ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಬಿಸಿಸಿಐನಿಂದ ಈಡನ್ ಗಾರ್ಡನ್‌ ನಿರ್ಲಕ್ಷ್ಯ :ಆರೋಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಸಿಸಿಐನಿಂದ ಈಡನ್ ಗಾರ್ಡನ್‌ ನಿರ್ಲಕ್ಷ್ಯ :ಆರೋಪ
PTI
ಆಸ್ಟ್ರೇಲಿಯಾ ವಿರುದ್ಧದ ಏಳು ಏಕದಿನ ಸರಣಿ ಪಂದ್ಯಗಳಿಗಾಗಿ ಬಿಸಿಸಿಐ , ಸ್ಥಳ ಆಯ್ಕೆ ಮಾಡುವ ಸಂದರ್ಭದಲ್ಲಿ ಕೋಲ್ಕತಾದ ಪ್ರಮುಖ ಕ್ರೀಡಾಂಗಣವಾದ ಈಡನ್ ಗಾರ್ಡನ್‌ ಬಗ್ಗೆ ಮತ್ತೆ ಅಸಡ್ಡೆ ತಾಳಿದೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ.

ಬಿಸಿಸಿಐನ ಪ್ರವಾಸ ಯೋಜನಾ ಹಾಗೂ ವೇಳಾಪಟ್ಟಿ ನಿಗದಿ ಸಮಿತಿ ಸಭೆ ಸೇರಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಳು ಏಕದಿನ ಸರಣಿ ಪಂದ್ಯಗಳಿಗಾಗಿ ಗುವಾಹಟಿ ದೆಹಲಿ ,ಮುಂಬೈ ,ಮೊಹಾಲಿ ,ಹೈದ್ರಾಬಾದ್ ,ನಾಗ್ಪುರ್ ಮತ್ತು ಜೈಪುರ್ ನಗರಗಳನ್ನು ಆಯ್ಕೆ ಮಾಡಿದೆ.

1987ರಲ್ಲಿ ಈಡನ್ ಗಾರ್ಡನ್‌ನಲ್ಲಿ ಅಂದಾಜು 90 ಪ್ರೇಕ್ಷಕರು ಕ್ರಿಕೆಟ್ ನೋಡುವ ವ್ಯವಸ್ಥೆಯಿರುವ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಜಯಸಾಧಿಸಿತ್ತು.

ಕಳೆದ 2007 ಫೆಬ್ರವರಿ 8 ರಂದು ಭಾರತ ಮತ್ತು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯವನ್ನು ಕೋಲ್ಕತಾದ ಕ್ರಿಕೆಟ್ ಅಭಿಮಾನಿಗಳಿಗಾಗಿ ಕೊನೆಯ ಬಾರಿಗೆ ಆಯೋಜಿಸಲಾಗಿತ್ತು.

ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ 2007ರಲ್ಲಿ ನವೆಂಬರ್ 30 ರಿಂದ ಡಿಸೆಂಬರ್ 4 ರವರೆಗೆ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈಡನ್ ಗಾರ್ಡನ್‌ ಕ್ರೀಡಾಂಗಣ ಪ್ರವಾಸಿ ತಂಡಗಳಿಗೆ ಕೂಡಾ ಅಚ್ಚುಮೆಚ್ಚಿನ ಕ್ರೀಡಾಂಗಣವಾಗಿದೆ.

ಏಕದಿನ ಸರಣಿ ಹಾಗೂ ಟೆಸ್ಟ್ ಪಂದ್ಯಗಳಿಗಾಗಿ ಬಿಸಿಸಿಐ ,ಸರದಿಯ ಆಧಾರದ ಮೇಲೆ ಕ್ರೀಡಾಂಗಣವನ್ನು ಆಯ್ಕೆ ಮಾಡುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಅನುಮಾನಕ್ಕೆ ಏಡೆ ಮಾಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
3ನೇ ಏಕದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ: ಮೊರ್ಟೊನ್
ಪ್ರದರ್ಶನ ಪಂದ್ಯ : ರಾಯಲ್ಸ್‌ನಿಂದ ಕೈಫ್‌ಗೆ ಅಹ್ವಾನ
ರಾಮ್‌ಪೌಲ್,ಟೇಲರ್ ಬೌಲಿಂಗ್‌‌ ಎದುರಿಸುವಾಗ ಎಚ್ಚರ :ಧೋನಿ
ಶ್ರೀಲಂಕಾ-ಪಾಕ್ ಸರಣಿ :ಭಾರಿ ಕಟ್ಟೆಚ್ಚರ
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ
ಕ್ರಿಕೆಟ್: ಸಂಕಷ್ಟದಲ್ಲಿ ಉತ್ತರ ವಲಯ