ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಪಾಕ್ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಮುರಳಿ ಅಲಭ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಮುರಳಿ ಅಲಭ್ಯ
PTI
ಶ್ರೀಲಂಕಾದ ಮಾರಕ ಬೌಲರ್ ಮುತ್ತಯ್ಯ ಮುರಳೀಧರನ್, ಮಂಡಿನೋವಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಚ್ ಪಂದ್ಯಾವಳಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ದಾಖಲೆಯನ್ನು ಹೊಂದಿರುವ ಮುತ್ತಯ್ಯ ಮುರಳೀಧರನ್ ಅವರಿಗೆ ಮಂಡಿನೋವಿನಿಂದಾಗಿ ಎರಡರಿಂದ ಮೂರು ವಾರಗಳವರೆಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.

ಬುಧವಾರದಂದು ನಡೆದ ಅಭ್ಯಾಸ ಪಂದ್ಯದ ವೇಳೆಯಲ್ಲಿ ಮಂಡಿನೋವಿಗೆ ಗಾಯವಾಗಿದ್ದರಿಂದ ವೈದ್ಯರು ಸ್ಕ್ಯಾನ್ ಪರೀಕ್ಷೆ ನಡೆಸಿದ ನಂತರ, ಆಫ್‌ಸ್ಪಿನ್ನರ್ ಮುತ್ತಯ್ಯ ಮುರಳೀಧರನ್‌ ವಿಶ್ರಾಂತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ.

ನಾನು ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಲು ಬಯಸಿದ್ದೆ. ಆದರೆ ,ತಂಡದ ದೈಹಿಕ ತರಬೇತುದಾರ ಟಾಮ್ಮಿ ಸಿಮ್‌ಸೆಕ್ ಸ್ಕ್ಯಾನ್ ವರದಿಯನ್ನು ಪರೀಕ್ಷಿಸಿದ ನಂತರ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಮುರಳೀಧರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುರಳೀಧರನ್ , ಪಾಕಿಸ್ತಾನ ವಿರುದ್ಧದ ಮೂರನೇ ಅಥವಾ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಮರಳುವ ಸಾಧ್ಯತೆಗಳಿವೆ. ಆದರೆ ಪಾಕ್ ವಿರುದ್ಧದ ಏಕದಿನ ಸರಣಿ ಅಥವಾ ಅಗಸ್ಟ್‌ನಿಂದ ಆರಂಭವಾಗಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಗುರಿಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ಆಫ್‌-ಸ್ಪಿನ್ನರ್ ಸೂರಜ್ ಕಲುಹಲಾಮುಲ್ಲಾ ಮತ್ತು ಎಡಗೈ ಸ್ಪಿನ್ ಬೌಲರ್ ರಂಗನಾ ಹೆರಾತ್ ಅವರನ್ನು ಶನಿವಾರದಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಮೂಲಗಳು ತಿಳಿಸಿವೆ.

ಇಂಗ್ಲೆಂಡ್‌ನಲ್ಲಿ ಕ್ಲಬ್‌ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ಹೆರಾತ್ ಶ್ರೀಲಂಕಾಗೆ ಮರಳಿದ್ದು,ಏತನ್ಮಧ್ಯೆ, ಪ್ರಸಕ್ತ ವಾರದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೂರಜ್ ಮೂರು ವಿಕೆಟ್‌ಗಳನ್ನು ಕಬಳಿಸಿರುವುದರಿಂದ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಷ್ಟ್ರೀಯ ತಂಡಕ್ಕೆ ನಜೀರ್ ಸೇರ್ಪಡೆ ಸಾಧ್ಯತೆ :ಬಾರಿ
ರಾಯಲ್ಸ್ ಪರ ಆಡಲು ತನ್ವೀರ್‌ಗೆ ಪಿಸಿಬಿ ಅನುಮತಿ
ಕ್ರೀಡಾ ಪ್ರಾಧಿಕಾರದಿಂದ ಅಬ್ದುಲ್ ಖಾದೀರ್‌ಗೆ ನೋಟಿಸ್
ದೇವಧರ್ ಟ್ರೋಫಿ ರದ್ದು : ಬಿಸಿಸಿಐಗೆ ಶಿವಸೇನೆ ಎಚ್ಚರಿಕೆ
ಮೊಹಮ್ಮದ್ ಆಸೀಫ್‌ಗೆ 10 ಲಕ್ಷ ದಂಡ :ಪಿಸಿಬಿ
ಟ್ವೆಂಟಿ20 ಫಾಸ್ಟ್‌ಫುಡ್‌ ಇದ್ದಂತೆ: ಮಿಯಾಂದಾದ್