ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಹಾಲ್ ಆಫ್ ಫೇಮ್‌ಗೆ ಮತ್ತಷ್ಟು ಕ್ರಿಕೆಟಿಗರ ಸೇರ್ಪಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಲ್ ಆಫ್ ಫೇಮ್‌ಗೆ ಮತ್ತಷ್ಟು ಕ್ರಿಕೆಟಿಗರ ಸೇರ್ಪಡೆ
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಹಾಲ್ ಆಫ್ ಫೇಮ್‌ಗೆ ಕೇವಲ ಮೂವರು ಕ್ರಿಕೆಟಿಗರನ್ನು ಮಾತ್ರ ಆಯ್ಕೆ ಮಾಡಿರುವುದು ವಿವಾದ ಸೃಷ್ಟಿಸಿದೆ. ಆದರೆ ಇನ್ನೂ ಹೆಚ್ಚಿನ ಭಾರತೀಯ ಕ್ರಿಕೆಟಿಗರನ್ನು ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಳಿಸಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರತಿ ವರ್ಷ ಹಾಲ್ ಆಫ್ ಫೇಮ್ ಪಟ್ಟಿಗೆ ಹೆಚ್ಚಿನ ಕ್ರಿಕೆಟಿಗರನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಇದು ಅಂತಿಮ ಪಟ್ಟಿಯಲ್ಲ . ಭಾರತದ ಪ್ರತಿಭಾವಂತ ಕ್ರಿಕೆಟಿಗರನ್ನು ಹಾಲ್‌ ಆಫ್ ಫೇಮ್‌ಗೆ ಶ್ರೀಘ್ರದಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಐಸಿಸಿ ಅಧ್ಯಕ್ಷ ಡೇವಿಡ್ ಮೊರ್ಗಾನ್ ತಿಳಿಸಿದ್ದಾರೆ.

ಐಸಿಸಿಯ ಹಾಲ್ ಆಫ್ ಫೇಮ್‌ನ 55 ಮಂದಿಯ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಬಿಶನ್‌ಸಿಂಗ್ ಬೇಡಿ, ಸುನೀಲ್ ಗವಾಸ್ಕರ್ ಮತ್ತು ಕಪಿಲ್‌ದೇವ್ ಸ್ಥಾನಪಡೆದಿದ್ದು, ಇಂಗ್ಲೆಂಡ್‌ನ 22 , ಆಸ್ಟ್ರೇಲಿಯಾದ 11 ,ವೆಸ್ಟ್‌ಇಂಡೀಸ್‌ 13 ಪಾಕಿಸ್ತಾನದಿಂದ 3 ,ದಕ್ಷಿಣ ಆಫ್ರಿಕಾದಿಂದ 2 ನ್ಯೂಜಿಲ್ಯಾಂಡ್‌ನಿಂದ 1 ಕ್ರಿಕೆಟಿಗರನ್ನು ಆಯ್ಕೆಮಾಡಲಾಗಿದೆ. ವಿಚಿತ್ರವೆಂದರೆ ಶ್ರೀಲಂಕಾ ತಂಡದಿಂದ ಒಬ್ಬ ಕ್ರಿಕೆಟಿಗ ಕೂಡಾ ಹಾಲ್‌ ಆಫ್ ಫೇಮ್‌ಗೆ ಆಯ್ಕೆಯಾಗಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಹಾಲ್ ಆಫ್ ಫೇಮ್ ಪಟ್ಟಿ ಸಂಪೂರ್ಣವಾದ ನಂತರ ಕ್ರಿಕೆಟ್ ಆಡುವ ಎಲ್ಲ ರಾಷ್ಟ್ರಗಳಿಗೆ ಸಮಾನವಾದ ಆದ್ಯತೆ ದೊರೆಯಲಿದೆ. 1995 ರ ನಂತರ ನಿವೃತ್ತಿ ಹೊಂದಿದ ಕ್ರಿಕೆಟಿಗರಿಗೆ ಪಟ್ಟಿಯಲ್ಲಿ ಸ್ಥಾನವಿಲ್ಲ ಎಂದು ಮೊರ್ಗಾನ್ ತಿಳಿಸಿದ್ದಾರೆ.

ದೇಶದ ಪ್ರತಿಭಾವಂತ ಕ್ರಿಕೆಟಿಗರಾದ ಸಿ.ಕೆ..ನಾಯ್ಡು , ಲಾಲಾ ಅಮರ್‌ನಾಥ್ ,ವಿಜಯ್ ಮರ್ಚಂಟ್ ,ವಿಜಯ್ ಹಜಾರೆ ,ವಿನು ಮಂಕಡ್ , ಪಾಲಿ ಉಮ್ರಿಗರ್ ,ಸುಭಾಷ್ ಗುಪ್ತೆ ,ಎರಾಪಲ್ಲಿ ಪ್ರಸನ್ನ ,ಭಾಗವತ್ ಚಂದ್ರಶೇಖರ್ ಮತ್ತು ಗುಂಡಪ್ಪ ವಿಶ್ವನಾಥ್ ಅವರ ಹೆಸರುಗಳು ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ .
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಮುರಳಿ ಅಲಭ್ಯ
ರಾಷ್ಟ್ರೀಯ ತಂಡಕ್ಕೆ ನಜೀರ್ ಸೇರ್ಪಡೆ ಸಾಧ್ಯತೆ :ಬಾರಿ
ರಾಯಲ್ಸ್ ಪರ ಆಡಲು ತನ್ವೀರ್‌ಗೆ ಪಿಸಿಬಿ ಅನುಮತಿ
ಕ್ರೀಡಾ ಪ್ರಾಧಿಕಾರದಿಂದ ಅಬ್ದುಲ್ ಖಾದೀರ್‌ಗೆ ನೋಟಿಸ್
ದೇವಧರ್ ಟ್ರೋಫಿ ರದ್ದು : ಬಿಸಿಸಿಐಗೆ ಶಿವಸೇನೆ ಎಚ್ಚರಿಕೆ
ಮೊಹಮ್ಮದ್ ಆಸೀಫ್‌ಗೆ 10 ಲಕ್ಷ ದಂಡ :ಪಿಸಿಬಿ