ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಲ್ಕನೇ ಬಾರಿಯೂ ಕಪ್ ಭಾರತದ ಮಡಿಲಿಗೆ
ಆಶಾ ರಾವತ್ ಅವರ 97 ರನ್‌ಗಳ ಕಣ್ಮನ ಸೇಳೆಯುವ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡವನ್ನು 177 ರನ್‌ಗಳ ಅಂತರದಿಂದ ಸೋಲಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ನಾಲ್ಕನೇ ಬಾರಿ ಮಹಿಳಾ ಏಷಿಯಾ ಕಪ್ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮೈಥಿಲಿ ರಾಜ್ ಅವರ ನಿರೀಕ್ಷೆ ಪ್ರಾರಂಭದಲ್ಲಿ ಹುಸಿಯಾಯಿತು. ಇನಿಂಗ್ಸ್ ಆರಂಭಿಸಿದ ಬ್ಯಾಟುಗಾರ್ತಿ ಜಯಾ ಶರ್ಮಾ ಅವರು ಶೀರೋಮಾಲಾ ವೀರಕ್ಕೋಡಿಯವರಿಗೆ ಖಾತೆಯನ್ನು ತೆರೆಯದೇ ವಿಕೆಟ್ ಒಪ್ಪಿಸಿದರು. ಜಯಾ ವಿಕೆಟ್ ಪತನಗೊಂಡ ನಂತರ ಕ್ರೀಸಿಗೆ ಬಂದ ಆಶಾ ರಾವತ್ ಅವರು ಕರಣಾ ಜೈನ್ ಅವರೊಂದಿಗೆ ಎರಡನೆ ವಿಕೆಟ್ ಜೊತೆಯಾಟದಲ್ಲಿ 71 ರನ್ ಮಾಡಿ ತಂಡದ ಬೃಹತ್ ಮೊತ್ತಕ್ಕೆ ಬುನಾದಿ ಹಾಕಿದರು. ಕರುಣಾ ಜೈನ್ (28) ಅವರ ವಿಕೆಟ್ ಎಡಗೈ ಸ್ಪಿನ್ನರ್ ಸುವಿನಿ ಡಿ ಅಲ್ವಿಸ್ ಬೌಲಿಂಗ್‌ನಲ್ಲಿ ಪತನಗೊಂಡಿತು. ಕರಣಾ ವಿಕೆಟ್ ಪತನದಿಂದ ದೃತಿಗೆಡದ ಆಶಾ ರಾವತ್ ಅವರು ಬಲವಾದ ಇನಿಂಗ್ಸ್ ಆಡಿದ್ದು ಅಲ್ಲದೇ ತಮ್ಮ ಮೂರನೆ ಏಕದಿನ ಅರ್ಧಶತಕವನ್ನು ದಾಖಲಿಸಿದರು.

ಕರುಣಾ ಅವರು ಪೆವಿಲಿಯನ್‌ಗೆ ಮರಳಿದ ಮೇಲೆ ಕ್ರೀಸಿಗೆ ಬಂದ ನಾಯಕಿ ಮೈಥಿಲಿ ರಾಜ್ ಅವರು ರಾವತ್ ಅವರೊಂದಿಗೆ ಮೂರನೆ ವಿಕೆಟ್ ಜೊತೆಯಾಟವನ್ನು ಮುಂದುವರಿಸಿದರು. ಇವರಿಬ್ಬರ 89 ಎಸೆತಗಳ ಜೊತೆಯಾಟವು 90 ರನ್‌ಗಳನ್ನು ತಂಡದ ಮೊತ್ತಕ್ಕೆ ಸೇರ್ಪಡೆಗೊಳಿಸಿತು. ಕೆಲ ಹೊತ್ತಿನ ನಂತರ ರಾವತ್ ಅವರು ಶಶಿಕಲಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಚೊಚ್ಚಲ ಶತಕದಿಂದ ವಂಚಿತರಾದರು.

