ಮುಖ್ಯ ಪುಟ  ಕ್ರೀಡಾ ಜಗತ್ತು  ಕ್ರಿಕೆಟ್‌  ಕ್ರಿಕೆಟ್‌ ಸುದ್ದಿ
 
ಅಬುಧಾಬಿ ಪಂದ್ಯಕ್ಕೆ ಶ್ರೀನಾಥ್ ಪಂದ್ಯ ರೆಫರಿ
webdunia
ಇದೇ ತಿಂಗಳು ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವೆ ಅಬುಧಾಬಿಯಲ್ಲಿ ನಡೆಯಲಿರುವ ಮೂರು ಏಕದಿನ ಪಂದ್ಯಗಳಿಗೆ ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರನ್ನು ಪಂದ್ಯ ರೆಫರಿಯಾಗಿ ಆಯ್ಕೆ ಮಾಡಲಾಗಿದೆ.

ಅಲ್ಲದೆ ಭಾರತದ ಸುರೇಶ ಶಾಸ್ತ್ರಿ ಅವರನ್ನು ಮೊದಲೆರಡು ಪಂದ್ಯಕ್ಕೆ ಅಂಪಾಯರ್‌ನ್ನಾಗಿ ಆಯ್ಕೆ ಮಾಡಲಾಗಿದೆ. ಮೇ, 18, 20, ಹಾಗೂ 22 ರಂದು ಅಬುಧಾಬಿ ಶೇಖ್ ಜಾಯೆದ್ ಮೈದಾನದಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಶ್ರೀನಾಥ್ ಹಾಗೂ ಶಾಸ್ತ್ರಿ ಅವರ ಆಯ್ಕೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಪ್ರಕಟಿಸಿದೆ.

ಮೊದಲ ಏಕದಿನ ಪಂದ್ಯಕ್ಕೆ ಶಾಸ್ತ್ರಿ ಇಂಗ್ಲೆಂಡಿನ ಮಾರ್ಕ್ ಬೆನ್ಸನ್, ಅವರೊಂದಿಗೆ ಅಂಪಾಯರ್‌ ಆಗಿ ಕಾರ್ಯನಿರ್ವಹಿಸಿದರೆ, ಜಿಂಬಾಬ್ವೆಯ ರಸ್ಸೆಲ್ ತಿಫಿನ್ ಮೂರನೇ ಅಂಪಾಯರ್‌ ಆಗಲಿದ್ದಾರೆ. ಎರಡನೇ ಪಂದ್ಯದಲ್ಲಿ ಶಾಸ್ತ್ರಿ ತಿಫಿನ್ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಆದರೆ, ಕೊನೆಯ ಪಂದ್ಯದಲ್ಲಿ ಶಾಸ್ತ್ರಿ ಮೂರನೇ ಅಂಪಾಯರ್ ಆಗಲಿದ್ದಾರೆ ಎಂದು ಐಸಿಸಿ ತಿಳಿಸಿದೆ.
ಮತ್ತಷ್ಟು
ಇಎಸ್‌ಪಿಎನ್ ಸ್ಟಾರ್ , ಸ್ಪೋರ್ಟ್ಸ್‌ನಲ್ಲಿ , ಲೈವ್ ಪಂದ್ಯ
ಪರಿಪೂರ್ಣತೆಗೆ ಪ್ರಯತ್ನಿಸುತ್ತಿರುವ ಅಸ್ಸೀಸ್
ಏಕದಿನ ಸರಣಿ- ಅಬುದಾಭಿಗೆ ಪಾಕ್‌ ತಂಡ
ಐಸಿಸಿ ಟೆಸ್ಟ್ ಶ್ರೇಯಾಂಕ: ಟಾಪ್-10 ರಲ್ಲಿ ಕುಂಬ್ಳೆ, ದ್ರಾವಿಡ್
5 ಲ.ರೂ. ವದಂತಿ ಮಾತ್ರ: ಬಿಸಿಸಿಐ
ನೂತನ ಕೋಚ್‌ಗಾಗಿ ಪಿಸಿಬಿ ಶೋಧ