ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಹವಾಮಾನಕ್ಕೆ ಹೊಂದಿಕೊಂಡು ಗೆಲುವು: ಆಫ್ರಿದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹವಾಮಾನಕ್ಕೆ ಹೊಂದಿಕೊಂಡು ಗೆಲುವು: ಆಫ್ರಿದಿ
PTI
ಪಾಕಿಸ್ತಾನ ತಂಡ ಕಳೆದ ಕೆಲ ವಾರಗಳಿಂದ ಶೀತವಾತಾವರಣದಲ್ಲಿ ಟ್ವೆಂಟಿ20 ವಿಶ್ವಕಪ್‌‌ನಲ್ಲಿ ಪಾಲ್ಗೊಂಡಿದ್ದು, ಶ್ರೀಲಂಕಾ ಹವಾಮಾನಕ್ಕೆ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಹೊಂದಾಣಿಕೆ ಮಾಡಿಕೊಳ್ಳುವುದು ಆಟಗಾರರಿಗೆ ಸವಾಲಾಗಿ ಪರಿಣಮಿಸಿದೆ ಎಂದು ಪಾಕ್ ತಂಡದ ಆಲ್‌ರೌಂಡರ್ ಶಾಹಿದ್ ಆಫ್ರಿದಿ ಹೇಳಿದ್ದಾರೆ.

ಟ್ವೆಂಟಿ20 ವಿಶ್ವಕಪ್ ಪಂದ್ಯದಿಂದ ಟೆಸ್ಟ್‌ನತ್ತ ಗಮನಹರಿಸುವುದು ಹಾಗೂ ವಿಭಿನ್ನ ವಾತಾವರಣದಲ್ಲಿ ಆಡುತ್ತಿರುವುದರಿಂದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲ. ಅದೊಂದು ತಂಡದ ಆಟಗಾರರಿಗೆ ಸವಾಲಾಗಿದೆ ಎಂದು ಆಫ್ರಿದಿ ತಿಳಿಸಿದ್ದಾರೆ.

ಶಾಹಿದ್ ಆಫ್ರಿದಿ , ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಅದ್ಭುತ ಆಟದ ಪ್ರದರ್ಶನ ನೀಡಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾಗಿದ್ದರು.ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕೂಡಾ ಉತ್ತಮ ಆಟದ ಪ್ರದರ್ಶನ ನೀಡುವುದಾಗಿ ಹೇಳಿದ್ದಾರೆ.

ಏತನ್ಮಧ್ಯೆ , ತಾವು ಟೆಸ್ಟ್ ಸರಣಿಯ ತಂಡದ ನಾಯಕ ಸ್ಥಾನವಹಿಸುವ ನಿರ್ಧಾರಕ್ಕೆ ಬಂದಿದ್ದು , ಏಕದಿನ ಹಾಗೂ ಟ್ವೆಂಟಿ120 ಪಂದ್ಯಗಳತ್ತ ಕೂಡಾ ಗಮನಹರಿಸುವ ಸಾಮರ್ಥ್ಯವಿದೆ ಎಂದು 29 ವರ್ಷ ವಯಸ್ಸಿನ ಆಫ್ರಿದಿ ಹೇಳಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಹೆಚ್ಚಿನ ಟೆಸ್ಟ್‌ ಪಂದ್ಯಗಳಲ್ಲಿ ನಾನು ಭಾಗವಹಿಸಿಲ್ಲ. ಆದ್ದರಿಂದ ವಿಶ್ರಾಂತಿ ಪಡೆದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಆಟಗಾರರನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಆಫ್ರಿದಿ ತಿಳಿಸಿದ್ದಾರೆ.

ನಾನು ತಂಡದ ನಾಯಕ ಸ್ಥಾನಕ್ಕಾಗಿ ಹೋರಾಡುತ್ತಿಲ್ಲ .ಕೇವಲ ದೇಶಕ್ಕಾಗಿ ಆಡುತ್ತೇನೆ. ಪಾಕ್ ತಂಡ ಗೆಲುವು ಪಡೆದಲ್ಲಿ ಅದೇ ನನಗೆ ಬೋನಸ್‌ ಎಂದು ಆಫ್ರಿದಿ ರಾಗ ಬದಲಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೆಸ್ಟ್ ವಿಧಾನ ಬದಲಾವಣೆಯಿಂದ ಹಾನಿ :ಮಿಯಾಂದಾದ್
ವಿಶ್ವಕಪ್ ಸಭೆಯಲ್ಲಿ ಪಾಲ್ಗೊಳ್ಳಲು ಪಿಸಿಬಿ ನಿರ್ಧಾರ
ವೆಸ್ಟ್‌ಇಂಡೀಸ್‌ಗೆ ತಿರುಗೇಟು ನೀಡಲು ಭಾರತ ಸಿದ್ಧತೆ
ಬಿಸಿಸಿಐನಿಂದ ಈಡನ್ ಗಾರ್ಡನ್‌ ನಿರ್ಲಕ್ಷ್ಯ :ಆರೋಪ
3ನೇ ಏಕದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ: ಮೊರ್ಟೊನ್
ಪ್ರದರ್ಶನ ಪಂದ್ಯ : ರಾಯಲ್ಸ್‌ನಿಂದ ಕೈಫ್‌ಗೆ ಅಹ್ವಾನ