ಭಾರತ ತಂಡ , ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ , ಬ್ಯಾಟಿಂಗ್ ವಿಫಲತೆಯಿಂದ ಹೊರಬಂದು ಸರಣಿಯನ್ನು ಗೆಲ್ಲುವ ಕನಸು ಕಾಣುತ್ತಿದೆ.
ಭಾರತ , ವೆಸ್ಟ್‌ಇಂಡೀಸ್ ಮಧ್ಯೆ ಮೂರನೇ ಏಕದಿನ ಪಂದ್ಯ ನಾಳೆ ನಡೆಯಲಿದ್ದು, ರವಿವಾರದಂದು ನಾಲ್ಕನೇ ಏಕದಿನ ಪಂದ್ಯ ಬೆಯಜೌರ್ ಕ್ರೀಡಾಂಗಣದಲ್ಲಿ ಆಡಲಿದೆ.
ಕಳೆದ ಶುಕ್ರವಾರ ಹಾಗೂ ರವಿವಾರದಂದು ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳು ಆರಂಭಿಕ ಎರಡು ಪಂದ್ಯಗಳನ್ನು ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ಆಡಿದ್ದು , ಪ್ರವಾಸಿ ತಂಡವಾದ ಭಾರತ ಆರಂಭಿಕ ಏಕದಿನ ಪಂದ್ಯವನ್ನು ವೆಸ್ಟ್‌ಇಂಡೀಸ್ ವಿರುದ್ಧ 20 ರನ್‌ಗಳಿಂದ ಜಯಗಳಿಸಿತ್ತು. ನಂತರ ಎರಡನೇ ಏಕದಿನ ಪಂದ್ಯವನ್ನು ವೆಸ್ಟ್‌ಇಂಡೀಸ್ ತಂಡ 8 ವಿಕೆಟ್‌ಗಳಿಂದ ಜಯಗಳಿಸಿ ಸರಣಿ ಸಮಮಾಡಿಕೊಂಡಿತ್ತು.
ಕಳೆದ ಐದು ಬಾರಿ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಂಡ ಭಾರತ ತಂಡಕ್ಕೆ, ಕೇವಲ ಒಂದು ಸಲ ಮಾತ್ರ ಏಕದಿನ ಸರಣಿಯನ್ನು ಗೆಲ್ಲಲು ಸಾಧ್ಯವಾಗಿದೆ
ಆದರೆ, ಧೋನಿ ಪಡೆ ಕಳೆದ ಕೆಲ ವಾರಗಳಿಂದ ಟ್ವೆಂಟಿ20 ಪಂದ್ಯಗಳತ್ತ ಗಮನಹರಿಸಿದ್ದರಿಂದ, ಏಕದಿನ ಪಂದ್ಯಗಳಲ್ಲಿ ತಂಡದ ಆಟಗಾರರಿಗೆ ಹೆಚ್ಚಿನ ಒತ್ತಡವನ್ನು ಎದುರಿಸುವಂತಾಗಿದೆ .
ವೆಸ್ಟ್‌ಇಂಡೀಸ್ : ಕ್ರಿಸ್ ಗೇಲ್ (ನಾಯಕ ) ಡೆನೆಶ್ ರಾಮ್‌ದಿನ್ ,ಲಯೊನೆಲ್ ಬಾಕರ್ ,ಸುಲೈಮಾನ್ ಬೆನ್ ,ಡೆವಿಡ್ ಬರ್ನಾರ್ಡ್ ,ಜ್ಯೂ. ಡರ್ರೆನ್ ಬ್ರಾವೊ , ಡ್ವಾನೆ ಬ್ರಾವೊ ,ಶಿವನರೈನ್ ಚಂದ್ರಪೌಲ್ ,ನರಲಿಂಗ್ ದಿಯೊನರೈನ್ ,ರುನಾಕೊ ಮೊರ್ಟೊನ್ ,ರವಿ ರಾಮ್‌ಪೌಲ್ ,ರಾಮ್‌ನರೇಶ್ ಸರವಣ್ ,ಜೆರೊಮ್ ಟೇಲರ್.
ಭಾರತ : ಮಹೇಂದ್ರ್ ಸಿಂಗ್ ಧೋನಿ (ನಾಯಕ) ಸುಬ್ರಮಣ್ಯಂ ಬದ್ರಿನಾಥ್ ,ಗೌತಮ್ ಗಂಭೀರ್ ,ರವೀಂದ್ರ್ ಜಡೇಜಾ ದಿನೇಶ್ ಕಾರ್ತಿಕ್ ,ಪ್ರವೀಣ್ ಕುಮಾರ್ ,ಅಭಿಷೇಕ್ ನಯ್ಯರ್ ,ಪ್ರಗ್ನ್ಯಾ ಒಝಾ ,ಯುಸೂಫ್ ಪಠಾಣ್ .ಇಶಾಂತ್ ಶರ್ಮಾ ,ರೋಹಿತ್ ಶರ್ಮಾ , ಹರಭಜನ್ ಸಿಂಗ್ ರುದ್ರ ಪ್ರತಾಪ್ ಸಿಂಗ್ ,ಯುವರಾಜ್ ಸಿಂಗ್ ,ಮುರಳಿ ವಿಜಯ್. |