ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > 2011ರ ವಿಶ್ವಕಪ್‌ಗೆ ಪಾಕ್‌ಗೆ ಸಹಾಯ ಮಾಡುತ್ತೇವೆ: ಅಬುದಾಭಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2011ರ ವಿಶ್ವಕಪ್‌ಗೆ ಪಾಕ್‌ಗೆ ಸಹಾಯ ಮಾಡುತ್ತೇವೆ: ಅಬುದಾಭಿ
2011ರ ವಿಶ್ವಕಪ್ ಪಂದ್ಯಗಳನ್ನು ನಡೆಸಲು ಪಾಕಿಸ್ತಾನ ಜತೆಗೆ ಹಂಚಿಕೊಂಡು ನಡೆಸಲು ತಾನು ಸಿದ್ಧ ಎಂದು ಅಬುದಾಭಿ ಕ್ರಿಕೆಟ್ ಮಂಡಳಿ ಹೇಳಿದೆ.

ಐಸಿಸಿ ಪಾಕಿಸ್ತಾನದಲ್ಲಿ ಪಂದ್ಯಗಳನ್ನು ನಡೆಸುವುದು ಭದ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಹೇಳಿರುವುದರಿಂದ ಹಾಗೂ ಪಾಕಿಸ್ತಾನ ಈ ನಿಟ್ಟಿನಲ್ಲಿ ನಿಷ್ಪಕ್ಷಪಾತವಾದ ಸ್ಥಳದ ಹೆಸರನ್ನು ಸೂಚಿಸುವ ಉತ್ಸುಕತೆ ತೋರಿಸಿರುವುದರಿಂದ, ಪಾಕಿಸ್ತಾನಕ್ಕೆ ಒಪ್ಪಿಗೆಯಿದ್ದರೆ ಅಬುದಾಭಿಯ ಹೆಸರನ್ನು ಸೂಚಿಸಬಹುದು ಎಂದು ಅಬುದಾಭಿ ಕ್ರಿಕೆಟ್ ಮಂಡಳಿ ಪಾಕ್‌ಗೆ ಆಹ್ವಾನ ನೀಡಿದೆ.

ಮಂಡಳಿಯ ಅಧ್ಯಕ್ಷ ಮಣಿ ಮಾತನಾಡಿ, ಅಬುದಾಭಿ ಈ ಮೊದಲೆ ಕಳೆದ ತಿಂಗಳಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕ್ ನಡುವಣ ಮೂರು ಏಕದಿನ ಪಂದ್ಯಗಳ ಆತಿಥ್ಯ ವಹಿಸಿತ್ತು. ಅಲ್ಲದೆ, ಪಾಕಿಸ್ತಾನದ ಐದು ಟೆಸ್ಟ್ ಮ್ಯಾಚ್‌ಗಳನ್ನೂ ನಡೆಸಿದ ಅನುಭವ ಅಬುದಾಭಿಗಿದೆ ಎಂದರು.

ಪಾಕಿಸ್ತಾನಕ್ಕೆ ಇದು ಅತ್ಯಂತ ಕೆಟ್ಟ ಗಳಿಗೆ. ಇಂಥ ಕಾಲದಲ್ಲಿ ನಾವು ಅದಕ್ಕೆ ಸಹಾಯ ಮಾಡುತ್ತೇವೆ. ಪಿಸಿಬಿ ಅಧ್ಯಕ್ಷ ಇಜಾಜ್ ಭಟ್ ದಕ್ಷಿಣ ಆಫ್ರಿಕಾದಿಂದ ಐಪಿಎಲ್ ವೀಕ್ಷಿಸಿ ಹಿಂತಿರುವಾಗ ಅಬುದಾಭಿಗೆ ಬರಲಿದ್ದಾರೆ. ಆಗ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಲಿದ್ದೇವೆ ಎಂದು ಮಣಿ ವಿವರಿಸಿದರು.

2011ರ ವಿಶ್ವಕಪ್ ಸಹ ಆತಿಥ್ಯ ವಹಿಸುವ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ ದೇಶಗಳು ಜೂ.3ರಂದು ದುಬೈಯಲ್ಲಿ ಸಭೆ ಸೇರಿ ಈ ವಿವಾದದ ಬಗ್ಗೆ ಮಾತುಕತೆ ನಡೆಸಿ ಪರಿಹಾರ ಹುಡುಕಲಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೆಕ್‌ಗ್ರಾತ್ ಡೆಲ್ಲಿಗೆ ಆಸ್ತಿಯಾಗಲೇ ಇಲ್ಲ: ಸೆಹ್ವಾಗ್
ವರ್ಷಕ್ಕೆರಡು ಐಪಿಎಲ್ ಟೂರ್ನಿ: ಮೋದಿ ಸುಳಿವು
ಭಾರತೀಯ ಸಂಸ್ಕೃತಿಗೆ ಬೌಲ್ಡ್ ಆದ ವಾರ್ನೆ
ಮುಂದೆ ಐಪಿಎಲ್‌ನಲ್ಲಿ ಭಾಗವಹಿಸಲ್ಲ ಅಂತ ಹೇಳಿಲ್ಲ: ಮೆಕ್‌ಗ್ರಾತ್
ಸೆಮಿ: ಕುತೂಹಲ ಕೆರಳಿಸಿರುವ ಬೆಂಗಳೂರು- ಚೆನ್ನೈ ಹಣಾಹಣಿ
ಗಿಲ್ಲಿ ಎದುರು ಏನೂ ಮಾಡಲಾರದೆ ಹೋದೆವು: ಸೆಹ್ವಾಗ್