ಭಾರತ -ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಸರಣಿ ಪಂದ್ಯದಲ್ಲಿ ಕೂಡಾ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ನೀಡಿದಂತೆ ಉತ್ತಮ ಪ್ರದರ್ಶನ ನೀಡಿಲಿದ್ದೇವೆ ಎಂದು ವೆಸ್ಟ್‌ಇಂಡೀಸ್ ತಂಡದ ಆರಂಭಿಕ ಆಟಗಾರ ರುನಾಕೊ ಮೊರ್ಟೊನ್ ಹೇಳಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲಿ ಯಾರೇ ಗೆಲುವು ಪಡೆದಲ್ಲಿ ಎದುರಾಳಿ ತಂಡ ಸರಣಿ ಸೋಲು ಅನುಭವಿಸಬೇಕಾಗುತ್ತದೆ. ಸರಣಿ ಈಗ 1-1 ರಿಂದ ಸಮವಾಗಿದ್ದು, ವೆಸ್ಟ್ ಇಂಡೀಸ್ ತಂಡ ಮೂರನೇ ಪಂದ್ಯದಲ್ಲಿ ಕೂಡಾ ಗೆಲುವು ಪಡೆಯಲಿದೆ ಎಂದು ತಿಳಿಸಿದ್ದಾರೆ.
ಕಿಂಗ್‌ಸ್ಟನ್‌ನ ಸಬೀನಾ ಪಾರ್ಕ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಸೋಲಿಸಿ ತೋರಿದ ಉತ್ತಮ ಆಟದ ಪ್ರದರ್ಶನ ,ಉತ್ಸಾಹವನ್ನು ತಂಡದ ಆಟಗಾರರು ಮೂರನೇ ಏಕದಿನ ಪಂದ್ಯದಲ್ಲಿ ತೋರಲಿದ್ದಾರೆ ಎಂದು ಮೊರ್ಟೊನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಮೈಕಾದಲ್ಲಿ ತೋರಿದಂತೆ ತಂಡದ ಸಾಂಘಿಕ ಪ್ರಯತ್ನವನ್ನು ಉಳಿದ ಪಂದ್ಯಗಳಿಗೆ ತಂಡದ ಆಟಗಾರರು ಮುಂದುವರಿಸುವ ಭರವಸೆಯಿದೆ ಎಂದು ಮೊರ್ಟೊನ್ ಹೇಳಿದ್ದಾರೆ.
ಭಾರತದ ವಿರುದ್ಧದ ನಾಲ್ಕು ಏಕದಿನ ಸರಣಿಗೆ ಆಯ್ಕೆಯಾದ ಮೊರ್ಟೊನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. |