ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಟೆಸ್ಟ್ ವಿಧಾನ ಬದಲಾವಣೆಯಿಂದ ಹಾನಿ :ಮಿಯಾಂದಾದ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೆಸ್ಟ್ ವಿಧಾನ ಬದಲಾವಣೆಯಿಂದ ಹಾನಿ :ಮಿಯಾಂದಾದ್
PTI
ಟೆಸ್ಟ್ ಪಂದ್ಯಾವಳಿಯ ವಿಧಾನದಲ್ಲಿ ಬದಲಾವಣೆಗಳನ್ನು ತಂದಲ್ಲಿ ಮೂಲ ಟೆಸ್ಟ್ ಕ್ರಿಕೆಟ್‌ಗೆ ಧಕ್ಕೆಯಾಗಲಿರುವುದರಿಂದ ಬದಲಾವಣೆ ಮಾಡುವುದು ಸರಿಯಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಆಗ್ರಹಿಸಿದ್ದಾರೆ.

ಟ್ವೆಂಟಿ20 ಪಂದ್ಯಗಳು ಜನಪ್ರಿ.ಯವಾಗುತ್ತಿರುವು ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ , ಐದು ದಿನಗಳ ಟೆಸ್ಟ್ ಪಂದ್ಯಾವಳಿಗಳನ್ನು ನಾಲ್ಕು ದಿನಗಳಿಗೆ ಸೀಮಿತಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.

ಟೆಸ್ಟ್ ಪಂದ್ಯಗಳನ್ನು ಐದು ದಿನಗಳ ಬದಲಿಗೆ ನಾಲ್ಕು ದಿನಗಳಿಗೆ ಸೀಮಿತಿಗೊಳಿಸಿದಲ್ಲಿ ದೀರ್ಘಾವಧಿಯಲ್ಲಿ ಕ್ರಿಕೆಟ್‌ಗೆ ಹಾನಿಕಾರಕವಾಗಲಿದೆ ಎಂದು ಮಿಯಾಂದಾದ್ ಅಭಿಪ್ರಾಯಪಟ್ಟಿದ್ದಾರೆ.

ಟ್ವೆಂಟಿ20 ಪಂದ್ಯಗಳಿಗೆ ಜನಪ್ರಿಯತೆಯಲ್ಲಿ ಏರಿಕೆಯಾದರೂ ಬಹುತೇಕ ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್‌ನ್ನು ನಿಜವಾದ ಕ್ರಿಕೆಟ್‌ನ ಭಾಗವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ ಎಂದು ಮಿಯಾಂದಾದ್ ತಿಳಿಸಿದ್ದಾರೆ.

ವಾಣಿಜ್ಯಿಕವಾಗಿ ಹಾಗೂ ಮನೋರಂಜನೆಗಾಗಿ ಟ್ವೆಂಟಿ20 ಪಂದ್ಯಗಳು ಉತ್ತಮವಾಗಿವೆ. ಆದರೆ,ಟೆಸ್ಟ್ ಕ್ರಿಕೆಟ್‌ನಲ್ಲಿ ಮಾರ್ಪಾಟು ತರುವುದು ಸರಿಯಲ್ಲ ಎಂದು ಐಸಿಸಿ ವಿರುದ್ಧ ಮಿಯಾಂದಾದ್ ಕಿಡಿಕಾರಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಶ್ವಕಪ್ ಸಭೆಯಲ್ಲಿ ಪಾಲ್ಗೊಳ್ಳಲು ಪಿಸಿಬಿ ನಿರ್ಧಾರ
ವೆಸ್ಟ್‌ಇಂಡೀಸ್‌ಗೆ ತಿರುಗೇಟು ನೀಡಲು ಭಾರತ ಸಿದ್ಧತೆ
ಬಿಸಿಸಿಐನಿಂದ ಈಡನ್ ಗಾರ್ಡನ್‌ ನಿರ್ಲಕ್ಷ್ಯ :ಆರೋಪ
3ನೇ ಏಕದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ: ಮೊರ್ಟೊನ್
ಪ್ರದರ್ಶನ ಪಂದ್ಯ : ರಾಯಲ್ಸ್‌ನಿಂದ ಕೈಫ್‌ಗೆ ಅಹ್ವಾನ
ರಾಮ್‌ಪೌಲ್,ಟೇಲರ್ ಬೌಲಿಂಗ್‌‌ ಎದುರಿಸುವಾಗ ಎಚ್ಚರ :ಧೋನಿ