ವಿಕಾಸ್ ಶಿರ್ಪುರ್ಕಾರ್ ನಮ್ಮ ಈ ವಾರದ ಧಾರ್ಮಿಕ ಯಾತ್ರೆ ಮಹಾರಾಷ್ಟ್ರದ ಧುಲಿಯಾದಲ್ಲಿ ಹರಿಯುವ ಪಂಜಾರ್ ನದಿ ದಂಡೆಯಲ್ಲಿರುವ ಆದಿಮಾಯೆ ಏಕವೀರ ದೇವಿ ಮಂದಿರಕ್ಕೆ. ತಾಯಿ ಏಕವೀರ ದೇವಿಗೆ ಭಕ್ತರಿರುವುದು ಮಾಹಾರಾಷ್ಟ್ರದಲ್ಲಿ ಮಾತ್ರವಲ್ಲ. ಮಧ್ಯಪ್ರದೇಶ, ರಾಜಸ್ಥಾನ್, ಕರ್ನಾಟಕ ಮತ್ತು ಗುಜರಾತ್ಗಳಿಂದಲೂ ಭಕ್ತರು ಇಲ್ಲಿಗೆ ಹರಿದು ಬರುತ್ತಾರೆ.ಆದಿಶಕ್ತಿ ಏಕವೀರ ದೇವಿ, ಭಗವಾನ್ ಪರಶುರಾಮನ ತಾಯಿ ಎಂದು ಪ್ರತೀತಿ. ಏಕವೀರ ಮತ್ತು ರೇಣುಕಾ ದೇವಿಯು ಆದಿಮಾಯೆ ಪಾರ್ವತಿಯ ಅವತಾರಗಳು. ದುಷ್ಟಸಂಹಾರಕ್ಕಾಗಿ ಆದಿಮಾಯೆ ಹಲವು ರೂಪಗಳ