ಭಾರತದ 308 ರನ್‌ಗಳ ಬ್ರಹತ್ ಸವಾಲಿಗೆ ಸ್ವಲ್ಪವೂ ಅಂಜದ ಪಾಕ್ ಪಡೆಯು, ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷಿಯಾ ಕಪ್‌ನ ಸೂಪರ್ ಪೋರ್ ಪಂದ್ಯದಲ್ಲಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ಅನುಭವಿ ಯೂನಿಸ್ ಖಾನ್‌ರ ಅಜೇಯ ಶತಕದ ಫಲವಾಗಿ ಎದುರಾಳಿ ಭಾರತವನ್ನು 8 ವಿಕೆಟುಗಳಿಂದ ಸೋಲಿಸಿ ಫೈನಲ್ ಪ್ರವೇಶಗಾಗಿನ ತಮ್ಮ ಅವಕಾಶವನ್ನು ಜೀವಂತವಿರಿಸಿದೆ.
ಭಾರತದ ಬೌಲರ್‌ಗಳ ದಾಳಿಗೆ ಸ್ವಲ್ಪವೂ ತತ್ತರಿಸಿದ ಪಾಕಿಸ್ತಾನ ಬ್ಯಾಟ್‌ಮನ್‌ಗಳು ತನ್ನ ಕೇವಲ ಎರಡು ವಿಕೆಟುಗಳನ್ನು ಕಳೆದುಕೊಂಡು ಇನ್ನೂ 27 ಬೌಲುಗಳು ಉಳಿದಿರುವಂತೆಯೇ ಅತ್ಯಗತ್ಯವಾಗಿದ್ದ ಜಯದ ಹೊಸ್ತಿಲನ್ನು ದಾಟಿ, ಟೂರ್ನಮೆಂಟಿನಲ್ಲಿನ ತನ್ನ ಭೇಟೆಯನ್ನು ಜೀವಂತವಿರಿಸಿತು.
ಪಾಕಿಸ್ತಾನದ ಅನುಭವಿ ಆಟಗಾರ ಯೂನಿಸ್ ಖಾನ್ ತಮ್ಮ ಶ್ರೇಷ್ಠತೆಯನ್ನು ಮೆರೆದು, ಭಾರತದ ಬೌಲರುಗಳನ್ನು ನಿರಾಯಾಸವಾಗಿ ಎದುರಿಸಿ ಅಜೇಯ ಶತಕ (123) ಭಾರಿಸಿ ತಮ್ಮ ಎದುರಿಗಿದ್ದ ಭಾರಿ ಸವಾಲನ್ನು ಸುಲಭವಾಗಿ ತುಲುಪುವಂತೆ ಮಾಡಿದರು.
ಇವರಿಗೆ ಸಲ್ಮಾನ್ ಭಟ್ (36), ನಸೀರ್ ಜಮ್ಶೇದ್ (53) ಮತ್ತು ಉಸ್ತುವಾರಿ ನಾಯಕ ಮಿಸ್ಬಾ ಉಲ್ ಹಕ್ (70) ಉತ್ತಮ ಸಾತ್ ನೀಡಿದರು. ಈ ಕಡೆ ಭಾರತದ ಪರ ಸ್ಪಿನ್ನರ್ ಪೀಯುಶ್ ಚಾವ್ಲಾ ಪಾಕಿಸ್ತಾನದ ಮೊದಮ್ಮದ್ ಯೂಸುಪ್ (21)ರ ಏಕ ಮಾತ್ರ ವಿಕೆಟನ್ನು ಕಬಳಿಸುವಲ್ಲಿ ಸಾಧ್ಯವಾಯಿತು. ಸಲ್ಮಾನ್ ಭಟ್‌ರ ರನ್ ಔಟ್ ರೂಪದಲ್ಲಿ ಮತ್ತೊಂದು ವಿಕೆಟ್ ಬಂದಿತು. ಇದು ಬಿಟ್ಟರೆ ಭಾರತದ ಯಾವ ಬೌಲರುಗಳು ಯೂನಿಸ್ ಖಾನ್‌ರ ಆಕರ್ಷಕ ಆಟದ ಎದುರು ಸಫಲರಾಗಲಿಲ್ಲ. ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದ ಯೂನಿಸ್ ಖಾನ್ ತಮ್ಮ ಅಜೇಯ ಶತಕದಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ಎತ್ತಿದ್ದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಶೆಹವಾಗ್ ಮತ್ತು ಗಂಭೀರ್ ರೂಪದಲ್ಲಿ ಆಕ್ರಮಣಕಾರಿ ಆರಂಭ ಕಂಡಿತು. ಶೆಹವಾಗ್ ತಮ್ಮ ಎಂದಿನ ಶೈಲಿಯಲ್ಲಿ ರಭಸದ 49 ರನ್ನು ಮಾಡಿ ಪೆವಿಲಿಯನ್‌ಗೆ ತೆರಳಿದರೆ, ಗಂಭೀರ್ 35 ರನ್ನು ಮಾಡಿ ಇಫ್ತಿಕಾರ್ ಬೌಲಿಗೆ ಬಲಿಯಾದರು.
