ಈ ಸಲದ ಧಾರ್ಮಿಕ ಯಾತ್ರೆಯಲ್ಲಿ ನಮ್ಮ ಪಯಣ, ಜಗನ್ನಾಥ ದೇವರ ರಥಯಾತ್ರಾ ಹಬ್ಬ (ದೇವರ ಪ್ರತಿಮೆಯನ್ನಿರಿಸಿದ ರಥವನ್ನು ಎಳೆಯುವ ಮೆರವಣಿಗೆ) ವೀಕ್ಷಿಸಲು ಗುಜರಾತ್ಗೆ. ಪ್ರತಿ ವರ್ಷ ಆಷಾಢ ಶುದ್ಧ ದ್ವಿತೀಯಾದಂದು ಜರುಗುವ ಮೆರವಣಿಗೆಯಲ್ಲಿ ಸಾಗೋರೊಪಾದಿಯಲ್ಲಿ ಯಾತ್ರಾರ್ಥಿಗಳು ಪಾಲ್ಗೊಳ್ಳುತ್ತಾರೆ.WD ಈ ದಿನದಂದು ಅಹಮದಾಬಾದ್ನ ಜಗನ್ನಾಥ ದೇವಾಲಯದಿಂದ ಹಿರಿದಾದ ಮೆರವಣಿಗೆಯೊಂದು ಮೊದಲ್ಗೊಳ್ಳುತ್ತದೆ. ಮೆರವಣಿಗೆಯಲ್ಲಿ ಮೂರು ರಥಗಳಿರುತ್ತವೆ. ಅವುಗಳಲ್ಲಿ ಮೊದಲನೇಯದು ಜಗನ್ನಾಥ ದೇವರದು, ಎರಡನೇಯದು ಅವರ ತಂಗಿ ಸುಭದ್ರೆ ಮತ್ತು ಮೂರನೇಯದು ಅಣ್ಣ ಬಲರಾಮರದು.