ಇಂಡೀಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಎರಡನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ , ಮೊಹಮ್ಮದ್ ಕೈಫ್ ಅವರನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ ಕಳುಹಿಸಿದ್ದು, ಇದೀಗ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿರುವ ಮಿಡ್ಲ್‌ಸೆಕ್ಸ್ ತಂಡದ ವಿರುದ್ಧ ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಳ್ಳುವಂತೆ ಅಹ್ವಾನ ನೀಡಿದೆ. ಪೂರ್ವಯೋಜಿತ ಧರ್ಮಾರ್ಥ ಪಂದ್ಯಗಳಲ್ಲಿ, ಐಪಿಎಲ್ ಪಂದ್ಯಾವಳಿಯ ಆರಂಭಿಕ ತಂಡ ಹಾಗೂ ಇಂಗ್ಲೆಂಡ್‌ನ ಟ್ವೆಂಟಿ20 ಚಾಂಪಿಯನ್ಸ್ ತಂಡಗಳ ಮದ್ಯೆ ಜುಲೈ 6 ರಂದು ಹಣಾಹಣಿ ನಡೆಯಲಿದೆ. ರಾಜಸ್ಥಾನ್ ರಾಯಲ್ಸ್ ತಂಡ ಜೈಪುರ್‌ದಲ್ಲಿ ಅಭ್ಯಾಸ ಪಂದ್ಯಗಳನ್ನು ನಡೆಸುತ್ತಿದ್ದು, ಪಂದ್ಯಗಳಿಗೆ ಹಾಜರಾಗುವಂತೆ ಕೈಫ್ ಅವರಿಗೆ ಕೋರಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಅಡಳಿತ ಮಂಡಳಿಯ ನಿರ್ಧಾರದ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುವ ಪ್ರದರ್ಶನ ಪಂದ್ಯದಲ್ಲಿ ಆಡಲು ಸಂತಸವಾಗಿದೆ ಎಂದು ಕೈಫ್ ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಅಧಿಕಾರಿಗಳು ನನಗೆ ಪ್ರದರ್ಶನ ಪಂದ್ಯದಲ್ಲಿ ಆಡುವಂತೆ ಕೋರಿದ್ದು, ಪಂದ್ಯದಲ್ಲಿ ಆಡಲು ಸಮಯಾವಕಾಶದ ಹೊಂದಾಣಿಕೆ ಮಾಡುವಂತೆ ಅಧಿಕಾರಿಗಳು ಕೋರಿದ್ದಾರೆ ಎಂದು ಕೈಫ್ ಹೇಳಿದ್ದಾರೆ.ಐಪಿಎಲ್‌ನ ಎರಡನೇ ಆವೃತ್ತಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳುವಂತೆ ಏಕೆ ಹೇಳಲಾಯಿತು ಮತ್ತು ಲಂಡನ್‌ನಲ್ಲಿರುವ ಪ್ರದರ್ಶನ ಪಂದ್ಯಕ್ಕೆ ಅಹ್ವಾನ ಏಕೆ ನೀಡಲಾಯಿತು ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ. ಅದನ್ನು ನೀವು ಅಧಿಕಾರಿಗಳಿಂದ ವಿವರಣೆ ಪಡೆಯಬಹುದು ಎಂದರು.ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರಾದ ಮನೋಜ್ ಬದಾಳೆ ಹಾಗೂ ತಂಡದ ಸಹಾಯಕ ಕೋಚ್ ಡರ್ರೆನ್ ಬಾರ್ರಿ ಅವರೊಂದಿಗೆ ಜೈಪುರ್ ಶಿಬಿರದಲ್ಲಿ ಮಾತುಕತೆ ನಡೆಸಿರುವುದಾಗಿ ಕೈಫ್ ಹೇಳಿದ್ದಾರೆ. |