ಭಾರತದ ಯುವ ಪ್ರತಿಭೆಗಳಿಗೆ ಒತ್ತಡದಲ್ಲಿ ಆಡುವುದನ್ನು ಕಲಿಯುವ ಸೂಕ್ತ ವೇದಿಕೆಯೆಂದರೆ ಅದು ಐಪಿಎಲ್ ಮಾತ್ರ ಎಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.ಈ ಐಪಿಎಲ್ ಟೂರ್ನಮೆಂಟಿನಿಂದ ಮುಂದೆ ನಡೆಯುವ ಐಸಿಸಿ ವರ್ಲ್ಡ್ ಟ್ವೆಂಟಿ20 ಮ್ಯಾಚ್‌ಗೆ ತುಂಬ ಸಹಾಯವಾಗಲಿದೆ. ಭಾರತೀಯರು ಈ ಅನುಭವವನ್ನು ಮುಂದೆ ಸಮರ್ಥವಾಗಿ ಬಳಸಿಕೊಳ್ಳುತ್ತಾರೆಂಬ ವಿಶ್ವಾಸ ನನಗೆ ಬಂದಿದೆ. ಪ್ರಮುಖವಾಗಿ ಯುವ ಕ್ರಿಕೆಟಿಗರಿಗೆ ಅಂತಾರಾಷ್ಟ್ರೀಯವಾಗಿ ಆಡುವ ಮೂಲಕ ಇದು ಉತ್ತಮ ಅನುಭವಕ್ಕೆ ವೇದಿಕೆಯಾಗಿದೆ ಎಂದು ಧೋನಿ ಹೇಳಿದರು.ಗೆಲ್ಲುವ ಅಥವಾ ಸೋಲುವ ಅಂತಿಮ ಹಂತದಲ್ಲಿ ಆಡುವ ಪ್ರತಿಯೊಬ್ಬ ಆಟಗಾರನೂ ಒತ್ತಡದಲ್ಲಿ ಆಡುವುದನ್ನು ಕಲಿಯುತ್ತಾನೆ. ಇದು ಕಂಡಿತ ಮುಂದಿನ ಟ್ವೆಂಟಿ20 ಮ್ಯಾಚ್‌ಗಳಿಗೆ ಸಹಾಯವಾಗಲಿದೆ. ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ಪಾರಮ್ಯವಿರುವ ಆಟ ಎಂದರೂ, ಇದರಲ್ಲಿ ಬೌಲರ್‌ಗಳಿಗೆ ಸಾಕಷ್ಟು ಮಹತ್ವವಿದೆ ಎಂದರು.ಸೆಮಿಫೈನಲ್‌ನಲ್ಲಿ ಸೋತ ಬಗ್ಗೆ ಪ್ರತಿಕ್ರಿಯೆ ನೀಡಿದ ಧೋನಿ, ಕೆಲವು ಗಾಯದಿಂದಾಗಿ ಆಟದಿಂದ ಹೊರಗುಳಿದರು. ನಾವು ಇನ್ನೂ ಸ್ವಲ್ಪ ಹೆಚ್ಚಿನ ಮೊತ್ತ ಕಲೆ ಹಾಕಿದ್ದಿದ್ದರೆ, ಗೆಲುವು ಸಾಧ್ಯವಾಗುತ್ತಿದತ್ತು. ಆದರು ಇಡೀ ಐಪಿಎಲ್ ಟೂರ್ನಮೆಂಟನ್ನು ನೋಡಿ ಹೇಳುವುದಾದರೆ ಚೆನ್ನೈ ತಂಡ ಉತ್ತಮ ಆಟ ಪ್ರದರ್ಶಿಸಿದೆ. ನನಗೆ ಅದರ ಬಗ್ಗೆ ತೃಪ್ತಿಯಿದೆ ಎಂದರು. |