ರುಮೇಲಿ ಧರ್ ಮತ್ತು ಮೈಥಿಲಿ ರಾಜ್ ನಡುವಿನ ನಾಲ್ಕನೇ ವಿಕೆಟ್ ಜೊತೆಯಾಟವು ರನ್ ಗತಿಯನ್ನು ಹೆಚ್ಚಿಸಿತು. ಇವರಿಬ್ಬರ ಜೋಡಿಯು ಎದುರಿಸಿದ 60 ಎಸೆತಗಳಲ್ಲಿ 82 ರನ್ ಮಾಡಿತು, ಮೈಥಿಲಿಗೆ ಹೋಲಿಸಿದಲ್ಲಿ ಧರ್ ಹೆಚ್ಚು ಆಕ್ರಮಣಕಾರಿಯಾಗಿದ್ದರು. ಕೇವಲ 30 ಎಸೆತಗಳಲ್ಲಿ ಧರ್ ತಮ್ಮ ಅರ್ಧ ಶತಕವನ್ನು ದಾಖಲಿಸಿದರು. ನಂತರ ಧರ್ ಮತ್ತು ಮೈಥಿಲಿ ಐದು ಎಸೆತಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು. ರನ್‌ಗಳಿಕೆಯತ್ತ ಗಮನ ಹರಿಸಿದ್ದ ತಂಡವನ್ನು ಸಿಂಹಳಿಯ ತಂಡದ ನಾಯಕಿ ಸಿರಿವರ್ಧನೆ ಮತ್ತೆ ಮೂರು ವಿಕೆಟ್ ಕಬಳಿಸುವ ಮೂಲಕ ನಿಯಂತ್ರಿಸಿದರು. ಸಿರಿವರ್ಧನೆ 53 ರನ್ ಇತ್ತು ನಾಲ್ಕು ವಿಕೆಟ್ ಪಡೆದರು.

ಭಾರತೀಯ ಮಹಿಳಾ ತಂಡವು ನೀಡಿದ 261 ರನ್‌ಗಳ ಗುರಿಯನ್ನು ಬೆನ್ನತ್ತಿದ ಸಿಂಹಳಿಯ ಮಹಿಳಾ ತಂಡವು 35.2 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 82 ರನ್ ಮಾಡಿ ಶರಣಾಯಿತು. ಶ್ರೀಲಂಕಾ ತಂಡದ ಪರ ಚಮಾರಿ ಪೊಲ್ಗಾಮಪೊಲಾ ಮತ್ತು ನಾಯಕಿ ಸಿರಿವರ್ಧನೆ ಕ್ರಮವಾಗಿ 23 ಮತ್ತು 20 ರನ್ ಮಾಡಿದರು. ಸಿಂಹಳಿಯ ತಂಡವು ಸೀಮಾ ಪೂಜಾರಿ ಮತ್ತು ನೀತು ಡೆವಿಡ್ ಅವರ ಸ್ಪಿನ್ ಬೌಲಿಂಗ್‌ಗೆ ಧರಾಶಾಯಿತು. ನೀತು ಮತ್ತು ಸೀಮಾ ತಲಾ ಮೂರು ವಿಕೆಟ್ ಕಬಳಿಸುವಲ್ಲಿ ಸಫಲರಾದರು.
ಮತ್ತಷ್ಟು
ಐಪಿಎಲ್ ಫೈನಲ್: ವಾಂಖೆಡೆಯಿಂದ ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ
ಬಾಲಾಜಿ ದಾಳಿಗೆ, ತತ್ತರಿಸಿದ ಪಂಜಾಬ್
ಭಜ್ಜಿ ವಿರುದ್ಧ ಪಂಟರ್ ಮತ್ತೆ ವಾಗ್ದಾಳಿ
ಕ್ರಿಕೆಟ್: ಫೈನಲ್ ತಲುಪಿದ ಭಾರತೀಯ ವನಿತಾ ತಂಡ
ಕಾನ್ಪುರ್ ಪಿಚ್ ಕ್ಷಮೆ ಕೇಳಿದ ಬಿಸಿಸಿಐ
ಕೆರಿಬಿಯನ್ ಪ್ರವಾಸದಿಂದ ಕ್ಲಾರ್ಕ್ ಹಿಂದಕ್ಕೆ