ಉತ್ತಮ ಆರಂಭ ಕಂಡ ಭಾರತ ಮಧ್ಯಮ ಕ್ರಮಾಂಕ ಬಹು ಬೇಗ ಕುಸಿತ ಕಂಡಿತು. ರೈನಾ (1) ಮತ್ತು ಉಪನಾಯಕ ಯುವರಾಜ್ ಸಿಂಗ್ (37) ಹೆಚ್ಚು ಪ್ರತಿರೋದ ತೋರದೆ ಪೆವಿಲಿಯನ್‌ಗೆ ತೆರಳಿದರು. ಆಗ ಭಾರತದ ಮೊತ್ತ 4 ವಿಕೆಟ್ ನಷ್ಟಕ್ಕೆ 129 ರನ್ನು ಆಗಿತ್ತು.
ತದ ನಂತರ ನಾಯಕ ಧೋನಿ ಮತ್ತು ಶರ್ಮಾ ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಸಾವಧಾನವಾಗಿ ಆಡಿ 112 ರನ್ನು ಗಳ ಜತೆಯಾಟ ನೀಡಿ ತಂಡದ ಮೊತ್ತವನ್ನು 250ರ ಸನಿಹಕ್ಕೆ ತಂದರು. ಶರ್ಮಾ (58) ತಮ್ಮ ಹೊಣೆ ಭರಿತ ಆಟ ಪ್ರದರ್ಶಿಸಿ ಇಪ್ತಿಕಾರ್‌ಗೆ ವಿಕೆಟ್ ಒಪ್ಪಿಸಿದರು. ಈ ಕಡೆ ನಾಯಕ ಧೋನಿ (76) ತನ್ನ ನಾಯಕನ ಆಟ ಆಡಿ ತಂಡವನ್ನು 300ರ ಸನಿಹಕ್ಕೆ ತಂದು ಮುಟ್ಟಿಸಿ, ಸೊಹೇಲ್ ತನ್ವೀರ್ ಬೌಲಿಗೆ ವಿಕೆಟ್ ಒಪ್ಪಿಸಿದರು. ಐಪಿಎಲ್ ಹಿರೋ ಯೂಸುಪ್ ಪಠಾಣ್(0) ಮತ್ತೊಮ್ಮೆ ವಿಫಲರಾದರೆ, ಅವರ ಸಹೋದರ ಇರ್ಪಾನ್ ಪಠಾಣ್ (38) ಕೆಲ ಆಕ್ರಮಣಕಾರಿ ಆಟ ಆಡಿ ಕೊನೆಯದಾಗಿ ತಂಡ 300ರ ಗಡಿ ದಾಟುವಂತೆ ಮಾಡಿದರು.
ಪಾಕಿಸ್ತಾನ ಪರ ಇಪ್ತಿಕಾರ್ 3, ಅಬ್ದುರ್ ರೌಪ್ 2, ಸೊಹೇಲ್ ತನ್ವೀರ್ ಮತ್ತು ಸಯೀದ್ ಅಜ್ಮಲ್ ತಲಾ ಒಂದು ವಿಕೆಟ್ ಕಬಳಿಸಿದರು.
|