ಇಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಮೂರನೇ ದಿನದಾಟ ಪ್ರಾರಂಭಕ್ಕೆ ಮಳೆ ಅಡ್ಡಿಯಾಗಿದೆ.ತೀವ್ರ ಮಳೆಯಿಂದಾಗಿ ಮೈದಾನವೂ ಕೂಡ ತೀವ್ರ ಒದ್ದೆಯಾಗಿರುವುದರಿಂದ ಭಾನುವಾರ ಒಂದು ಎಸೆತದ ಆಟವೂ ನಡೆಯುವ ನಿರೀಕ್ಷೆ ಇಲ್ಲ ಎನ್ನಲಾಗಿದೆ.
ಸಚಿನ್ ತೆಂಡೂಲ್ಕರ್ ಹಾಗೂ ಬಂಗಾಳಿ ಹುಲಿ ಸೌರವ್ ಗಂಗೂಲಿ ಅವರಿಬ್ಬರು ಸಿಡಿಸಿದ ಅಮೋಘ ಶತಕದಿಂದಾಗಿ ಭಾರತ ತಂಡವು ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನ ಎರಡನೇ ದಿನದಾಟದಲ್ಲಿ ಬೃಹತ್ ಮೊತ್ತದತ್ತ ಮುಂದಡಿ ಇರಿಸಿದೆ.
ಬಿಸಿಲು ಬಿದ್ದರಷ್ಟೇ ಆಟ ಸಾಧ್ಯ ಎನ್ನುವ ಸ್ಥಿತಿ ಇದ್ದು,ಸದ್ಯ ಕ್ರೀಸ್‌ನಲ್ಲಿ ವಿಕೆಟ್ ಕೀಪರ್ ಮಹೇಂದ್ರ್ ಸಿಂಗ್ ದೋನಿ (ಅಜೇಯ 36) ಹಾಗೂ ಅನಿಲ್ ಕುಂಬ್ಳೆ (ಅಜೇಯ 1) ಆಡುತ್ತಿದ್ದಾರೆ. ಭಾರತ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್ ನಷ್ಟಕ್ಕೆ 384 ರನ್ ಪೇರಿಸಿದೆ.
|