ ವಿದ್ಯಾನಂದ ಹೇಳುತ್ತಾರೆ. ಹೀಗಾಗಿ ಭಕ್ತರು ಈ ಅಪೂರ್ವ ಕ್ಷಣವನ್ನು ಕಣ್ಣಲ್ಲಿ ತುಂಬಿಕೊಳ್ಳಬಹುದಾಗಿದೆ ಎಂದು ಅವರು ಹೇಳಿತ್ತಾರೆ.
|