WD ದೇವರ ನ್ಯಾಯಾಲಯದಲ್ಲಿ ಹಿಂದು, ಮುಸ್ಲಿಂ, ಸಿಖ್ ಅಥವಾ ಕ್ರೈಸ್ತ ಎಂಬ ಭೇದ ಭಾವ ಇರುವುದಿಲ್ಲ. ಧಾರ್ಮಿಕ ಯಾತ್ರೆಯ ಈ ಕಂತಿನಲ್ಲಿ ನಾವು ಈ ಬಾರಿ ಮೀರನ್ ದಾತಾರ್ ಎಂಬ ಪವಿತ್ರ ಸ್ಥಳಕ್ಕೆ ಕರೆದೊಯ್ಯುತ್ತಿದ್ದೇವೆ.ಉತ್ತರ ಗುಜರಾತಿನಲ್ಲಿ ಉನಾವಾ ಎಂಬ ಸಣ್ಣ ಗ್ರಾಮವಿದೆ. ಇದು ಮೆಹ್ಸಾನಾ-ಪಾಲಾಂಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮೀಪವಿದ್ದು, ಈ ಗ್ರಾಮ ಕೃಷಿ ಪ್ರಾಬಲ್ಯ ಗ್ರಾಮವಾ ಗಿದ್ದು, ಪವಿತ್ರ ಮಂದಿರ ಹಜರತ್ ಮೀರನ್ ಸೈಯದ್ ಅಲಿ ದಾತಾರ್‌ನಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ.