ಕ್ರಿಕೆಟ್ ಟಿಕರ್ | ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ವಿಶ್ವಕಪ್ | ಐಪಿಎಲ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಲೇಖನಗಳು » ಜಾಕ್ವಾಸ್ ಕಾಲಿಸ್ ಸರ್ವಕಾಲಿಕ ಶ್ರೇಷ್ಠ ಆಟಗಾರ? (Jaques Kallis | South Africa | Cricketer | Kallis Profile)
ಹಿಂದಿನದು|ಮುಂದಿನದು
- ನಾಗರಾಜ ಬೇಳ

WD


ಬಹುಶ: ಈ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ರಾಹುಲ್ ದ್ರಾವಿಡ್ ರೀತಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಟೆಸ್ಟ್ ರನ್ನುಗಳನ್ನು ಕಲೆ ಹಾಕುವುದು ಹಾಗೂ ಜಹೀರ್ ಖಾನ್‌ ತರಹನೇ 250ಕ್ಕೂ ಹೆಚ್ಚು ವಿಕೆಟುಗಳನ್ನು ಕಬಳಿಸುವುದೆಂದರೆ ಸುಲಭದ ಮಾತಲ್ಲ.

ಆದರೆ ಈ ಎರಡೂ ಸಾಧನೆಯನ್ನು ಓರ್ವ ಆಟಗಾರನೇ ಮಾಡಿದರೆ ಅಂತವರನ್ನು ನೀವು ಏನೆಂದು ಹೆಸರಿಸುವಿರಿ? ಹೌದು, ದಕ್ಷಿಣ ಆಫ್ರಿಕಾದ ಜಾಕ್ವಾಸ್ ಕಾಲಿಸ್ ಸರ್ವಶ್ರೇಷ್ಠ ಆಲ್‌ರೌಂಡರ್ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25,000ದಷ್ಟು ರನ್ಸ್, 500ಕ್ಕಿಂತಲೂ ಹೆಚ್ಚು ವಿಕೆಟ್ ಹಾಗೂ 300ಕ್ಕಿಂತಲೂ ಅಧಿಕ ಕ್ಯಾಚ್ ಪಡೆದ ಆಟಗಾರನಿಗೆ ಯಾವ ಸ್ಥಾನ ನೀಡಬೇಕು ಎಂಬುದು ಸಹಜವಾಗಿ ಮೂಡಿಬರುವ ಪ್ರಶ್ನೆ.

ಡಾನ್ ಬ್ರಾಡ್ಮನ್, ಸಚಿನ್ ತೆಂಡೂಲ್ಕರ್, ಬ್ರ್ಯಾನ್ ಲಾರಾ, ರಾಹುಲ್ ದ್ರಾವಿಡ್ ಹಾಗೂ ರಿಕಿ ಪಾಂಟಿಂಗ್ ಅವರಂತಹ ದಿಗ್ಗಜರು ಕೇವಲ ಒಂದು ವಿಭಾಗಕ್ಕೆ (ಬ್ಯಾಟಿಂಗ್) ಮಾತ್ರ ಸೀಮಿತವಾದವರು. ಆದರೆ ಈ ಎಲ್ಲದರ ನಡುವೆ ಎಲ್ಲ ಮೂರು ವಿಭಾಗದಲ್ಲೂ ತಮ್ಮ ಚಾಣಕ್ಷತೆ ತೋರಿರುವ ದಕ್ಷಿಣ ಆಫ್ರಿಕಾ ಹಿರಿಯ ಆಟಗಾರ ಕಾಲಿಸ್ ಸರ್ವಕಾಲಿಕ ಶ್ರೇಷ್ಠ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ.

ಅದು ಟೆಸ್ಟ್ ಆಗಿರಬಹುದು ಏಕದಿನ ಅಥವಾ ಟ್ವೆಂಟಿ-20. ಇವೆಲ್ಲದರಲ್ಲೂ 'ಫುಲ್ ಟೈಮ್ ಕ್ರಿಕೆಟಿಗ' ಎನಿಸಿಕೊಂಡಿರುವ ಕಾಲಿಸ್ ಕ್ರಿಕೆಟ್ ಜೀವನದಲ್ಲಿ ಮಾಡಿರುವ ಸಾಧನೆ ನಿಜಕ್ಕೂ ಶ್ಲಾಘನೀಯ.

ದ್ರಾವಿಡ್ ಅವರಂತೆಯೇ ಮೂರನೇ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಮಾಸ್ಟರ್ ಎನಿಸಿಕೊಂಡಿರುವ ಕಾಲಿಸ್ 12 ಸಾವಿರ ಟೆಸ್ಟ್ ರನ್ನುಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 42 ಶತಕಗಳು ಸೇರಿವೆ. ಒಂದು ವೇಳೆ ಇನ್ನು ಎರಡು ವರ್ಷ ಕ್ರಿಕೆಟ್‌ನಲ್ಲಿ ಮುಂದುವರಿಯಲು ಸಾಧ್ಯವಾದ್ದಲ್ಲಿ ಸಚಿನ್ ಅವರ 50 ಟೆಸ್ಟ್ ಶತಕ ದಾಖಲೆಯನ್ನು ಸಹ ಬಹುಶಃ ಸರಿಗಟ್ಟಬಲ್ಲರು.

ಇವೆಲ್ಲಕ್ಕೂ ಮಿಗಿಲಾಗಿ ಕಾಲಿಸ್ 10,000 ಟೆಸ್ಟ್ ರನ್ಸ್ ಹಾಗೂ 250 ವಿಕೆಟುಗಳನ್ನು ಕಬಳಿಸಿದ ವಿಶ್ವದ ಏಕೈಕ ಕ್ರಿಕೆಟಿಗನಾಗಿದ್ದು, ಟೆಸ್ಟ್‌ನಲ್ಲಿ ಸತತ ಐದು ಪಂದ್ಯಗಳಲ್ಲಿ ಶತಕ ಸಾಧನೆಯೂ ಅವರ ಹೆಸರಲ್ಲಿದೆ.
ಹಿಂದಿನದು|ಮುಂದಿನದು
ಇವನ್ನೂ ಓದಿ
Feedback Print