ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಟೆಸ್ಟ್ ಕ್ರಿಕೆಟ್‌ನಿಂದ ವ್ಯಾಸ್ ನಿವೃತ್ತಿ ನಿರ್ಧಾರ : ಮೆಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೆಸ್ಟ್ ಕ್ರಿಕೆಟ್‌ನಿಂದ ವ್ಯಾಸ್ ನಿವೃತ್ತಿ ನಿರ್ಧಾರ : ಮೆಲ್
ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ 35 ವರ್ಷ ವಯಸ್ಸಿನ ಚಮಿಂದಾ ವ್ಯಾಸ್, ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಅಶಾಂತಾ ಡೆ ಮೆಲ್ ಹೇಳಿದ್ದಾರೆ.

ಮುಂಬರುವ 2011ರಲ್ಲಿ ನಡೆಯುವ ವಿಶ್ವಕಪ್ ತಮ್ಮ ಗುರಿಯಾಗಿದ್ದು 15 ವರ್ಷಗಳ ಯಶಸ್ವಿ ಟೆಸ್ಟ್‌ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಏಕದಿನ ಪಂದ್ಯಗಳತ್ತ ಗಮನಹರಿಸುವ ನಿರ್ಧಾರ ಚಮಿಂದಾ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಟ್ವೆಂಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಆಡಲು ಸಿದ್ಧವಿದ್ದು,ಟೆಸ್ಟ್ ಪಂದ್ಯಗಳಿಂದ ದೂರವಿರುವುದಾಗಿ ಚಮಿಂದಾ ತಮಗೆ ಹೇಳಿದ್ದಾರೆ ಎಂದು ಡೆ ಮೆಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಚಮಿಂದಾ ವ್ಯಾಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದ್ದು, ಅವರ ದೈಹಿಕ ಸಾಮರ್ಥ್ಯ ಮತ್ತು ವಯಸ್ಸಿನ ಆಧಾರದ ಮೇಲೆ ಅವರನ್ನು ಯಾವ ವಿಧದ ಪಂದ್ಯಗಳಿಗೆ ಆಯ್ಕೆ ಮಾಡಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಆದರೆ ಮುಂಬರುವ 2011ರ ವಿಶ್ವಕಪ್‌ನಲ್ಲಿ ನಮ್ಮ ತಂಡಕ್ಕೆ ಉತ್ತಮ ಕೊಡುಗೆ ನೀಡಲಿದ್ದಾರೆ ಎಂದು ಶ್ರೀಲಂಕಾ ತಂಡದ ನಾಯಕ ಕುಮಾರ್ ಸಂಗಕ್ಕಾರಾ ಹೇಳಿದ್ದಾರೆ.

ಶ್ರೀಲಂಕಾ ತಂಡದ ಆಟಗಾರ ಚಮಿಂದಾ ವ್ಯಾಸ್ ಇಲ್ಲಿಯವರೆಗೆ ತಮ್ಮ ಕ್ರಿಕೆಟ್ ಜೀವನದಲ್ಲಿ 110 ಟೆಸ್ಟ್ ಪಂದ್ಯಗಳನ್ನಾಡಿ 354 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೆಂಡಿಸ್ ಬೌಲಿಂಗ್ ಎದುರಿಸುವುದು ಕಠಿಣವಲ್ಲ : ಯುನೂಸ್
ಪಾಕ್ : ಪಿಸಿಬಿ ಮುಖ್ಯಸ್ಥರಿಂದ ಇಮ್ರಾನ್‌ಗೆ ಕ್ಷಮಾದಾನ
ಮತ್ತಷ್ಟು ಆಕ್ರಮಣಕಾರಿ ಆಟ ಅಗತ್ಯವಾಗಿತ್ತು :ಗೇಲ್
ಟೆಸ್ಟ್ : ಟಾಸ್ ಗೆದ್ದು ಪಾಕ್ ಫಿಲ್ಡಿಂಗ್ ಆಯ್ಕೆ
ಭಾರತ ಪೀಡಕ ರಾಷ್ಟ್ರವಲ್ಲ :ಮೊರ್ಗಾನ್
ಕ್ರಿಕೆಟ್: ಉತ್ತರ ವಲಯ ಚಾಂಪಿಯನ್