ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಓವಲ್ ಟೆಸ್ಟ್ ಫಲಿತಾಂಶ: ಹೋಲ್ಡಿಂಗ್ ರಾಜೀನಾಮೆ  Search similar articles
ಇಂಗ್ಲೆಂಡ್-ಪಾಕಿಸ್ತಾನ ನಡುವಣ 2006ರ ಓವಲ್ ಟೆಸ್ಟ್ ಪಂದ್ಯದ ಫಲಿತಾಂಶವನ್ನು ಮಾರ್ಪಡಿಸಿ ಡ್ರಾ ಎಂದು ಘೋಷಿಸಿರುವ ಐಸಿಸಿ ನಿರ್ಧಾರವನ್ನು ಪ್ರತಿಭಟಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಮೈಕೆಲ್ ಹೋಲ್ಡಿಂಗ್ ರಾಜೀನಾಮೆ ನೀಡಿದ್ದಾರೆ.

ಆ ಪಂದ್ಯದಲ್ಲಿ ಅಂಕಣಕ್ಕಿಳಿಯಲು ಪಾಕಿಸ್ತಾನದ ನಿರಾಕರಣೆಯನ್ನು ದಂಡಿಸದೆ ಇರಬಾರದು ಎಂದು ಐಸಿಸಿ ಕ್ರಿಕೆಟ್ ಸಮಿತಿಯ ಸದಸ್ಯರಾಗಿರುವ ವಿಂಡೀಸ್ ಮಾಜಿ ವೇಗಿ ಹೋಲ್ಡಿಂಗ್ ಹೇಳಿದ್ದಾರೆ.

ಐಸಿಸಿ ತೀರ್ಮಾನ ಸರಿಯಲ್ಲ. ಈ ಕಾರಣಕ್ಕೆ ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಿರುವ ಹೋಲ್ಡಿಂಗ್, ನಾನು ಭಾಗಿಯಾಗಲು ಇಚ್ಛಿಸದ ಹಲವಾರು ಸಂಗತಿಗಳು ನಡೆಯುತ್ತಿವೆ. ಈ ಕಾರಣಕ್ಕೆ ಹೊರಬರಲು ತೀರ್ಮಾನಿಸಿದ್ದೇನೆ ಎಂದು ಹೇಳಿರುವುದಾಗಿ ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನೀಯರು ಚೆಂಡು ವಿರೂಪಗೊಳಿಸಿದ್ದಾರೆ ಎಂದು ಅಂಪೈರುಗಳಾದ ಡರೆಲ್ ಹೇರ್ ಮತ್ತು ಬಿಲ್ಲಿ ಡಾಕ್ಟ್ರೋವ್ ಅವರು ಆರೋಪಿಸಿದ ಹಿನ್ನೆಲೆಯಲ್ಲಿ, ಚಹಾ ವಿರಾಮದ ನಂತರ ಆಟವಾಡಲು ಅಂಕಣಕ್ಕೆ ಇಳಿಸಲು ಪಾಕಿಸ್ತಾನ ನಿರಾಕರಿಸಿತ್ತು. ಈ ಕಾರಣಕ್ಕೆ ಪಂದ್ಯವನ್ನು ಜಫ್ತಿ ಎಂದು ಘೋಷಿಸಿ, ಇಂಗ್ಲೆಂಡ್ ತಂಡವು ವಿಜೇತ ಎಂದು ಘೋಷಿಸಲಾಗಿತ್ತು. ಗುರುವಾರವಷ್ಟೇ ಈ ನಿರ್ಧಾರವನ್ನು ಹಿಂತೆಗೆದುಕೊಂಡಿರುವ ಐಸಿಸಿ, ಪಂದ್ಯವನ್ನು ಡ್ರಾ ಎಂದು ಘೋಷಿಸಿತ್ತು.
ಮತ್ತಷ್ಟು
ಬಾಂಗ್ಲಾಗೆ 10 ವಿಕೆಟ್ ಸೋಲುಣಿಸಿದ ಪಾಕ್
ವಿಂಡಿಗರ ಎದುರು ಆಸೀಸ್‌ಗೆ 1 ರನ್ ರೋಮಾಂಚಕ ಜಯ
ಅಖ್ತರ್ ಮೇಲಿನ ನಿಷೇಧ ರದ್ದು: ದಂಡ ಕಡ್ಡಾಯ
ಭಾರತಕ್ಕೆ ಶರಣಾದ ಲಂಕೆ: ಪಾಕಿಸ್ತಾನೀಯರಿಗೆ ಶಂಕೆ
ಓವಲ್ ವಿವಾದ: ಪರಿಹಾರದ ನಿರೀಕ್ಷೆಯಲ್ಲಿ ಇಂಜಿ
ಐಸಿಸಿ: ಗಾವಸ್ಕರ್ ಸ್ಥಾನದಲ್ಲಿ ಕ್ಲೈವ್ ಲಾಯ್ಡ್