ದೇಶದ ಟೆಸ್ಟ್ ಬ್ಯಾಟ್ಸ್‌ಮೆನ್‌ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಗೌತಮ್ ಗಂಭೀರ್ ಗುರುವಾರದಂದು ಬಿಡುಗಡೆಯಾದ ಐಸಿಸಿ ಶ್ರೇಯಾಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದು, ಭಾರತೀಯ ಬೌಲರ್ ಹರಭಜನ್ ಸಿಂಗ್ ಅರನೇ ಸ್ಥಾನವನ್ನು ಪಡೆದಿದ್ದಾರೆ. ದೆಹಲಿ ಮೂಲದ ಎಡಗೈ ಬ್ಯಾಟ್ಸ್‌ಮೆನ್ ಗೌತಮ್ ಗಂಭೀರ್ 847 ಅಂಕಗಳೊಂದಿಗೆ ಟಾಪ್ 10 ರಲ್ಲಿ ಸ್ಥಾನಪಡೆದಿದ್ದು, ಸಚಿನ್ ತೆಂಡೂಲ್ಕರ್ (13ನೇ) ವಿವಿಎಸ್ ಲಕ್ಷ್ಮಣ್ (15ನೇ) ವಿರೇಂದ್ರ್ ಸೆಹ್ವಾಗ್ (20ನೇ) ಸ್ಥಾನವನ್ನು ಪಡೆದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಹರಭಜನ್ ಸಿಂಗ್ ಟಾಪ್ 10ರಲ್ಲಿ ಸ್ಥಾನಪಡೆದ ಏಕೈಕ ಭಾರತೀಯ ಆಟಗಾರರಾಗಿದ್ದು. ನಂತರದ ಸ್ಥಾನವನ್ನುೂ ಜಹೀರ್ ಖಾನ್ (11ನೇ ) ಮತ್ತು ಇಶಾಂತ್ ಶರ್ಮಾ (20ನೇ ) ಸ್ಥಾನವನ್ನು ಪಡೆದಿದ್ದಾರೆ.ಕ್ರಿಕೆಟ್ ತಂಡಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ 119 ಅಂಕಗಳನ್ನು ಪಡೆದು ಮೊದಲನೆ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ 128 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತ 117 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿದೆ. ಏತನ್ಮಧ್ಯೆ , ಪ್ರಸ್ತುತ ಪಾಕಿಸ್ತಾನ ಆರನೇ ಸ್ಥಾನದಲ್ಲಿದ್ದು, ಮೂರು ಟೆಸ್ಟ್ ಸರಣಿಗಳನ್ನಾಡಲು ಶ್ರೀಲಂಕಾಗೆ ತೆರಳಿದ್ದು, ಸರಣಿಯಲ್ಲಿ ಗೆಲುವು ಪಡೆದಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಲಿದೆ ಒಂದು ವೇಳೆ ಪಾಕಿಸ್ತಾನ ತಂಡ ಟೆಸ್ಟ್ ಸರಣಿಯನ್ನು 1-0 ಅಥವಾ 2-1 ರಿಂದ ಮುನ್ನಡೆ ಸಾಧಿಸಿದಲ್ಲಿ 105 ಅಂಕಗಳೊಂದಿಗೆ ಪಾಕ್ ಮುನ್ನಡೆ ಪಡೆಯಲಿದೆ.ವ್ಯಯಕ್ತಿಕವಾಗಿ ಯುನೂಸ್ ಖಾನ್ ಟೆಸ್ಟ್ ಪಂದ್ಯಾವಳಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, 900 ಪಾಯಿಂಟ್‌ಗಳೊಂದಿಗೆ 25 ನೇ ಬ್ಯಾಟ್ಸ್‌ಮೆನ್ ಸ್ಥಾನಕ್ಕೆ ತಲುಪಿ ಇತಿಹಾಸ ಸೃಷ್ಟಿಸುವ ಸಾಧ್ಯತೆಗಳಿವೆ. 31 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್‌ಮೆನ್ ಯುನೂಸ್ ಖಾನ್ 900 ಪಾಯಿಂಟ್‌ಗಳನ್ನು ತಲುಪಲು ಕೇವಲ 20 ಪಾಯಿಂಟ್‌ಗಳ ಕೊರತೆಯನ್ನು ಎದುರಿಸುತ್ತಿದ್ದು ಮೊಹಮ್ಮದ್ ಯುಸೂಫ್‌ನ ನಂತರದ ಸ್ಥಾನವನ್ನು ಪಡೆಯಲಿದ್ದಾರೆ. |