ಆರಂಭಿಕ ಆಟಗಾರ ಇಮ್ರಾನ್ ನಜೀರ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಉಸ್ತುವಾರಿ ಅಧ್ಯಕ್ಷ ವಾಸಿಮ್ ಬಾರಿ ಹೇಳಿದ್ದಾರೆ.
ಇಂಡಿಯನ್ ಕ್ರಿಕೆಟೆ ಲೀಗ್ ಸೇರ್ಪಡೆಯಾಗಿದ್ದ ನಾಲ್ಕು ಮಂದಿ ಪಾಕ್ ಆಟಗಾರರಲ್ಲಿ ನಾಜೀರ್ ಕೂಡಾ ಒಬ್ಬರಾಗಿದ್ದಾರೆ.ರಾಷ್ಟ್ರೀಯ ಟ್ವೆಂಟಿ20 ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ತೋರಿದ ದುರ್ವರ್ತನೆಯಿಂದಾಗಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸುವುದಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಜಾಜ್ ಭಟ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿ ಜೂನ್ 30 ರಂದು ನಾಜೀರ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.ಆದ್ದರಿಂದ ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟ್ವೆಂಟಿ20 ಪಂದ್ಯಾವಳಿಯಲ್ಲಿ ತಂಡಕ್ಕೆ ಆಯ್ಕೆಯಾಗಲು ಅರ್ಹರಾಗಿದ್ದಾರೆ ಎಂದು ವಾಸಿಮ್ ಬಾರಿ ಹೇಳಿದ್ದಾರೆ.
ಮೊಹಮ್ಮದ್ ಯುಸೂಫ್ ಮತ್ತು ಅಬ್ದುಲ್ ರಜಾಕ್ ಈಗಾಗಲೇ ತಂಡಕ್ಕೆ ಸೇರ್ಪಡೆಯಾಗಿದ್ದು, ಶ್ರೀಲಂಕಾ ವಿರುದ್ಧದ ಪಂದ್ಯಾವಳಿಗಾಗಿ ಪ್ರವಾಸಕ್ಕೆ ತೆರಳಿದ್ದಾರೆ.
ಆಯ್ಕೆ ಸಮಿತಿ ಉಸ್ತುವಾರಿ ಅಧ್ಯಕ್ಷ ವಾಸಿಮ್ ಬಾರಿ , ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾಗಿದ್ದು, ರಾಷ್ಟ್ರೀಯ ಹಿರಿಯ ಹಾಗೂ ಕಿರಿಯರ ಆಯ್ಕೆ ಸಮಿತಿಗಳನ್ನು ರದ್ದುಗೊಳಿಸಿರುವುದು ಹಾಗೂ ಟ್ವೆಂಟಿ20 ವಿಶ್ವಕಪ್‌ನಲ್ಲಿ ಇಮ್ರಾನ್ ನಾಜೀರ್ ಅವರನ್ನು ಆಯ್ಕೆ ಮಾಡಿರುವ ಆರೋಪಗಳನ್ನು ಹೊತ್ತಿದ್ದಾರೆ. |