ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿ-20 ವಿಶ್ಪ ಕಪ್‌ಗೆ ಜಿಂಬಾಬ್ವೆ ಇಲ್ಲ, ಐಸಿಸಿ ಸದಸ್ಯತ್ವ ಅಬಾಧಿತ  Search similar articles
ಜಿಂಬಾಬ್ವೆ ವಿರುದ್ಧ ವಿಶ್ವದ ಆಕ್ರೋಶ ಮುಂದುವರಿದಿರುವಂತೆಯೇ, ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವ ಟ್ವೆಂಟಿ-20 ಚಾಂಪಿಯನ್‌ಶಿಪ್ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿದ್ದು ಅದರ ಮನವೊಲಿಸಲಾಗಿದ್ದು,, ಐಸಿಸಿ ಸದಸ್ಯತ್ವವನ್ನು ಉಳಿಸಿಕೊಳ್ಳಲಾಗಿದೆ.

ಎರಡು ದಿನಗಳ ತೀವ್ರ ಮಾತುಕತೆಯ ಬಳಿಕ ಮೂರನೇ ದಿನ ಶುಕ್ರವಾರ ಈ ವಿಷಯದಲ್ಲಿ ಸಭೆ ಸೇರಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಕಾರ್ಯಕಾರಿ ಮಂಡಳಿ, ವಿಶ್ವ ಟ್ವೆಂಟಿ-20 ಕೂಟದಿಂದ ಹಿಂದೆ ಸರಿಯುವ ಭಾರತದ ಸಲಹೆಯನ್ನು ಜಿಂಬಾಬ್ವೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಅದರ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಿತು.

ಆದರೆ, ಜಿಂಬಾಬ್ವೆ ಸದಸ್ಯತ್ವದ ಬಗ್ಗೆ ಚರ್ಚೆಯೇ ನಡೆಯಲಿಲ್ಲ ಎಂದು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಸಿ ನಿಯೋಜಿತ ಅಧ್ಯಕ್ಷ ಡೇವಿಡ್ ಮೋರ್ಗನ್ ಹೇಳಿದರು.

ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮೊಗಾಬೆ ಸರಕಾರದಡಿಯಲ್ಲಿ ರಾಜಕೀಯ ಅಸ್ಥಿರತೆಯನ್ನು ವಿರೋಧಿಸಿ ಬ್ರಿಟಿಷ್ ಸರಕಾರ, ಜಿಂಬಾಬ್ವೆ ಆಟಗಾರರಿಗೆ ವೀಸಾ ನೀಡುವುದಿಲ್ಲ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಟ್ವೆಂಟಿ-20 ಕೂಟದಲ್ಲಿ ಜಿಂಬಾಬ್ವೆ ಪಾಲ್ಗೊಳ್ಳುವಿಕೆ ಕಠಿಣವಾಗಿತ್ತು.
ಮತ್ತಷ್ಟು
ಓವಲ್ ಟೆಸ್ಟ್ ಫಲಿತಾಂಶ: ಹೋಲ್ಡಿಂಗ್ ರಾಜೀನಾಮೆ
ಬಾಂಗ್ಲಾಗೆ 10 ವಿಕೆಟ್ ಸೋಲುಣಿಸಿದ ಪಾಕ್
ವಿಂಡಿಗರ ಎದುರು ಆಸೀಸ್‌ಗೆ 1 ರನ್ ರೋಮಾಂಚಕ ಜಯ
ಅಖ್ತರ್ ಮೇಲಿನ ನಿಷೇಧ ರದ್ದು: ದಂಡ ಕಡ್ಡಾಯ
ಭಾರತಕ್ಕೆ ಶರಣಾದ ಲಂಕೆ: ಪಾಕಿಸ್ತಾನೀಯರಿಗೆ ಶಂಕೆ
ಓವಲ್ ವಿವಾದ: ಪರಿಹಾರದ ನಿರೀಕ್ಷೆಯಲ್ಲಿ ಇಂಜಿ