ಬಹುಶಃ ಶೇನ್ ವಾರ್ನೆಯ ಅಭಿಮಾನಿಗಳು ಒಪ್ಪಲಿಕ್ಕಿಲ್ಲವೇನೊ. ಆದರೆ ಇಂದು ವಿಶ್ವ ಕ್ರಿಕೆಟ್‌ನಲ್ಲಿ ಈ 'ಸಿಂಹ' ಎದುರಾಳಿಗಳಿಗೆ ಸಿಂಹಸ್ವಪ್ನವಾಗಿರುವ ಸ್ಪಿನ್ ಬೌಲರ್.
ಶ್ರೀಲಂಕಾದ ಕಂಡಿಯಲ್ಲಿ 1972ರ ಎಪ್ರಿಲ್ 17ರಂದು ಜನಿಸಿದ ಮುತ್ತಯ್ಯ ಮುರಳೀಧರನ್ 1992ರಲ್ಲಿ ಕ್ರಿಕೆಟ್ ರಂಗಕ್ಕೆ ಪಾದಾರ್ಪಣೆ ಮಾಡಿದರು. ಇವರ ಗಿಡ್ಡಹೆಸರು ಮುರಳಿ. ಟೆಸ್ಟ್ ಕ್ರಿಕೆಟ್‌ನಲ್ಲಿ 600ಕ್ಕಿಂತ ಅಧಿಕ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 400ಕ್ಕಿಂತ ಅಧಿಕ ಕ್ರಿಕೆಟ್ ಪಡೆದು ಜಾಗತಿಕ ಮಟ್ಟದಲ್ಲಿ ಉಭಯ ವಿಭಾಗದಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಮುರಳಿಯವರ ಅಪೂರ್ವ ಬೌಲಿಂಗ್ ಶೈಲಿ, ವಿಕೆಟ್‌ಗಳನ್ನು ಉರುಳಿಸುವ ಚಾಕಚಕ್ಯತೆ ಅವರನ್ನು ಆಧುನಿಕ ಕಾಲದ ಸುಪ್ರಸಿದ್ಧ ಕ್ರಿಕೆಟಿಗರ ಸಾಲಿನಲ್ಲಿ ತಂದು ನಿಲ್ಲಿಸಿದೆ.
|