ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಕ್ರೀಡಾ ಪ್ರಾಧಿಕಾರದಿಂದ ಅಬ್ದುಲ್ ಖಾದೀರ್‌ಗೆ ನೋಟಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ರೀಡಾ ಪ್ರಾಧಿಕಾರದಿಂದ ಅಬ್ದುಲ್ ಖಾದೀರ್‌ಗೆ ನೋಟಿಸ್
ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರ ಸ್ಥಾನಕ್ಕೆ ಅಕಸ್ಮಿಕವಾಗಿ ರಾಜೀನಾಮೆ ನೀಡಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಷನಲ್ ಅಸೆಂಬ್ಲಿಯ ಕ್ರೀಡಾ ಪ್ರಾಧಿಕಾರ ಸಮಿತಿ ಅಬ್ದುಲ್ ಖಾದೀರ್ ಅವರಿಗೆ ಜುಲೈ 14 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ನ್ಯಾಷನಲ್ ಅಸೆಂಬ್ಲಿಯ ಕ್ರೀಡಾ ಪ್ರಾಧಿಕಾರ ಸಮಿತಿ , ರಾಷ್ಟ್ರೀಯ ಹಿರಿಯ ಮತ್ತು ಕಿರಿಯ ಆಟಗಾರರ ಆಯ್ಕೆ ಸಮಿತಿಗಳನ್ನು ರದ್ದುಗೊಳಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಎಜಾಜ್ ಭಟ್ ಅವರ ನಿರ್ಧಾರದ ಬಗ್ಗೆ ಕೂಡಾ ಸಭೆಯಲ್ಲಿ ಚರ್ಚಿಸಲಿದೆ ಎಂದು ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕೆಲ ನಿರ್ಧಾರಗಳ ಬಗ್ಗೆ ಕಳವಳವಾಗಿದೆ ಎಂದು ಕ್ರೀಡಾ ಸಚಿವ ಅಫ್ತಾಬ್ ಶಾಹ್ ಜಿಲಾನಿ ಆತಂಕ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಹಾಗೂ ಇತರ ಅಧಿಕಾರಿಗಳು , ಆಯ್ಕೆ ಸಮಿತಿ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಒತ್ತಡದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವುದಾಗಿ ಮಾಜಿ ಟೆಸ್ಟ್ ಆಟಗಾರರಾದ ಅಬ್ದುಲ್ ಖಾದೀರ್ ಹೇಳಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್ ಮಂಡಳಿಯ ಕಾರ್ಯವೈಖರಿಯ ಬಗ್ಗೆ ನಾನು ಏನು ಹೇಳಲಿ ? ಮಂಡಳಿಯ ಕಾರ್ಯವೈಖರಿಯ ಬಗ್ಗೆ ಜನತೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕಿಂತ ಹೆಚ್ಚಿಗೆ ಹೇಳಲು ಸಾಧ್ಯವಿಲ್ಲ ಎಂದು ಸಚಿವ ಜಿಲಾನಿ ವಿಷಾದ ವ್ಯಕ್ತಪಡಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಿಯೋಧರ್ ಟ್ರೂಪಿ ರದ್ದು : ಬಿಸಿಸಿಐಗೆ ಶಿವಸೇನೆ ಎಚ್ಚರಿಕೆ
ಮೊಹಮ್ಮದ್ ಆಸೀಫ್‌ಗೆ 10 ಲಕ್ಷ ದಂಡ :ಪಿಸಿಬಿ
ಟ್ವೆಂಟಿ20 ಫಾಸ್ಟ್‌ಫುಡ್‌ ಇದ್ದಂತೆ: ಮಿಯಾಂದಾದ್
ಉಗ್ರರ ದಾಳಿಯ ನಂತರ ಟೆಸ್ಟ್‌ಗೆ ಮರಳಿದ ಶ್ರೀಲಂಕಾ-ಪಾಕ್‌
ಇಂದು ಮೂರನೇ ಏಕದಿನ: ಒತ್ತಡದಲ್ಲಿ ಭಾರತ
ಕ್ರಿಕೆಟ್: ಪಶ್ಚಿಮ ವಲಯಕ್ಕೆ ಮಹತ್ವದ ಮುನ್ನಡೆ