ಮುಖ್ಯ ಪುಟ  ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ
 
ಸಚಿನ್ ಜಾದೂಗೆ ಮಣಿದ ಹ್ಯಾರಿಪಾಟರ್!
ವಿಶ್ವವೇ ಈಗ ಹ್ಯಾರಿಪಾಟರ್‌ ಹಿಪ್ನೋಟಿಕ್ ಅಮಲಿನಲ್ಲಿದೆ. ಅದರಲ್ಲಿನ ಪುಟಾಣಿ ಜಾದೂಗಾರ ಹ್ಯಾರಿಯ ಮಂತ್ರಜಾಲ ಕೂಡ ಅಷ್ಟೇ ವಿಸ್ಮಯ. ಆದರೆ ಅಂತಹ ಹ್ಯಾರಿ ಕ್ರಿಕೆಟ್ ಜಗತ್ತಿನ ಜಾದೂಗಾರ ಸಚಿನ್ ತೆಂಡೂಲ್ಕರ್‌ಗೆ ಶರಣಾಗಿದ್ದಾನೆ!

ಸೋಮವಾರದಂದು ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ಲಾರ್ಡ್ಸ್ ಜರುಗಿದ ಮೊದಲ ಟೆಸ್ಟ್‌ನ ಕೊನೆಯ ದಿನ ಪಂದ್ಯದ ವೇಳೆ ಈ ಚಮತ್ಕಾರ ರಂಗವೇರಿದೆ.

'ಹ್ಯಾರಿಪಾಟರ್ 'ಎಂದೇ ಖ್ಯಾತಿಗಳಿಸಿದ ಆರ್ಡರ್ ಆಫ್ ಫೀನಿಕ್ಸ್ ನಲ್ಲಿ ಹ್ಯಾರಿಯಾಗಿ ಅಭಿನಯಿಸಿ ಜಗತ್ತಿನ ಜನರ ಮನಗೆದ್ದ ಪುಟಾಣಿ ಕಲಾವಿದ ಡೇನಿಯಲ್ ರೆಡ್‌ಕ್ಲಿಫ್‌‌ನ ಜಾದೂ ಮಾಸ್ಟರ್ ಬ್ಲಾಸ್ಟರ್ ಸಚಿನ್‌ತೆಂಡೂಲ್ಕರ್ ಮುಂದೆ ಫಲನೀಡಲಿಲ್ಲ.

ಪಂದ್ಯದ ಬಳಿಕ ಸಚಿನ್‌ ಹಸ್ತಾಕ್ಷರಕ್ಕಾಗಿ ಅಭಿಮಾನಿಗಳು,ಪುಟಾಣಿಗಳ ದಂಡು ಅಲ್ಲಿ ನೆರೆದಿತ್ತು. ಅದರಲ್ಲಿ ಡೇನಿಯಲ್ ಕೂಡಾ ಇದ್ದರು. ಪುಟಾಣಿಗಳೆಲ್ಲ ಡೇನಿಯಲ್‌ರ ಹಸ್ತಾಕ್ಷರಕ್ಕೆ ಕಾಯುತ್ತಿದ್ದರೆ, ಆತ ಸಚಿನ್‌ ಆಟೋಗ್ರಾಫ್‌ಗಾಗಿ ಸರದಿ ಸಾಲಿನಲ್ಲಿದ್ದರು.

ಆದರೆ ಮೈದಾನದಲ್ಲಿ ಚಿಮ್ಮು ಚೆಂಡಿನ ವಕ್ರರೇಖೆ ಗುರುತಿಸುವ ಚಾಣಾಕ್ಷ ಕಣ್ಣುಗಳಿರುವ ಸಚಿನ್‌ಗೆ ಈ ಪುಟಾಣಿ ಜಾದೂವನ್ನು ಪತ್ತೆಮಾಡುವುದು ಕಷ್ಟವಾಗಲಿಲ್ಲ. ಗುರುತಿಸಿಯೇ ಬಿಟ್ಟರು!

ಪುಟಾಣಿ ಜಾದೂ ಡೇನಿಯಲ್‌ಗೆ ಭಾರತದ ಸಚಿನ್ ಹಾಗೂ ಇಂಗ್ಲೆಂಡ್ ಕ್ರಿಕೆಟಿಗ ಓಪನರ್ ಸ್ಟ್ರೋಟ್ಸ್‌ನ ಅಭಿಮಾನಿ. ಅಂದು ಡೇನಿಯಲ್‌ 18ನೇ ಹುಟ್ಟುಹಬ್ಬ. ಖುಷಿಯಲ್ಲಿ ಕ್ರಿಕೆಟ್ ತನ್ನ ಪ್ರಿಯ ತಾರೆಯರ ಆಟ ನೋಡಲು ಬಂದರೆ ಮಳೆ ಅಡ್ಡಿಪಡಿಸಿತ್ತು. ಆದರೇನು, ಸಚಿನ್ ಅವರನ್ನು ನಿರಾಶರನ್ನಾಗಿಸಲಿಲ್ಲ.
ಮತ್ತಷ್ಟು
ಸಚಿನ್ ಜಾದೂಗೆ ಮಣಿದ ಹ್ಯಾರಿಪಾಟರ್!
ಟ್ವೆಂಟಿ ನಮಗೆ ಮಕ್ಕಳಾಟವಲ್ಲ: ಮಲ್ಲಿಕ್
ಪಂದ್ಯ ಡ್ರಾದಲ್ಲಿ ಅಂತ್ಯವಾದದ್ದು ಸಮಾಧಾನಕರ
ಲಾರ್ಡ್ಸ್‌ನಲ್ಲಿ ಸೈಟ್ ಸ್ಕ್ರೀನ್ ಸರಿಯಾಗಿಲ್ಲ ಧೋನಿ
ದ್ವಿತೀಯ ಟೆಸ್ಟ್‌ಗೆ ಮ್ಯಾಥು ಹೊಗ್ಗಾರ್ಡ್ ಇಲ್ಲ
ಸಿಎಬಿಯಿಂದ ಹೊರಗಿದ್ದರೆನಂತೆ ದಾಲ್ಮಿಯಾ