ಮುಖ್ಯ ಪುಟ  ಕ್ರೀಡಾ ಜಗತ್ತು  ಕ್ರಿಕೆಟ್‌  ಕ್ರಿಕೆಟ್‌ ಸುದ್ದಿ
 
ಆಟಗಾರರ ಸಲಹೆಯ ಬಳಿಕ ಕೋಚ್ ನೇಮಿಸಿ- ಸಚಿನ್
webdunia
Sachin
PTI
ಭಾರತೀಯ ಕ್ರಿಕೆಟ್‌ ತಂಡಕ್ಕೆ ಕೋಚ್‌ನ್ನು ಆಯ್ಕೆ ಮಾಡುವ ವೇಳೆ ತಂಡದ ಸದಸ್ಯರಾದ ಆಟಗಾರರ ಸಲಹೆಗೂ ಪ್ರಾಧಾನ್ಯ ನೀಡಬೇಕೆಂದು ುಪನಾಯಕ ಸಚಿನ್ ತೆಂಡೂಲ್ಕರ್ ಸಲಹೆಯಿತ್ತಿದ್ದಾರೆ.
ಭಾರತ ತಂಡದ ಕೋಚ್‌ ಸ್ಥಾನಕ್ಕೆ ಈ ಮೊದಲಿನ ಕಚ್‌ ಗ್ರೆಗ್ ಚಾಪೆಲ್ಗೆ ಸರಿಸಮನಾಗಿರುವ ಯಶಸ್ವಿ ಕೋಚ್ ಶೋಧಕ್ಕಾಗಿ ಬಿಸಿಸಿಐನ ಏಳು ಮಂದಿ ಸದಸ್ಯರ ಆಯ್ಕೆ ಮಂಡಳಿಯು ಜೂನ್ 4 ರಂದು ಬೆಂಗಳೂರಿನಲ್ಲಿ ಸೇರಲಿರುವ ಹಿನ್ನೆಲೆಯಲ್ಲಿ ಸಚಿನ್‌ ಈ ಹೇಳಿಕೆ ನೀಡಿದ್ದಾರೆ. ಆದರೆ ಮಂಡಲಿ ಕುರಿತು ತನಗೆ ಮಾಹಿತಿ ಇಲ್ಲ ಎಂದು ಸಚಿನ್ ತಿಳಿಸಿದ್ದಾರೆ.

ಸಭೆಯ ಕುರಿತು ತಮಗೆ ಗೊತ್ತಿಲ್ಲ. ಈ ಸಂಬಂಧ ಬಿಸಿಸಿಐಯೊಂದಿಗೆ ಯಾವುದೇ ಸಭೆಯನ್ನೂ ನಡೆಸಿಲ್ಲ. ಆದರೆ, ಆಯ್ಕೆ ಸಂದರ್ಭದಲ್ಲಿ ಆಟಗಾರರನ್ನು ಸಂಪರ್ಕಿಸುತ್ತಾರೆ, ಸಲಹೆ ಆಲಿಸುತ್ತಾರೆ ಎಂಬ ಭರವಸೆ ನಮಗಿದೆ ಎಂದು ಸಚಿನ್ ನುಡಿದರು.

ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ ಅವರ ನೇತೃತ್ವದ ಮಂಡಳಿಯು ಜೂನ್ ಎರಡನೇ ವಾರದಲ್ಲಿ ಭಾರತ ತಂಡದ ನೂತನ ಕೋಚ್ ಆಯ್ಕೆಯ ಅಂತಿಮ ತೀರ್ಮಾನವನ್ನು ಪ್ರಕಟಿಸಲಿದೆ ಎಂದು ಬಿಸಿಸಿಐನ ಕಾರ್ಯದರ್ಶಿ ನಿರಂಜನ್ ಶಾ ಅವರು ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೋಚ್ ಆಯ್ಕೆ ಮಂಡಳಿಯಲ್ಲಿ ಮಾಜಿ ನಾಯಕರುಗಳಾದ ಸುನೀಲ್ ಗವಾಸ್ಕರ್, ರವಿ ಶಾಸ್ತ್ರಿ ಹಾಗೂ ಎಸ್.ವೆಂಕಟ್‌ರಾಘವನ್, ಮಂಡಳಿಯ ಖಂಜಾಂಚಿ ಎನ್.ಶ್ರೀನಿವಾಸನ್ ಮತ್ತು ಜಂಟಿ ಕಾರ್ಯದರ್ಶಿ ಎಂ.ಪಿ.ಪಾಂಡೊವ್ ಶಾ ಅವರುಗಳು ಸಹ ಇದ್ದಾರೆ.
ಮತ್ತಷ್ಟು
ಟೆಸ್ಟ್ ಕ್ರಿಕೆಟ್‌- ಮಳೆ ಅಡ್ಡಿ
ಟೆಸ್ಟ್: ಭಾರತ ಆರು ವಿಕೆಟ್ ನಷ್ಟಕ್ಕೆ 384ರನ್‌
ತೆಂಡೂಲ್ಕರ್ ಭಾರತ ಕ್ರಿಕೆಟ್ ತಂಡದ ಉಪನಾಯಕ
ಅಬುಧಾಬಿ ಪಂದ್ಯಕ್ಕೆ ಶ್ರೀನಾಥ್ ಪಂದ್ಯ ರೆಫರಿ
ಇಎಸ್‌ಪಿಎನ್ ಸ್ಟಾರ್ , ಸ್ಪೋರ್ಟ್ಸ್‌ನಲ್ಲಿ , ಲೈವ್ ಪಂದ್ಯ
ಪರಿಪೂರ್ಣತೆಗೆ ಪ್ರಯತ್ನಿಸುತ್ತಿರುವ ಅಸ್ಸೀಸ್