ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಖ್ತರ್ ಮೇಲಿನ ನಿಷೇಧ ರದ್ದು: ದಂಡ ಕಡ್ಡಾಯ  Search similar articles
PTI
ಪಾಕಿಸ್ತಾನ ವೇಗಿ ಶೋಯಬ್ ಅಖ್ತರ್ ಮೇಲೆ ವಿಧಿಸಿದ್ದ ಪಂದ್ಯ ನಿಷೇಧವನ್ನು ಲಾಹೋರ್ ಹೈಕೋರ್ಟ್ ರದ್ದುಗೊಳಿಸಿದೆ. 18 ತಿಂಗಳ ನಿಷೇಧವನ್ನು ಪ್ರಶ್ನಿಸಿ ಅಖ್ತರ್ ಅವರು ಲಾಹೋರ್ ಹೈಕೋರ್ಟ್ ಮೊರೆ ಹೋಗಿದ್ದರು.

ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿಧಿಸಿದ್ದ ದಂಡವನ್ನು ಅವರು ಪಾವತಿಸಬೇಕಾಗುತ್ತದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿಯು ಆರಂಭದಲ್ಲಿ ಅಖ್ತರ್ ಅವರಿಗೆ ಐದು ವರ್ಷ ನಿಷೇಧ ಹೇರಿತ್ತು. ಆ ಬಳಿಕ ನ್ಯಾಯ ಮಂಡಳಿಯ ತೀರ್ಪಿನ ಅನುಸಾರ ನಿಷೇಧವನ್ನು 18 ತಿಂಗಳಿಗೆ ಇಳಿಸಲಾಗಿತ್ತು ಮತ್ತು 70 ಲಕ್ಷ ರೂ. ದಂಡ ವಿಧಿಸಲಾಗಿತ್ತು.

18 ತಿಂಗಳ ನಿಷೇಧವು ಅಕ್ರಮ ಮತ್ತು ಅನ್ಯಾಯ ಎಂದು ಬಣ್ಣಿಸಿದ ಅಖ್ತರ್, ಹೈಕೋರ್ಟ್‌ಗೆ ಈ ತೀರ್ಪಿನ ವಿರುದ್ಧ ಮನವಿ ಸಲ್ಲಿಸಿದ್ದರು.
ಮತ್ತಷ್ಟು
ಭಾರತಕ್ಕೆ ಶರಣಾದ ಲಂಕೆ: ಪಾಕಿಸ್ತಾನೀಯರಿಗೆ ಶಂಕೆ
ಓವಲ್ ವಿವಾದ: ಪರಿಹಾರದ ನಿರೀಕ್ಷೆಯಲ್ಲಿ ಇಂಜಿ
ಐಸಿಸಿ: ಗಾವಸ್ಕರ್ ಸ್ಥಾನದಲ್ಲಿ ಕ್ಲೈವ್ ಲಾಯ್ಡ್
ಏಷಿಯಾ ಕಪ್: ಭಾರತ ಫೈನ‌ಲ್‌ಗೆ
309 ರನ್ ಸವಾಲು ಪೇರಿಸಿದ ಶ್ರೀಲಂಕಾ
ಸ್ಪಿನ್ನರ್ ಕೊರತೆ, ಕೈಗೂಡದ ತಂತ್ರ: ಧೋನಿ