ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಓವಲ್ ಟೆಸ್ಟ್ 'ಡ್ರಾ' ಘೋಷಿಸಲು ಐಸಿಸಿ ಸಮ್ಮತಿ?  Search similar articles
2006ರಲ್ಲಿ ಪಾಕಿಸ್ತಾನ-ಇಂಗ್ಲೆಂಡ್ ನಡುವಣ ವಿವಾದಾತ್ಮಕ ಓವಲ್ ಟೆಸ್ಟ್ ಪಂದ್ಯವನ್ನು ಡ್ರಾ ಎಂದು ಘೋಷಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿರುವುದರೊಂದಿಗೆ, ಪಾಕಿಸ್ತಾನವು ನೈತಿಕ ವಿಜಯ ಸಾಧಿಸುವಂತಾಗಿದೆ.

ಬುಧವಾರ ನಡೆದ ಮಂಡಳಿ ಸಭೆಯಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಈ ಪಂದ್ಯದ ಫಲಿತಾಂಶ ಬದಲಾಯಿಸಲೇಬೇಕೆಂದು ಪಟ್ಟು ಹಿಡಿದಿದ್ದು, ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೂಲಗಳು ತಿಳಿಸಿವೆ.

ಚೆಂಡು ವಿರೂಪಗೊಳಿಸಿದ ಆರೋಪ ಮಾಡಿದ್ದಕ್ಕಾಗಿ ಟೆಸ್ಟ್ ಪಂದ್ಯದ ನಾಲ್ಕನೇ ದಿನ, ಚಹಾ ವಿರಾಮದ ಬಳಿಕ ಫೀಲ್ಡ್‌ಗೆ ಬರಲು ಇಂಜಮಾಮ್ ಉಲ್ ಹಕ್ ನೇತೃತ್ವದ ಪಾಕಿಸ್ತಾನ ತಂಡವು ನಿರಾಕರಿಸಿದ ಹಿನ್ನೆಲೆಯಲ್ಲಿ ಅಂಪೈರ್ ಡರೆಲ್ ಹೇರ್ ಅವರು ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆಂಬಂತೆ ಎದುರಾಳಿ ತಂಡವಾದ ಇಂಗ್ಲೆಂಡನ್ನು ವಿಜೇತ ಎಂದು ಘೋಷಿಸಿದ್ದರು.

ಇಡೀ ಪ್ರಕರಣದಲ್ಲಿ ಡರೆಲ್ ಹೇರ್ ಅವರು ಸರಿಯಾಗಿ ವರ್ತಿಸಿಲ್ಲ ಎಂದು ಪರಿಶೀಲನೆಯ ನಂತರ ಕಂಡುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಡ್ರಾ ಆಗಿ ಘೋಷಿಸಬೇಕೆಂಬ ನಮ್ಮ ನಿಲುವಿಗೆ ಮಂಡಳಿ ಸದಸ್ಯರು ಬೆಂಬಲಿಸಿದರು ಎಂದು ಈ ಮೂಲಗಳು ಹೇಳಿವೆ.

ಪ್ರಕರಣದ ಹಿನ್ನೆಲೆಯಲ್ಲಿ ಹೇರ್ ಅವರನ್ನು ನಂತರ ಅಮಾನತುಗೊಳಿಸಲಾಗಿದ್ದನ್ನು ಪಾಕಿಸ್ತಾನವು ಎತ್ತಿ ತೋರಿಸಿದ ಬಳಿಕ ಐಸಿಸಿಯು ಫಲಿತಾಂಶ ಬದಲಾವಣೆಗೆ ಒಪ್ಪಿತು ಎಂದೂ ಅವುಗಳು ತಿಳಿಸಿವೆ.
ಮತ್ತಷ್ಟು
ಐರ್ಲೆಂಡ್ ಸೋಲಿಸಿದ ಸ್ಕಾಟ್ಲೆಂಡ್ ಫೈನಲಿಗೆ
ಭಾರತ ವಿರುದ್ಧ ಪಾಕ್‌ಗೆ 8 ವಿಕೆಟ್ ಗೆಲುವು
ಪಾಕಿಸ್ತಾನ ಗೆಲುವಿಗೆ 309 ರನ್ ಗುರಿ
ಹೋಲ್ಡಿಂಗ್, ಮಾರ್ಷಲ್ ಸಾಲಿನಲ್ಲಿ ಲೀ: ರಿಚರ್ಡ್ಸ್
ಜಯದ ಅನಿವಾರ್ಯತೆಯಲ್ಲಿ ಪಾಕ್: ಫೈನಲ್ ಹಾದಿ ದುರ್ಗಮ
ಗೋನಿಯಿಂದ ಕೊಲೆ ಬೆದರಿಕೆ: ತಾಯಿ ಆರೋಪ