ಮಾಸ್ಟರ್ ಬ್ಲಾಸ್ಟರ್ ಸಚಿತೆಂಡೂಲ್ಕರ್ ಭಾರತ ಕ್ರಿಕೆಟ್ ತಂಡದಲ್ಲಿ ಖಾಲಿಯಿದ್ದ ಉಪ ನಾಯಕನ ಸ್ಥಾನಕ್ಕೆ ನೇಮವಾಗಿದ್ದಾರೆ.
ನಾಯಕ ರಾಹುಲ್ ದ್ರಾವಿಡ್ ಅವರಿಗೆ ಇನ್ನಷ್ಟು ಬಲ ನೀಡುವಂತೆ ಇವರು ಕಾರ್ಯ ನಿರ್ವಹಿಸುವರು.
ಮೊದಲ ಟೆಸ್ಟ್ ಪ್ರಾರಂಭದಲ್ಲಿ ಹೇಳಿಕೆ ನೀಡಿದ ಸುರೇಂದ್ರ ಭಾವೆ ಅವರು,ತೆಂಡೂಲ್ಕರ್‌ರನ್ನು ಭಾರತ ಕ್ರಿಕೆಟ್ ತಂಡದ ಉಪನಾಯಕನನ್ನಾಗಿ ನೇಮಕಮಾಡಲಾಗಿದೆ ಎಂದು ಘೋಷಿಸಿದರು.
ಬಾಂಗ್ಲಾ ಪ್ರವಾಸಕ್ಕೆ ಸದಸ್ಯರನ್ನು ನಿರ್ಧರಿಸುವ ವೇಳೆ ರಾಷ್ಟ್ರೀಯ ಸಲಹೆಗಾರರು ಉಪನಾಯಕನ ಹೆಸರನ್ನು ಪ್ರಕಟಿಸಿರಲಿಲ್ಲ. ಸರಣಿಯು ಏಕದಿನ ಪಂದ್ಯ ಮತ್ತು ಟೆಸ್ಟ್ ಸರಣಿಗೊಳನ್ನು ಒಳಗೊಂಡಿತ್ತು.
ತೆಂಡೂಲ್ಕರ್ ಅವರು ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ವಿಶ್ವಕಪ್ ಸರಣಿ ಸಂದರ್ಭದಲ್ಲೂ ಉಪನಾಯಕರಾಗಿದ್ದುದನ್ನು ಸ್ಮರಿಸಬಹುದು.
|