ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ಶರಣಾದ ಲಂಕೆ: ಪಾಕಿಸ್ತಾನೀಯರಿಗೆ ಶಂಕೆ  Search similar articles
ಗುರುವಾರ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ಶ್ರೀಲಂಕಾವು ಭಾರತದೆದುರು ತಲೆಬಾಗಿದ ರೀತಿಯ ಬಗ್ಗೆ ಶಂಕೆಯ ಕರಿನೆರಳು ಕಂಡುಬಂದಿದ್ದು, ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಅಪಸ್ವರ ಎತ್ತಿದ್ದಾರೆ.

ಈ ಮಹತ್ವದ ಪಂದ್ಯದಲ್ಲಿ ಭಾರತ ಗೆದ್ದ ಕಾರಣದಿಂದಾಗಿ ಆತಿಥೇಯ ಪಾಕಿಸ್ತಾನವು ಏಷ್ಯಾ ಕಪ್‌ನಿಂದ ಹೊರಬಿದ್ದಂತಾಗಿದ್ದು, ಶ್ರೀಲಂಕಾಕ್ಕೆ ಗೆಲ್ಲುವ ಛಲ ಇದ್ದಂತಿಲ್ಲ ಎಂದು ವಕಾರ್ ಯೂನಿಸ್ ಮತ್ತು ರಮೀಜ್ ರಾಜಾ ಅವರು ಆಕ್ಷೇಪಿಸಿದ್ದಾರೆ.

ಭಾರತಕ್ಕಿದು ಫೈನಲ್‌ಗೇರಬೇಕಿದ್ದರೆ ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ಆದರೆ ಈಗಾಗಲೇ ಫೈನಲ್ ತಲುಪಿರುವ ಶ್ರೀಲಂಕಾ ಜಯಿಸಿದ್ದರೆ ಪಾಕಿಸ್ತಾನವು ಭಾನುವಾರದ ಫೈನಲ್ ಪ್ರವೇಶಿಸುವ ಹಾದಿ ಸುಗಮವಾಗುತ್ತಿತ್ತು. ಆದರೆ ಶ್ರೀಲಂಕಾವು ಫಾರ್ಮ್‌ನಲ್ಲಿದ್ದ ಚಮಿಂಡಾ ವಾಸ್ ಮತ್ತು ಅಜಂತಾ ಮೆಂಡಿಸ್ ಅವರಿಗೆ ವಿಶ್ರಾಂತಿ ನೀಡಿ ಎರಡನೇ ಸ್ತರದ ಬೌಲಿಂಗ್ ತಂಡವನ್ನು ಕಣಕ್ಕಿಳಿಸಿತ್ತು.

ಇದು ಭಾರತಕ್ಕೆ ಪೂರಕವಾಗಿ, ಭಾರತದ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಶ್ರೀಲಂಕಾಕ್ಕೆ ಸೀಮಿತ ಅವಕಾಶ ನೀಡಿತ್ತು. ಇದು ಪಾಕಿಸ್ತಾನದ ಮಾಜಿ ಆಟಗಾರರ ಹುಬ್ಬೇರಲು ಕಾರಣವಾಗಿದ್ದು, ಬಹಿರಂಗವಾಗಿಯೇ ಶ್ರೀಲಂಕಾದ ಉದ್ದೇಶವನ್ನು ಪ್ರಶ್ನಿಸಿದ್ದರು.

ರಮೀಜ್ ರಾಜಾ ಅವರು ಲೈವ್ ಕಾಮೆಂಟರಿ ಸಂದರ್ಭದಲ್ಲಿ, ಈ ಪಂದ್ಯದಲ್ಲಿ ಶ್ರೀಲಂಕಾ ಪೂರ್ಣವಾಗಿ ತೊಡಗಿಸಿಕೊಂಡಂತಿಲ್ಲ. ಯಾವುದೇ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನ್ನಿಂಗ್ಸ್ ಕಟ್ಟಲು ಮನಸ್ಸು ಮಾಡಿಲ್ಲ. ಜಯಸೂರ್ಯ ಅವರು ಕ್ರೀಸ್‌ನಲ್ಲೇ ಬೋರ್ ಆದವರಂತೆ ಕಂಡುಬಂದರು. ಆಟಕ್ಕೆ ಹೊಂದಿಕೊಂಡಂತಿದ್ದಾಗ ಅವರು ವಿಕೆಟ್ ಕೈಚೆಲ್ಲಿದರು ಎಂದು ರಾಜಾ ಹೇಳಿದ್ದರು.

ವಕಾರ್ ಅವರು ಹೇಳಿದಂತೆ, ನಾಯಕ ಮಹೇಲ ಜಯವರ್ಧನೆ ಅವರು ಗುರುವಾರದ ಪಂದ್ಯದಲ್ಲಿ ನೈಜ ಕ್ರಿಯಾಶೀಲತೆ ತೋರಿದಂತಿಲ್ಲ. ಬೌಲರುಗಳ ಬಳಕೆಯು ಕೂಡ ನನ್ನ ಪ್ರಕಾರ, ಅವರ ಸಾಮರ್ಥ್ಯಕ್ಕೆ ತಕ್ಕುದಾಗಿರಲಿಲ್ಲ ಎಂದಿದ್ದರು.

ಆದರೆ ಫಲಿತಾಂಶದ ಮೇಲೆ ಪ್ರಭಾವವಾಗುವಂತೆ ಆಡಿದ ಕುರಿತಾದ ಹೇಳಿಕೆಗಳನ್ನು ಲಂಕಾ ನಾಯಕ ಜಯವರ್ಧನೆ ನಿರಾಕರಿಸಿದ್ದಾರೆ.
ಮತ್ತಷ್ಟು
ಓವಲ್ ವಿವಾದ: ಪರಿಹಾರದ ನಿರೀಕ್ಷೆಯಲ್ಲಿ ಇಂಜಿ
ಐಸಿಸಿ: ಗಾವಸ್ಕರ್ ಸ್ಥಾನದಲ್ಲಿ ಕ್ಲೈವ್ ಲಾಯ್ಡ್
ಏಷಿಯಾ ಕಪ್: ಭಾರತ ಫೈನ‌ಲ್‌ಗೆ
309 ರನ್ ಸವಾಲು ಪೇರಿಸಿದ ಶ್ರೀಲಂಕಾ
ಸ್ಪಿನ್ನರ್ ಕೊರತೆ, ಕೈಗೂಡದ ತಂತ್ರ: ಧೋನಿ
ಓವಲ್ ಟೆಸ್ಟ್ 'ಡ್ರಾ' ಘೋಷಿಸಲು ಐಸಿಸಿ ಸಮ್ಮತಿ?