ಆಕ್ರಮಣಕಾರಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ಗೆ ಬಾಲ್ ಎಸೆಯುವುದೆಂದರೆ ವಿಶ್ವದ ಎಲ್ಲಾ ಬೌಲರ್ಗಳಲ್ಲಿ ಭೀತಿ ಕಾಡುತ್ತಿರುತ್ತದೆ. ಆತ ಕ್ರೀಸ್ನಲ್ಲಿ ಸ್ಪಲ್ಪ ಹೊತ್ತು ಉಳಿದರೆ ನಂತರ ಅಸಾಧ್ಯವಾದುದೆಲ್ಲ ಸಾಧ್ಯವಾಗಿಸುವ ತಾಕತ್ತು ಹೊಂದಿರುವವನು ಎಂದು ಈಗಾಗಲೇ ಹಲವು ಬಾರಿ ಶ್ರುತಪಟ್ಟಿರುವುದೇ ಇದರ ಹಿಂದಿನ ಕಾರಣ. ಇದು ಕೇವಲ ಒಂದೋ ಎರಡೋ ಪಂದ್ಯಗಳಿಗೆ ಮಾತ್ರ ಸೀಮಿತವಲ್ಲ. ಪಿಚ್ ಹೇಗೆ ಇರಲಿ, ಎಂತಹುದೇ ಪರಿಸ್ಥಿತಿಯಲ್ಲಿಯೂ ಸಹ ಸೆಹ್ವಾಗ್ ಮೈದಾನಕ್ಕಿಳಿದ ನಂತರ ಎಲ್ಲವೂ ಸುಲಭ. ಇದಕ್ಕೆ ಬಾಲ್