ಆಟಗಾರರು ದೋಷರಹಿತ ಆಟವನ್ನು ಇನ್ನೂ ಪ್ರದರ್ಶಿಸಬೇಕಿದೆ. ಆದರೆ ಪರಿಪೂರ್ಣ ಪ್ರಯತ್ನಕ್ಕೆ ಅವರನ್ನು ಪ್ರೇರೇಪಿಸಬೇಕು ಎಂದು ಮಾಜಿ ಆಸ್ಟ್ರೇಲಿಯಾ ತರಬೇತುದಾರ ಜಾನ್ ಬುಚನನ್ ತಿಳಿಸಿದ್ದಾರೆ. ಅವರು 1999ರಲ್ಲಿ 'ತಪ್ಪು-ರಹಿತ' ಮಂತ್ರದೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ ಸೇರಿದ್ದರು.
ಆಸ್ಟ್ರೇಲಿಯಾವು ಪರಿಪೂರ್ಣ ಪಂದ್ಯವನ್ನು ಹೊಂದಿಲ್ಲದಿರಬಹುದು. ಆದರೆ ಅದು ಪರಿಪೂರ್ಣವಾದ ತಂಡವನ್ನು ಹೊಂದಿದೆ. ಆಸ್ಟ್ರೇಲಿಯಾವು ಅನೇಕ ದಾಖಲೆ ಬರೆದಿದ್ದರೂ ತಂಡವು ಪ್ರೇರಣೆಯೊಂದಿಗೆ ಉತ್ತಮ ರೀತಿಯಿಂದ ಆಡುತ್ತಿದೆ ಎಂದು ಅವರು ತಿಳಿಸಿದರು..
ನಾವು ನಮ್ಮನ್ನು ಯಾವತ್ತು ವಿರುದ್ದ ತಂಡದೊಡನೆ ತುಲನೆ ಮಾಡಲಿಲ್ಲ. ನಮ್ಮನ್ನೇ ನಾವು ಹೋಲಿಸಿಕೊಳ್ಳುತ್ತಿದ್ದೆವು. ಇದು ಆಸ್ಟ್ರೇಲಿಯಾ ತಂಡವು ಭಿನ್ನವಾಗಿದೆ ಎಂಬುದಕ್ಕೆ ಪ್ರಮುಖ ಕಾರಣಗಳಲ್ಲೊಂದು ಎಂಬ ಅವರ ಹೇಳಿಕೆಯನ್ನು 'ದಿ ಏಜ್' ಪತ್ರಿಕೆ ಉಲ್ಲೇಖಿಸಿದೆ.
|