ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏಷಿಯಾ ಕಪ್: ಭಾರತ ಫೈನ‌ಲ್‌ಗೆ  Search similar articles
ಗೌತಂ ಗಂಭೀರ್, ನಾಯಕ ಧೋನಿ, ಸುರೈಶ್ ರೈನಾ ಅವರ ಅರ್ಧಶತಕಗಳ ಸಹಾಯದಿಂದ ಗುರುವಾರ ನಡೆದ ಏಶಿಯಾ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ಭಾರತವು ಶ್ರೀಲಂಕಾಗೆ ಆರು ವಿಕೆಟ್‌ಗಳ ಸೋಲುಣಿಸಿದೆ.

ಎದುರಾಳಿ ಶ್ರೀಲಂಕಾ ನೀಡಿದ 308 ರನ್‌ಗಳ ಸವಾಲಿನ ಗುರಿಯನ್ನು ಇನ್ನೂ 19 ಎಸೆತ ಬಾಕಿ ಇರುವಾಗಲೇ ತಲುಪಿದ ಟೀಂ ಇಂಡಿಯಾವು, ಏಶಿಯಾ ಕಪ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಭಾರತ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸೆಹ್ವಾಗ್, ಗಂಭೀರ್‌ನಿಂದ ಹಿಡಿದು ಶರ್ಮಾ ವರೆಗೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ದೊಡ್ಡ ಸವಾಲನ್ನು ಎದುರಿಸುವಲ್ಲಿ ಅಗತ್ಯವಿರಬೇಕಾದ ದೈರ್ಯ ಮತ್ತು ಸಹನೆಯನ್ನು ಪ್ರದರ್ಶಿಸಿದರು.

ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸೆಹ್ವಾಗ್ ಮತ್ತು ಗಂಭೀರ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್‌ಗೆ ಮೊರೆಹೋಗಿ, ಲಂಕಾ ಬೌಲರುಗಳನ್ನು ಕಾಡಿದರು. ತಮ್ಮ ಮಿಂಚಿನ ಆಟವನ್ನು ಮುಂದುವರಿಸಿರುವ ಸೆಹ್ವಾಗ್ ಮತ್ತೊಮ್ಮೆ ಹೊಡೆಬಡಿ ಆಟಕ್ಕೆ ಕೈಹಾಕಿ ಮಿಂಚಿನ 42 ರನ್ನುಗಳನ್ನು ಮಾಡಿ ಕುಲಸೇಕರ ಬೌಲಿಗೆ ಔಟಾದರು. ಈ ಕಡೆ ತಮ್ಮ ಸ್ಥಿರತೆಯ ಆಟವನ್ನು ಮುಂದುವರಿಸಿರುವ ಗಂಭೀರ್ ಸಾವಧಾನಯುತವಾಗಿ ಆಡಿ ಭಾರತದ ಸ್ಕೋರ್ ಬೋರ್ಡ್ ಚಲಿಸುವಂತೆ ಮಾಡಿದರು. ಇವರಿಗೆ ರೈನಾ ಉತ್ತಮ ಸಾತ್ ನೀಡಿದರು.

ತಮ್ಮ 11ನೇ ಏಕದಿನ ಅರ್ಧಶತಕ ಬಾರಿಸಿದ ಗಂಭೀರ್ (68) ಕೊನೆಯದಾಗಿ ಮುರಳೀಧರನ್‌ರ ಎಲ್ಬಿ ಬಲೆಗೆ ಬಿದ್ದರು. ನಂತರ ರೈನಾ ಮತ್ತು ನಾಯಕ ಧೋನಿ ಈ ದೊಡ್ಡ ಮೊತ್ತದ ಸವಾಲನ್ನು ಬೆನ್ನಟ್ಟುವ ಜವಬ್ದಾರಿಯನ್ನು ವಹಿಸಿಕೊಂಡರು. ರೈನಾ (54) ತಮ್ಮ ಉತ್ತಮ ಆಟವನ್ನು ಮುಂದುವರಿಸಿದ್ದು ಏಷಿಯಾ ಕಪ್‌ನಲ್ಲಿನ ತಮ್ಮ ಎರಡನೇ ಹಾಗೂ ಒಟ್ಟು 5ನೇ ಏಕದಿನ ಅರ್ಧಶತಕ ಬಾರಿಸಿದರು. ಅಂತಿಮವಾಗಿ ರೈನಾ ರನ್ ಕಸಿಯುವ ಭರದಲ್ಲಿ ರನೌಟ್‌ಗೆ ಬಲಿಯಾದರು. ಈ ಕಡೆ ಪಂದ್ಯ ಪುರುಷೋತ್ತಮ ಧೋನಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಚಳಕವನ್ನು ತೋರಿಸಿ ಭಾರತವನ್ನು ಗೆಲವಿನ ಹಂತಕ್ಕೆ ಕೊಂಡೊಯ್ದರು. ಧೋನಿ (67) ಮುರಳೀಧರ್ ಬೌಲಿಗೆ ಬೌಲ್ಡ್ ಆದರು.

