ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಮೆಂಡಿಸ್ ಬೌಲಿಂಗ್ ಎದುರಿಸುವುದು ಕಠಿಣವಲ್ಲ : ಯುನೂಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೆಂಡಿಸ್ ಬೌಲಿಂಗ್ ಎದುರಿಸುವುದು ಕಠಿಣವಲ್ಲ : ಯುನೂಸ್
PTI
ಶ್ರೀಲಂಕಾ ಕ್ರಿಕೆಟ್ ತಂಡದ ಸ್ಪಿನ್ನರ್ ಅಜಂತಾ ಮೆಂಡಿಸ್ ಅವರ ಬೌಲಿಂಗ್ ಎದುರಿಸುವ ಸಾಮರ್ಥ್ಯ ಪಾಕ್ ತಂಡದ ಆಟಗಾರರಲ್ಲಿದೆ ಎಂದು ಪಾಕ್ ತಂಡದ ನಾಯಕ ಯುನೂಸ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಹೆಚ್ಚಿನ ಪಂದ್ಯಗಳನ್ನು ಆಡುತ್ತಿರುವುದರಿಂದ ಅಜಂತಾ ಮೆಂಡಿಸ್ ಅವರ ಬೌಲಿಂಗ್ ಎದುರಿಸಲು ಕಷ್ಟವಾಗುವುದಿಲ್ಲ. ಏಕೆಂದರೆ ಪಾಕಿಸ್ತಾನನ ತಂಡ ತವರಿನಲ್ಲಿ ಹೆಚ್ಚಿನ ಸ್ಪಿನ್‌ ಬೌಲರ್‌ಗಳನ್ನು ಹೊಂದಿದೆ ಎಂದು ಯುನೂಸ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಹೆಚ್ಚಿನ ಎಡಗೈಸ್ಪಿನ್‌ , ಲೆಗ್‌ಸ್ಪಿನ್ನರ್‌ ಬೌಲರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಪಾಕ್ ತಂಡದ ಆಟಗಾರರಿಗೆ ಸ್ಪಿನ್‌ ಬೌಲಿಂಗ್ ತೊಂದರೆಯಾಗುವುದಿಲ್ಲ .ಶ್ರೀಲಂಕಾದ ಪಿಚ್‌ಗಳು ಸಮತಲವಾಗಿರುವುದರಿಂದ ಹೆಚ್ಚಿನ ಹಿಡಿತ ಹೊಂದಿವೆ. ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯವಿರುವುದರಿಂದ ಹೆಚ್ಚಿನ ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತದೆ.ಪಾಕ್ ಮತ್ತು ಶ್ರೀಲಂಕಾ ತಂಡಗಳು ಪರಸ್ಪರರ ಬಲಹೀನತೆಗಳನ್ನು ಅರಿತುಕೊಂಡಿವೆ ಎಂದು ಯುನೂಸ್ ಅಭಿಪ್ರಾಯಪಟ್ಟಿದ್ದಾರೆ.

ಮಂಡಿನೋವಿನಿಂದ ಬಳಲುತ್ತಿರುವ ಶ್ರೀಲಂಕಾ ತಂಡದ ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರನ್ನು ಪಂದ್ಯದಿಂದ ಕಳೆದುಕೊಂಡಿರುವುದು ನೋವು ತಂದಿದೆ. ಅವರೊಬ್ಬ ಅದ್ಭುತ ಬೌಲರ್.ಮುರಳಿ ಒತ್ತಡದಲ್ಲಿದ್ದರೂ ಎದುರಾಳಿ ತಂಡದ ಆಟಗಾರರೊಂದಿಗೆ ಉತ್ತಮವಾಗಿ ಸಂಭಾಷಿಸುತ್ತಾರೆ. ನಾನು ಕರಾಚಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 300 ರನ್‌ಗಳಿಸಿದ್ದರೂ ನನ್ನ ಜೊತೆ ಹರಟುತ್ತಾ ನಗುತ್ತಾ ಟೈಂಪಾಸ್ ಮಾಡುತ್ತಾರೆ ಎಂದು ಯುನೂಸ್ ಮುರಳಿ ಶೈಲಿಯನ್ನು ಕೊಂಡಾಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ : ಪಿಸಿಬಿ ಮುಖ್ಯಸ್ಥರಿಂದ ಇಮ್ರಾನ್‌ಗೆ ಕ್ಷಮಾದಾನ
ಮತ್ತಷ್ಟು ಆಕ್ರಮಣಕಾರಿ ಆಟ ಅಗತ್ಯವಾಗಿತ್ತು :ಗೇಲ್
ಟೆಸ್ಟ್ : ಟಾಸ್ ಗೆದ್ದು ಪಾಕ್ ಫಿಲ್ಡಿಂಗ್ ಆಯ್ಕೆ
ಭಾರತ ಪೀಡಕ ರಾಷ್ಟ್ರವಲ್ಲ :ಮೊರ್ಗಾನ್
ಕ್ರಿಕೆಟ್: ಉತ್ತರ ವಲಯ ಚಾಂಪಿಯನ್
ಧೋನಿ ಸಿಡಿಲಬ್ಬರ: 3ನೇ ಏಕದಿನದಲ್ಲಿ ಭಾರತಕ್ಕೆ ರೋಚಕ ಜಯ