ಭಾರತ ವಿರುದ್ಧದ ಮೂರನೇ ಏಕದಿನ ಸರಣಿ ಪಂದ್ಯದಲ್ಲಿ ಭಾರತ ತಂಡದ ನಾಯಕ ಸಮಯೋಚಿತ ಅಬ್ಬರದ ಆಟವಾಡಿ ತಂಡವನ್ನು ಗೆಲುವಿನತ್ತ ಸಾಗಿಸಿದ ಮಹೇಂದ್ರ್ ಸಿಂಗ್ ಧೋನಿಯನ್ನು ಶ್ಲಾಘಿಸಿದ ವೆಸ್ಟ್ಇಂಡೀಸ್ ನಾಯಕ ಕ್ರಿಸ್ ಗೇಲ್, ತಮ್ಮ ತಂಡದ ಬೌಲರ್‌ಗಳು ಮತ್ತಷ್ಟು ಮಾರಕ ದಾಳಿ ನಡೆಸುವುದು ಅಗತ್ಯವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಪಂದ್ಯದ ಆರಂಭದ ನಂತರ ಕೆಲವು ಬಾರಿ ಮಳೆಯಿಂದ ಅಡೆತಡೆಯುಂಟಾದರೂ ರಮೇಶ್ ಸರವಣನ್ ಅವರ ಅದ್ಬುತ್ ಬ್ಯಾಟಿಂಗ್ ಪ್ರದರ್ಶನದಿಂದ ವೆಸ್ಟ್‌ಇಂಡೀಸ್ ತಂಡ 27 ಓವರ್‌ಗಳಿಗೆ 185 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.
ಏತನ್ಮಧ್ಯೆ , ಭಾರತ ತಂಡದ ಆರಂಭಿಕ ಆಟಗಾರರಾದ ದಿನೇಶ್ ಕಾರ್ತಿಕ್ ಮತ್ತು ಗೌತಮ್ ಗಂಭೀರ್ ಉತ್ತಮ ಆಟದ ಪ್ರದರ್ಶನ ನೀಡಿ 87 ರನ್‌ಗಳನ್ನು ಪೇರಿಸುವುದರೊಂದಿಗೆ ಸುಭದ್ರ ಅಡಿಪಾಯ ಹಾಕುವಲ್ಲಿ ಯಶಸ್ವಿಯಾದರು. ತಂಡದ ನಾಯಕ ಧೋನಿ ಅದ್ಭುತ ಆಟವಾಡುವ ಮೂಲಕ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ ಏಕದಿನ ಸರಣಿ ಪಂದ್ಯದಲ್ಲಿ 2-1 ರಿಂದ ಮುನ್ನಡೆ ಗಳಿಸಿತು.
ವೆಸ್ಟ್‌ಇಂಡೀಸ್ ತಂಡ 185ರನ್‌ಗಳಿಸಿದ ನಂತರ ನಮಗೆ ಗೆಲ್ಲುವ ಅವಕಾಶಗಳಿವೆ ಎಂದು ಭಾವಿಸಲಾಗಿತ್ತು. ಆದರೆ ನಾವು ಮತ್ತಷ್ಟು ಆಕ್ರಮಣಕಾರಿ ಆಟವಾಡಬೇಕಿತ್ತು ಎಂದು ನಾಯಕ ಕ್ರಿಸ್ ಗೇಲ್ ಹೇಳಿದ್ದಾರೆ. |