ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಭಾರತೀಯ ಸಂಸ್ಕೃತಿಗೆ ಬೌಲ್ಡ್ ಆದ ವಾರ್ನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯ ಸಂಸ್ಕೃತಿಗೆ ಬೌಲ್ಡ್ ಆದ ವಾರ್ನೆ
PTI
ಐಪಿಎಲ್‌ನಲ್ಲಿ ಎರಡು ಬಾರಿ ಆಡಿದ ನಂತರ ಭಾರತೀಯ ಸಂಸ್ಕೃತಿಗೆ ಸಂಪೂರ್ಣ ಬೌಲ್ಡ್ ಆಗಿರುವ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಹಾಗೂ ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ಶೇನ್ ವಾರ್ನೆ, ಭಾರತದ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಿಸಿಸಿಐ ಕೋಚ್ ಆಗಿ ಭಾರತಕ್ಕೆ ಸೇರಲು ಆಹ್ವಾನ ನೀಡಿದರೆ ಖಂಡಿತವಾಗಿಯೂ ಭಾರತಕ್ಕೆ ಬರಲು ಹರ್ಷಿಸುತ್ತೇನೆ ಎಂದು ವಾರ್ನೆ ಹೇಳಿದ್ದಾರೆ.

ನನಗೆ ಭಾರತದ ಸಂಸ್ಕೃತಿ, ಸಂಪ್ರದಾಯ ಎಲ್ಲವೂ ತುಂಬ ಇಷ್ಟವಾಗಿದೆ. ಭಾರತದ ಸಂಸ್ಕೃತಿಯ ಬಗ್ಗೆ ಅಚ್ಚರಿಯ ಜತೆಗೆ ಗೌರವವೂ ಮೂಡುತ್ತದೆ. ಆದರೂ ನನಗೆ ಅಲ್ಲಿನ ಸಂಸ್ಕೃತಿ ಅರ್ಥವಾಗಲೂ ಇನ್ನೂ ಸಮಯ ಹಿಡಿಯಬಹುದು. ನಾನಿನ್ನು ಹಲವು ಬಾರಿ ಭಾರತದಲ್ಲಿ ಪ್ರವಾಸ ಮಾಡಬೇಕೆಂದು ಬಯಸಿದ್ದೇನೆ. ಭಾರತದಿಂದ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಆಹ್ವಾನ ಬಂದರಂತೂ ನನ್ನ ಸತೋಷ ಇಮ್ಮಡಿಯಾಗುತ್ತದೆ ಎಂದು ವಾರ್ನೆ ವಿವರಿಸಿದ್ದಾರೆ.

ಬಿಸಿಸಿಐಗೆ ಸಂಬಂಧಿಸಿದಂತೆ ಹೇಳುವುದಾದರೆ, ನನಗೆ ಭಾರತದ ಬೌಲರುಗಳ ಜತೆಗೆ ಕೆಲಸ ಮಾಡಲು ಇಚ್ಛೆಯಿದೆ. ಭಾರತದ ಬೌಲರುಗಳಾದ ಯೂಸುಫ್ ಪಠಾಣ್, ರವೀಂದ್ರ ಜಡೇಜಾ ಜತೆಗೆ ತಂಡ ಹಂಚಿಕೊಂಡ ಅನುಭವವೂ ನನಗಿದೆ. ಕಳೆದ ಬಾರಿಯೂ ಉತ್ತಮವಾಗಿ ಆಡಿದ ಅವರು ಈ ಬಾರಿಯೂ ಒಳ್ಳೆಯ ಪರಿಶ್ರಮ ತೋರಿದ್ದಾರೆ ಎಂದರು.

ಎರಡು ವರ್ಷದ ಐಪಿಎಲ್ ಪಂದ್ಯ ನನ್ನ ಜೀವನದ ಅತ್ಯುತ್ತಮ ಘಳಿಗೆ ಹಾಗೂ ಮರೆಯಲಾಗದ ಅನುಭವ ಕೂಡಾ ಎಂದರು. ಐಪಿಎಲ್‌ನಂತಹ ಮ್ಯಾಚ್‌ಗಳಿಂದ ಬೇರೆ ಬೇರೆ ದೇಶದ ಮಂದಿ ಒಂದೇ ತಂಡದಲ್ಲಿ ಆಡಲು ಅವಕಾಶ ಸಿಗುತ್ತದೆ. ಇದರಿಂದ ವೃತ್ತಿ ಜತೆಗೆ ಖಾಸಗಿ ಗೆಳೆತನ, ಸಂಪರ್ಕ ಬೆಳೆಯುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಬೇರೆ ಬೇರೆ ಭಾಷೆಯ ಮಂದ ಒಂದೇ ತಂಡದಲ್ಲಿರುವುದರಿಂದ ಕೆಲವೊಮ್ಮೆ ಸಂವಹನ ಕೊರತೆಯಾದರೂ, ಅದು ದೊಡ್ಡ ಸಮಸ್ಯೆಯೇ ಇಲ್ಲ. ಒಂದು ತಂಡ ಎಂದಾಗ ಅಲ್ಲಿ ನಾವೆಲ್ಲ (ರಾಜಸ್ತಾನ್ ರಾಯಲ್ಸ್) ಜತೆಯಾಗಿ ಪ್ರತಿಯೊಂದು ಕೆಲಸವನ್ನೂ ಮಾಡಿದ್ದವೆ. ಆಟಗಾರರೊಂದಿಗೆ ಫ್ರಾಂಚೈಸಿಗಳೂ ಬೆರೆಯುವುದರಿಂದ ತಂಡದಲ್ಲಿ ಯಾವುದೇ ಮುಚ್ಚುಮರೆ ಇರುವುದಿಲ್ಲ. ಇದರಿಂದಾಗಿಯೇ ಐಪಿಎಲ್ ಎಂಬ ಪಂದ್ಯಾವಳಿಗೆ ಒಂದು ದೊಡ್ಡ ಯಶಸ್ಸು ದೊರೆತಿದೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂದೆ ಐಪಿಎಲ್‌ನಲ್ಲಿ ಭಾಗವಹಿಸಲ್ಲ ಅಂತ ಹೇಳಿಲ್ಲ: ಮೆಕ್‌ಗ್ರಾತ್
ಸೆಮಿ: ಕುತೂಹಲ ಕೆರಳಿಸಿರುವ ಬೆಂಗಳೂರು- ಚೆನ್ನೈ ಹಣಾಹಣಿ
ಗಿಲ್ಲಿ ಎದುರು ಏನೂ ಮಾಡಲಾರದೆ ಹೋದೆವು: ಸೆಹ್ವಾಗ್
ನನಗಿನ್ನು ಸೇನಾ ವೃತ್ತಿ ಬೇಡ, ಕ್ರಿಕೆಟ್ ಬೇಕು: ಮನೀಷ್ ಪಾಂಡೆ
ಎರಡನೇ ಸೆಮಿ: ಸೂಪರ್ ಕಿಂಗ್ಸ್‌ಗೆ ಚಾಲೆಂಜರ್ಸ್ ಸವಾಲು
'ಗಿಲ್ಲಿ' ಆರ್ಭಟಕ್ಕೆ ಡೆಲ್ಲಿ ಧೂಳೀಪಟ