ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಲ್ಲಿ ಭಾರತ ಪೀಡಕ ರಾಷ್ಟ್ರವಾಗಿಲ್ಲ ಎಂದು ಐಸಿಸಿ ಅಧ್ಯಕ್ಷ ಡೇವಿಡ್ ಮೊರ್ಗಾನ್ ಹೇಳಿದ್ದಾರೆ.
ಕೆಲ ಕ್ರಿಕೆಟ್ ವೀಕ್ಷಣಾಕಾರರು ಭಾರತ ಕ್ರಿಕೆಟ್ ಮಂಡಳಿ ಆರ್ಥಿಕಶಕ್ತಿಯಿಂದಾಗಿ ಐಸಿಸಿಯನ್ನು ಬೆದರಿಸುತ್ತಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಮಾತನಾಡಿದ ಐಸಿಸಿ ಅದ್ಯಕ್ಷ ಡೇವಿಡ್ ಮೊರ್ಗಾನ್ , ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಲ್ಲಿ ಭಾರತ ಪೀಡಕ ರಾಷ್ಟ್ರವಾಗಿದೆ ಎಂದು ನಾನು ಭಾವಿಸಿಲ್ಲವೆಂದು ಹೇಳಿದ್ದಾರೆ.
ಐಸಿಸಿ ಮಾಜಿ ಅಧ್ಯಕ್ಷರಾದ ಜಗನ್ಮೋಹನ್ ದಾಲ್ಮಿಯಾ ,ಶರದ್ ಪವಾರ್ ಮತ್ತು ಶಶಾಂಕ್ ಮನೋಹರ್ ಅವರುಗಳ ನಾಯಕತ್ವದ ಅಡಿಯಲ್ಲಿ ತಾವು ಕಾರ್ಯನಿರ್ವಹಿಸಿದ್ದು,ತಮ್ಮ ಅನುಭವದ ಪ್ರಕಾರ ಭಾರತ ಪೀಡಕ ರಾಷ್ಟ್ರವಾಗಿದೆ ಎನ್ನುವ ಆರೋಪಗಳನ್ನು ತಾವು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಳ್ಳಿಹಾಕಿದರು.
ಹಾಲ್ ಆಫ್ ಫೇಮ್‌ನಲ್ಲಿ ಕೇವಲ ಮೂವರು ಭಾರತೀಯ ಕ್ರಿಕೆಟಿಗರ ಸೇರ್ಪಡೆ ಕುರಿತಂತೆ ಸೃಷ್ಟಿಯಾದ ವಿವಾದಗಳ ಕುರಿತಂತೆ ಮಾತನಾಡಿದ ಮೊರ್ಗಾನ್ ,ಮುಂಬರುವ ದಿನಗಳಲ್ಲಿ ಮತ್ತಷ್ಟು ಬಾರತೀಯ ಕ್ರಿಕೆಟಿಗರನ್ನು ಆಯ್ಕೆ ಮಾಡಲಾಗುವುದು ಎಂದು ಮೊರ್ಗಾನ್ ತಿಳಿಸಿದ್ದಾರೆ. |