ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಡೆದ ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯಾವಳಿಯಲ್ಲಿ ಅಂಪೈರ್ ನಿರ್ಧಾರದ ದುರ್ನಡತೆ ತೋರಿದ್ದರಿಂದ ತಮ್ಮನ್ನು ಕ್ಷಮಿಸುವಂತೆ ಇಮ್ರಾನ್ ನಜೀರ್ ಪಿಸಿಬಿ ಅಧ್ಯಕ್ಷರಿಗೆ ಕ್ಷಮಾಪಣೆ ಪತ್ರ ಬರೆದ ಹಿನ್ನೆಲೆಯಲ್ಲಿ ತಮ್ಮನ್ನು ಕ್ಷಮಿಸಿದ್ದಾರೆ ಎಂದು ಇಮ್ರಾನ್ ನಜೀರ್ ತಿಳಿಸಿದ್ದಾರೆ.
ಲಂಡನ್‌ನಲ್ಲಿ ನಡೆದ ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯಾವಳಿಯಲ್ಲಿ ಅಂಪೈರ್ ಅವರ ಎಲ್‌ಬಿಡಬ್ಲೂ ತೀರ್ಪೀನ ವಿರುದ್ಧ ಅಸಮಧಾನ ತೋರಿದ್ದರಿಂದ , ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೂರು ದೇಶಿಯ ಪಂದ್ಯಗಳಿಗೆ ನಿಷೇಧ ಹಾಗೂ ದಂಡವನ್ನು ವಿಧಿಸಿ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಿರಲಿಲ್ಲ.
ಪಾಕಿ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ವಾಸಿಮ್ ಬಾರಿಯವರು ಪಾಕ್‌ಪ್ಯಾಶನ್ .ಕಾಂ ಚಾನೆಲ್‌ಗೆ ಮಾತನಾಡಿ ,ಇಮ್ರಾನ್ ನಜೀರ್ ಅವರು ಏಕದಿನ ಹಾಗೂ ಟ್ವೆಂಟಿ20 ಪಂದ್ಯಾವಳಿಯ ತಂಡಕ್ಕೆ ಆವರನ್ನು ಪರಿಗಣಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.
ಇಂಡಿಯನ್ ಕ್ರಿಕೆಟ್ ಲೀಗ್‌ನ ಲಾಹೋರ್ ಬಾದಶಾಹ್ ತಂಡದಲ್ಲಿದ್ದ ಇಮ್ರಾನ್ ನಜೀರ್ ,ಇತ್ತೀಚೆಗಷ್ಟೆ ಅಧಿಕೃತವಾಗಿ ಪಾಕ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು. |