ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೋಲ್ಡಿಂಗ್, ಮಾರ್ಷಲ್ ಸಾಲಿನಲ್ಲಿ ಲೀ: ರಿಚರ್ಡ್ಸ್  Search similar articles
ವೆಸ್ಟ್‌ಇಂಡೀಸ್‌ನ ಉರಿದಾಳಿಯ ಶ್ರೇಷ್ಠ ವೇಗಿಗಳಾದ ಮಾಲ್ಕಂ ಮಾರ್ಷಲ್, ಜೋಯಲ್ ಗಾರ್ನರ್, ಮೈಕಲ್ ಹೋಲ್ಡಿಂಗ್ ಮತ್ತು ಕರ್ಟ್ಲಿ ಎಂಬ್ರೋಸ್ ಬಳಿಕದ ಅತ್ಯಂತ ಶ್ರೇಷ್ಠ ವೇಗಿ ಆಸ್ಟ್ರೇಲಿಯಾದ ಬ್ರೆಟ್ ಲೀ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ವಿವಿಯನ್ ರಿಚರ್ಡ್ಸ್ ಅಭಿಪ್ರಾಯಪಟ್ಟಿದ್ದಾರೆ.

ಬ್ರೆಟ್ ಲೀ ಅವರು ತಮ್ಮ 171ನೇ ಏಕದಿನ ಪಂದ್ಯದಲ್ಲಿ ಬ್ರೆಟ್ ಲೀ ಅವರು ಮೈಲಿಗಲ್ಲೊಂದನ್ನು ತಲುಪಿದ್ದು, ಅತ್ಯಂತ ವೇಗವಾಗಿ 300ನೇ ವಿಕೆಟ್ ಕಿತ್ತ ಬೌಲರ್ ಎನಿಸಿದರು. ಈ ಹಿಂದಿನ ದಾಖಲೆಯು ಪಾಕಿಸ್ತಾನದ ವಕಾರ್ ಯೂನಿಸ್ ಹೆಸರಲ್ಲಿದ್ದು, ಅವರಿಗಿಂತಲೂ 15 ಪಂದ್ಯಗಳ ಮುಂಚೆಯೇ ಲೀ ಈ ಸಾಧನೆ ಮಾಡಿದ್ದಾರೆ.

ಲೀ ಅವರು ವೆಸ್ಟಿಂಡೀಸ್ ವೇಗಿಗಳ ಸಾಲಿನಲ್ಲಿ ನಿಲ್ಲಲು ಸಮರ್ಥವಾದ ಪ್ರದರ್ಶನ ನೀಡಿದ್ದಾರೆ ಎಂದು ರಿಚರ್ಡ್ಸ್ ಹೇಳಿರುವುದನ್ನು ಉಲ್ಲೇಖಿಸಿ ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

31ರ ಹರೆಯದ ವೇಗಿಯ ಸ್ಥಿರತೆಯಿಂದ ಪ್ರಭಾವಿತರಾಗಿರುವ ಅವರು, ಲೀ ಕಾಪಾಡಿಕೊಂಡಿರುವ ದೈಹಿಕ ಸಾಮರ್ಥ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
ಮತ್ತಷ್ಟು
ಜಯದ ಅನಿವಾರ್ಯತೆಯಲ್ಲಿ ಪಾಕ್: ಫೈನಲ್ ಹಾದಿ ದುರ್ಗಮ
ಗೋನಿಯಿಂದ ಕೊಲೆ ಬೆದರಿಕೆ: ತಾಯಿ ಆರೋಪ
ವಿಶ್ವದಾಖಲೆಯ ವಿಜಯ ದಾಖಲಿಸಿದ ಕಿವೀಸ್
ಜಿಂಬಾಂಬ್ವೆ ಹಣೆಬರಹ ನಾಳೆ ನಿರ್ಧಾರ
ಏಷ್ಯಾ ಕಪ್ ಹಣಾಹಣಿಯ ಸಂಖ್ಯಾ ಸ್ವಾರಸ್ಯ!
300 ವಿಕೆಟ್‌ಗಳ ಸರದಾರ ಬ್ರೇಟ್ ಲೀ