ನಂತರ ಯುವರಾಜ್ ಸಿಂಗ್ (36) ಮತ್ತು ಶರ್ಮಾ (22) ತಮ್ಮ ಮುಂದಿದ್ದ ಗೆಲುವಿನ ಗುರಿಯನ್ನು ಸುಲಭವಾಗಿ ತಲುಪಿ, ಭಾರತದ ಪಾಳಯದಲ್ಲಿ ನೆಮ್ಮದಿಯ ನಗೆ ಬೀರುವಂತೆ ಮಾಡಿದರು.

ಇದಕ್ಕೂ ಮುಂಚೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ನಾಯಕ ಜಯವರ್ಧನೆ (50), ಕಪುಗೆದೆರ (75) ಮತ್ತು ಸಿಲ್ವಾ (50)ರ ಅರ್ಧಶತಕದ ಆಟದ ಪರಿಣಾಮವಾಗಿ ಭಾರತದ ಎದುರು 8 ವಿಕೆಟ್ ನಷ್ಟಕ್ಕೆ 308 ರನ್ನುಗಳ ಮತ್ತೊಂದು ಬೃಹತ್ ಮೊತ್ತವನ್ನು ಪೇರಿಸಿತ್ತು. ಆರಂಭಿಕ ಆಟಗಾರ ಜಯಸೂರ್ಯ (43) ತಮ್ಮ ಎಂದಿನ ಶೈಲಿಯಲ್ಲಿ ಮಿಂಚಿನ ಆಟಕ್ಕೆ ಮೊರೆ ಹೋಗಿ, ಶ್ರೀಲಾಂಕಾಗೆ ಆರಂಭಿಕ ಆವೇಗ ನೀಡಿದ್ದರು.

ಭಾರತ ಪರ ಇಶಾಂತ್ ಶರ್ಮಾ 2, ಆರ್‌ಪಿ ಸಿಂಗ್, ಇರ್ಪಾನ್ ಪಠಾಣ್, ಪ್ರವೀಣ್ ಕುಮಾರ್ ಮತ್ತು ಒಹ್ಜಾ ತಲಾ ಒಂದು ವಿಕೆಟನ್ನು ಕಬಳಿಸಿದರು.
ಮತ್ತಷ್ಟು
309 ರನ್ ಸವಾಲು ಪೇರಿಸಿದ ಶ್ರೀಲಂಕಾ
ಸ್ಪಿನ್ನರ್ ಕೊರತೆ, ಕೈಗೂಡದ ತಂತ್ರ: ಧೋನಿ
ಓವಲ್ ಟೆಸ್ಟ್ 'ಡ್ರಾ' ಘೋಷಿಸಲು ಐಸಿಸಿ ಸಮ್ಮತಿ?
ಐರ್ಲೆಂಡ್ ಸೋಲಿಸಿದ ಸ್ಕಾಟ್ಲೆಂಡ್ ಫೈನಲಿಗೆ
ಭಾರತ ವಿರುದ್ಧ ಪಾಕ್‌ಗೆ 8 ವಿಕೆಟ್ ಗೆಲುವು
ಪಾಕಿಸ್ತಾನ ಗೆಲುವಿಗೆ 309 ರನ್ ಗುರಿ