ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ವಿಶ್ವಕಪ್ ಸಭೆಯಲ್ಲಿ ಪಾಲ್ಗೊಳ್ಳಲು ಪಿಸಿಬಿ ನಿರ್ಧಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಕಪ್ ಸಭೆಯಲ್ಲಿ ಪಾಲ್ಗೊಳ್ಳಲು ಪಿಸಿಬಿ ನಿರ್ಧಾರ
PTI
ಕಳೆದ ವಾರ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸಭೆಯಲ್ಲಿ ವಿಶ್ವಕಪ್ ಆತಿಥ್ಯವಹಿಸುವ ಹಕ್ಕನ್ನು ಕಳೆದುಕೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಇದೀಗ ಜುಲೈ 4 ರಂದು ಭಾರತದಲ್ಲಿ ನಡೆಯಲಿರುವ 2011ರ ವಿಶ್ವಕಪ್ ಆಯೋಜನಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆ.

2011ರ ವಿಶ್ವಕಪ್ ಆಯೋಜನಾ ಸಮಿತಿ ಸಭೆ ಭಾರತದಲ್ಲಿ ನಡೆಯುವುದು ಖಚಿತವಾಗಿದ್ದು , ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಯಾವುದೇ ರೀತಿಯ ಅಹ್ವಾನ ಬಂದಿಲ್ಲ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಜಾಜ್ ಭಟ್, ಶ್ರೀಲಂಕಾ ಪಾಕಿಸ್ತಾನ ಮಧ್ಯೆ ನಡೆಯಲಿರುವ ಟೆಸ್ಟ್‌ ಪಂದ್ಯವನ್ನು ವೀಕ್ಷಿಸಲು ಜುಲೈ 3 ರಂದು ಶ್ರೀಲಂಕಾಗೆ ತೆರಳುತ್ತಿದ್ದು, ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಗೂ ಕೆಲ ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ವಿಶ್ವಕಪ್ ಪಂದ್ಯಾವಳಿಗಳ ಆತಿಥ್ಯ ವಹಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದ್ದು,ಸ್ಪೋರ್ಟ್ಸ್‌ ಅರ್‌ಬಿಟ್ರೇಶನ್‌ ಟ್ರಿಬ್ಯೂನಲ್‌ಗೆ ದೂರು ನೀಡುವ ಯಾವುದೇ ಯೋಜನೆಗಳಿಲ್ಲ ಎಂದು ಪಿಸಿಬಿ ವರದಿ ಮಾಡಿದೆ.

ಐಸಿಸಿ ನಿರ್ಧಾರವನ್ನು ಪ್ರಶ್ನಿಸಿ ಐಸಿಸಿ ನೀತಿ ಸಂಹಿತೆ ಸಮಿತಿಯ ವಿವಾದ ನಿವಾರಣಾ ಸಮಿತಿಗೆ ಮನವಿಯೊಂದನ್ನು ಸಲ್ಲಿಸಿದ್ದು, ಸಮಿತಿಯ ತೀರ್ಮಾನ ನಮ್ಮ ಪರವಾಗಿ ನೀಡುವ ಆಶಾಭಾವನೆಯಿದೆ. ಫಲಿತಾಂಶ ವ್ಯತಿರಿಕ್ತವಾಗಿ ಬಂದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸುವುದಿಲ್ಲ ಎಂದು ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೆಸ್ಟ್‌ಇಂಡೀಸ್‌ಗೆ ತಿರುಗೇಟು ನೀಡಲು ಭಾರತ ಸಿದ್ಧತೆ
ಬಿಸಿಸಿಐನಿಂದ ಈಡನ್ ಗಾರ್ಡನ್‌ ನಿರ್ಲಕ್ಷ್ಯ :ಆರೋಪ
3ನೇ ಏಕದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ: ಮೊರ್ಟೊನ್
ಪ್ರದರ್ಶನ ಪಂದ್ಯ : ರಾಯಲ್ಸ್‌ನಿಂದ ಕೈಫ್‌ಗೆ ಅಹ್ವಾನ
ರಾಮ್‌ಪೌಲ್,ಟೇಲರ್ ಬೌಲಿಂಗ್‌‌ ಎದುರಿಸುವಾಗ ಎಚ್ಚರ :ಧೋನಿ
ಶ್ರೀಲಂಕಾ-ಪಾಕ್ ಸರಣಿ :ಭಾರಿ ಕಟ್ಟೆಚ್ಚರ