ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಸಿಸಿ: ಗಾವಸ್ಕರ್ ಸ್ಥಾನದಲ್ಲಿ ಕ್ಲೈವ್ ಲಾಯ್ಡ್  Search similar articles
ಸುನಿಲ್ ಗಾವಸ್ಕರ್ ರಾಜೀನಾಮೆಯಿಂದ ತೆರವಾಗಿದ್ದ ಉನ್ನತಾಧಿಕಾರದ ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕ್ಲೈವ್ ಲಾಯ್ಡ್ ಅವರನ್ನು ನೇಮಿಸಲಾಗಿದೆ.

ಈ ಸ್ಥಾನಕ್ಕೆ ಪಾಕಿಸ್ತಾನದ ಮಾಜಿ ನಾಯಕ ಮಜೀದ್ ಖಾನ್ ಅವರು ಕೂಡ ಆಕಾಂಕ್ಷಿಯಾಗಿದ್ದರು. ಐಸಿಸಿ ಮಂಡಳಿಯು ಗುರುವಾರ ಲಾಯ್ಡ್ ಹೆಸರನ್ನು ಅಂತಮಗೊಳಿಸಿದ್ದು, ಐಸಿಸಿ ನೀತಿ ಸಂಹಿತೆ ಆಯೋಗದ ಅಧ್ಯಕ್ಷರನ್ನಾಗಿ ಮೈಕೆಲ್ ಬೆಲೋಫ್ ಅವರನ್ನು ಉಳಿಸಿಕೊಂಡಿದೆ.

ಇದೇ ವೇಳೆ, ಮಜೀದ್ ಅವರು ನಾಮಪತ್ರ ಹಿಂತೆಗೆದುಕೊಂಡ ಕಾರಣದಿಂದ ಲಾಯ್ಡ್ ಅವರನ್ನು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೂಲಗಳು ತಿಳಿಸಿವೆ.

ಹಿರಿಯ ಅಧಿಕಾರಿ ಸಲೀಂ ಅಲ್ತಾಫ್ ಅವರನ್ನು ಉಚ್ಚಾಟಿಸಿದ್ದಕ್ಕೆ ಮತ್ತು ಕ್ರಿಕೆಟನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಮಜೀದ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ವಾಕ್ಪ್ರಹಾರ ನಡೆಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಪಿಸಿಬಿ, ಅವರ ನಾಮಪತ್ರವನ್ನೇ ಹಿಂತೆಗೆದುಕೊಂಡು ಪ್ರತೀಕಾರ ಕೈಗೊಂಡಿತ್ತು.
ಮತ್ತಷ್ಟು
ಏಷಿಯಾ ಕಪ್: ಭಾರತ ಫೈನ‌ಲ್‌ಗೆ
309 ರನ್ ಸವಾಲು ಪೇರಿಸಿದ ಶ್ರೀಲಂಕಾ
ಸ್ಪಿನ್ನರ್ ಕೊರತೆ, ಕೈಗೂಡದ ತಂತ್ರ: ಧೋನಿ
ಓವಲ್ ಟೆಸ್ಟ್ 'ಡ್ರಾ' ಘೋಷಿಸಲು ಐಸಿಸಿ ಸಮ್ಮತಿ?
ಐರ್ಲೆಂಡ್ ಸೋಲಿಸಿದ ಸ್ಕಾಟ್ಲೆಂಡ್ ಫೈನಲಿಗೆ
ಭಾರತ ವಿರುದ್ಧ ಪಾಕ್‌ಗೆ 8 ವಿಕೆಟ್ ಗೆಲುವು